DistrictKarnatakaPoliticalShivamoggaSpecial Stories

ರಾಜ್ಯ ಒಳಮೀಸಲಾತಿ ವರ್ಗೀಕರಣ ನೀತಿ-ಬಂಜಾರ ಸಮುದಾಯಕ್ಕೆ ಅನ್ಯಾಯ-ಮಾಜಿ ಶಾಸಕ ಅಶೋಕ್‌ ನಾಯಕ್‌ ನೇತೃತ್ವದಲ್ಲಿ ಧರಣಿ

ಶಿವಮೊಗ್ಗ ಗ್ರಾಮೀಣ ಮಾಜಿ ಶಾಸಕ ಅಶೋಕ್ ನಾಯಕ್ ನೇತೃತ್ವದಲ್ಲಿ ನಡೆದಿರುವ ಧರಣಿಯಲ್ಲಿ ಶಿವಮೊಗ್ಗ, ಶಿಕಾರಿಪುರ ತಾಲೂಕಿನ ತಾಂಡಾದ ಬಂಜಾರ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

ಕೇಂದ್ರ ಸರ್ಕಾರ ಜಾತಿಗಣತಿ ಆರಂಭಿಸುವವರೆಗೂ ರಾಜ್ಯದ ಒಳಮೀಸಲಾತಿ ವರ್ಗೀಕರಣ ಆದೇಶ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಬಂಜಾರ ಸಮುದಾಯದ ವಿವಿಧ ಸಂಘಟನೆಗಳು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಕಾಲ ಧರಣಿ ಆರಂಭಿಸಿದೆ.

ಒಳಮೀಸಲಾತಿ ವರ್ಗೀಕರಣ ನೀತಿಯಲ್ಲಿ ಅವೈಜ್ಞಾನಿಕ ವಾಗಿದ್ದು, ಇದರಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಂಡಿದೆ.

ಶಿವಮೊಗ್ಗ ಗ್ರಾಮೀಣ ಮಾಜಿ ಶಾಸಕ ಅಶೋಕ್ ನಾಯಕ್ ನೇತೃತ್ವದಲ್ಲಿ ನಡೆದಿರುವ ಧರಣಿಯಲ್ಲಿ ಶಿವಮೊಗ್ಗ, ಶಿಕಾರಿಪುರ ತಾಲೂಕಿನ ತಾಂಡಾದ ಬಂಜಾರ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

ಧರಣಿ ನಿರತ ಸ್ಥಳದಲ್ಲಿ ನ್ಯೂಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಮಾಜಿ ಶಾಸಕ ಅಶೋಕ್ ನಾಯಕ್, ಒಳಮೀಸಲಾತಿ ವರ್ಗೀಕರಣದಲ್ಲಾದ ಲೋಪದೋಷ ಸರಿಪಡಿಸಿ ನ್ಯಾಯ ಒದಗಿಸುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಯಿಲ್ಲ ಎಂದು ಹೇಳಿದರು. ಈಗ ಶಿವಮೊಗ್ಗದಲ್ಲಿ ಹೋರಾಟ ಶುರುವಾಗಿದೆ, ಮುಂದೆ ಚಿತ್ರದುರ್ಗ, ದಾವಣಗೆರೆ , ಸೇರಿದಂತೆ ರಾಜ್ಯಾದ್ಯಂತ ಬಂಜಾರ ಸಮುದಾಯ ಪ್ರತಿಭಟನೆ ನಡೆಸಲಿದೆ ಎಂದಿದ್ದಾರೆ.

ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಆರಂಭಗೊಂಡಿರುವ ಬಂಜಾರ ಸಮುದಾಯದ ಪ್ರತಿಭಟನಾ ಧರಣಿಯಲ್ಲಿ ಸೆಪ್ಟೆಂಬರ್ 20 ರವರೆಗೂ ಸರಣಿ ಪ್ರಕಾರ ವಿವಿಧ ತಾಂಡಾಗಳ ಜನರು ಪಾಲ್ಗೊಳ್ಳುತ್ತಿದ್ದು ಸಮುದಾಯದ ಶಕ್ತಿಪ್ರದರ್ಶನ ಮಾಡಲಿದ್ದಾರೆ ಎಂದರು.

Leave a Reply

Your email address will not be published. Required fields are marked *

Back to top button