ಭಾರತದಲ್ಲಿ 7,000 ಕಿ.ಮೀ ಉದ್ದದ ಹೈ ಸ್ಪೀಡ್ ಬುಲೆಟ್ ರೈಲು-ಭಾರತ -ಜಪಾನ್ ಮಧ್ಯೆ ಪರಸ್ಪರ ಒಪ್ಪಂದ
'ಮೇಕ್ ಇನ್ ಇಂಡಿಯಾ' ಮೂಲಕ ಈ ಯೋಜನೆ ಅಭಿವೃದ್ಧಿ

ಟೋಕಿಯೋ (ಜಪಾನ): ಮುಂಬರುವ ದಿನಗಳಲ್ಲಿ ಭಾರತದಲ್ಲಿ 7,000 ಕಿ.ಮೀ ಉದ್ದದ ಹೈ ಸ್ಪೀಡ್ ಬುಲೆಟ್ ರೈಲು ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ಬುಲೆಟ್ ರೈಲು ಭಾರತ ಮತ್ತು ಜಪಾನ್ ನಡುವಿನ ಪ್ರಮುಖ ಯೋಜನೆಯಾಗಿದ್ದು, ಇದರ ಮುಂದುವರೆದ ಭಾಗವಾಗಿ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸ್ಥಳೀಯ ಪತ್ರಿಕೆಯೊಂದಿಗೆ ನೀಡಿದ ಸಂದಶ೯ನದಲ್ಲಿ ಈ ವಿಷಯ ತಿಳಿಸಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಮೂಲಕ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು . ನಮ್ಮ ಈ ಯೋಜನೆಯಲ್ಲಿ ಜಪಾನಿನ ಕಂಪನಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಸ್ವಾಗತಿಸುವದಾಗಿ ಹೇಳಿದರು.

ಹೈಸ್ಪೀಡ್ ರೈಲಿನ ಜೊತೆಗೆ ಬಂದರುಗಳು, ವಾಯುಯಾನ, ಹಡಗು ನಿರ್ಮಾಣ, ರಸ್ತೆ ಸಾರಿಗೆ, ರೈಲ್ವೆಗಳು ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಇತರ ಸಾರಿಗೆ ಕ್ಷೇತ್ರಗಳಲ್ಲು ಭಾರತ-ಜಪಾನ್ ಜಂಟಿಯಾಗಿ ಯೋಜನೆ ಮುನ್ನೆಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಜಪಾನ್ನ ತಾಂತ್ರಿಕ ಪ್ರಗತಿ, ಭಾರತದ ವಿಸ್ತಾರ, ಉತ್ಪಾದನೆ ಮತ್ತು ನಾವೀನ್ಯತೆ ಶಕ್ತಿಯೊದಿಗೆ ಸೇರಿ, ಎರಡೂ ದೇಶಗಳಿಗೆ ಅಪಾರ ಮೌಲ್ಯವನ್ನು ಸೃಷ್ಟಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.


