
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಶುಕ್ರವಾರದಂದು ನಡೆದ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ಮತದಾರ ಅಧಿಕಾರ ಯಾತ್ರೆ’ ವೇಳೆ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿ ಹೀರಾಬೆನ್ ಮೋದಿ ಅವರ ಬಗ್ಗೆ ಅವಾಚ್ಯ ಪದ ಬಳಸಿ ನಿಂದಿಸಿದ್ದ ಪರಿಣಾಮ ಎರಡು ಪಕ್ಷಗಳ ಕಾಯ೯ಕತ೯ರ ಮಧ್ಯೆ ಹೊಡೆದಾಟ ನಡೆದ ಘಟನೆ ನಡೆದಿದೆ.


ಎರಡು ಪಕ್ಷಗಳಕಾಯ೯ಕತ೯ರು ತಾವು ಹಿಡಿದುಕೊಂಡಿದ್ದ ಪಕ್ಷದ ಧ್ವಜದ ಬಡಿಗೆಗಳಿಂದಲೇಹೊಡೆದಾಡಿಕೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ತಾಯಿಯನ್ನು ನಿಂದಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೋದಿ ಅವರ ತಾಯಿಯನ್ನು ನಿಂದಿಸಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೇ ಬಿಜೆಪಿ ಕಾರ್ಯಕರ್ತರು ಪಾಟ್ನಾದಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರೂ ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಬಂದ ಬಿಜೆಪಿ ಕಾಯ೯ಕತ೯ರು ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಮಾತು ಮಾತಿಗೆ ಬೆಳೆದು ಹಿಂಸಾಚಾರಾಕ್ಕೆ ತಿರುಗಿತು ಎಂದು ಮೂಲಗಳು ತಿಳಿಸಿವೆ.


ಅಮಿತ್ ಶಾ ಕಿಡಿ
ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ಬಗ್ಗೆ ಅವಾಚ್ಯ ಪದ ಬಳಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರವಾಗಿ ಖಂಡಿಸಿದ್ದಾರೆ . ಈವರೆಗೆ ಪ್ರಧಾನಿ ಮೋದಿ ಅವರನ್ನು ನಿಂದಿಸುತ್ತಿದ್ದ ಕಾಂಗ್ರೆಸ್ , ಈಗ ಅವರ ದಿವಂಗತ ತಾಯಿಯನ್ನೂ ನಿಂದಿಸಲು ಮುಂದಾಗಿದೆ ಎಂದರು. ರಾಹುಲ್ ಗಾಂಧಿ ಅವರು ಈ ಕೂಡಲೇ ದೇಶದ ಜನರ ಕ್ಷಮೆ ಕೋರಬೇಕು” ಎಂದು ಒತ್ತಾಯಿಸಿದ್ದಾರೆ.




