National
Updated News -Cloudburst ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ, ಭೂಕುಸಿತ-ಹನ್ನೊಂದು ಜನರ ದುಮ೯ರಣ
ಒಂದೆ ಕುಟುಂಬದ ಏಳು ಜನರ ಸಾವು

ಕಾಶ್ಮೀರ: ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯ ರಾಜಘಡ ಹಾಗೂ ರಿಯಾಸಿ ಜಿಲ್ಲೆಯಲ್ಲಿ ಊಂಟಾದ ಮೇಘಸ್ಪೋಟ ಹಾಗೂ ಭೂ ಕುಸಿತದ ಪರಿಣಾಮ ಹನ್ನೊಂದು ಜನರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ರಿಯಾಸಿ ಜಿಲ್ಲೆಯ ಮೊಹೊರ್ ಪ್ರದೇಶದ ಬದ್ದರ್ ಗ್ರಾಮದಲ್ಲಿ ಭೂಕುಸಿತಕ್ಕೆ ಮನೆಯೊಂದು ಸಂಪೂಣ೯ ನೆಲಸಮವಾಗಿದ್ದರ ಪರಿಣಾಮ ಮನೆಯಲ್ಲಿದ್ದ ಒಂದೆ ಕುಟುಂಬದ ಏಳು ಜನರು ಚಿರನಿದ್ರೆಗೆ ಜಾರಿದ್ದಾರೆ.
ಅವಶೇಷಗಳಡಿ ಸಿಲುಕಿದ್ದ ಮೃತ ದೇಹಗಳನ್ನು ತೆಗೆಯಲಾಗಿದೆ. ಮೃತರನ್ನು ನಜೀರ್ ಅಹ್ಮದ ಅವರ ಮಕ್ಕಳಾದ ಬಿಲಾಲ್ ಅಹ್ಮದ್ ಮೊಹಮ್ಮದ್ ಮುಸ್ತಾಫಾ, ಮೊಹಮ್ಮದ್ ಆದಿಲ್, ಮೊಹಮ್ಮದ್ ಮುಬಾರಕ ಮತ್ತು ವಾಸಿಂ ಎಂದು ಗುರುತಿಸಲಾಗಿದೆ.


