"ಶಿಕ್ಷಣ ಗುಣಮಟ್ಟ ಉಳಿಸಿ ಅಭಿಯಾನ"DistrictKarnatakaNationalPoliticalShivamoggaSpecial Stories
Trending

ಎಸ್‌ಎಸ್‌ಎಲ್‌ಸಿ, ಪಿಯುಸಿ ತೇರ್ಗಡೆ ಅಂಕ ಶೇ33ಕ್ಕೆ ಇಳಿಕೆ ವಿವಾದ-ತಜ್ಞರ ಸಮಿತಿ ರಚನೆ ಮಾಡಿದ್ದರೇ ವರದಿ ಬಹಿರಂಗ ಪಡಿಸಲಿ-ತಿಮ್ಮಯ್ಯ ಪುರ್ಲೆ ಆಗ್ರಹ

SSLC , PUC ಪರೀಕ್ಷೆಯಲ್ಲಿ ತೇರ್ಗಡೆಗೆ ಕೇವಲ 33%ಅಂಕ ಇಳಿಕೆ ನಿಗದಿ ಮಾಡುವ ಮುನ್ನ ಶಿಕ್ಷಣ ತಜ್ಞರ ಸಮಿತಿ ಅಥವಾ ಉನ್ನತ ಸಮಿತಿಯನ್ನು ರಚನೆ ಮಾಡಿತ್ತಾ? ಎಂದು ಶಿಕ್ಷಣ ತಜ್ಞ ಹಾಗು ಪಿಯೂಸಿ ಉಪನ್ಯಾಸಕ ಸಂಘದ ರಾಜ್ಯ ಗೌರವಾಧ್ಯಕ್ಷರಾದ ತಿಮ್ಮಯ್ಯ ಪುರ್ಲೆ ಪ್ರಶ್ನಿಸಿದ್ದಾರೆ.

ತೇರ್ಗಡೆಗೆ ಕನಿಷ್ಟ ಅಂಕ ನಿಗದಿ ಮಾಡಿರುವ ರಾಜ್ಯ ಸರ್ಕಾರವು ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದೆ ಎಂಬುದು ಈಗ ಖಚಿತಗೊಂಡಿದೆ. ಇಂತಹ ಮಹತ್ವದ ತೀರ್ಮಾನ ಮಾಡುವ ಮುನ್ನ ಕನಿಷ್ಟ ಮಾನದಂಡಗಳನ್ನು ಸಿದ್ದರಾಮಯ್ಯ ಸರ್ಕಾರ ಅನುಸರಿಸಿಲ್ಲ ಎಂಬುದಕ್ಕೆ ಈಗ ಪುರಾವೆ ಸಿಕ್ಕಿದೆ.

ನ್ಯೂ ಇಂಡಿಯಾ ಕನ್ನಡ ಪತ್ರಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ತೇರ್ಗಡೆ ಅಂಕ ಇಳಿಕೆ ತೀರ್ಮಾನ ಮಾಡುವ ಮುನ್ನ ಶಿಕ್ಷಣ ತಜ್ಞರ ಅಭಿಪ್ರಾಯ ಪಡದೇ ಇಲ್ಲ ಎಂಬ ಆಘಾತಕಾರಿ ಸುದ್ದಿ ಈಗ ಬಹಿರಂಗಗೊಂಡಿದೆ.

ಸರ್ಕಾರದ ಈ ಅವೈಜ್ಞಾನಿಕ ನಿರ್ಧಾರದ ವಿರುದ್ದ “ನ್ಯೂಇಂಡಿಯಾ ಕನ್ನಡ ಡಿಜಿಟಲ್‌ ಪತ್ರಿಕೆ” ಹಮ್ಮಿಕೊಂಡಿರುವ “ಶಿಕ್ಷಣ ಗುಣಮಟ್ಟ ಉಳಿಸಿ” ಅಭಿಯಾನದ ಅಂಗವಾಗಿ ಈ ಕುರಿತು ರಾಜ್ಯದ ಪ್ರಜ್ಞಾವಂತ ನಾಗರಿಕರು ಹಾಗು ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ.

ನಮ್ಮ ಈ ಅಭಿಯಾನದ ಮೂರನೇ ಭಾಗವಾಗಿ ನಾಡಿನ ಖ್ಯಾತ ಶಿಕ್ಷಣ ತಜ್ಞ ಹಾಗು ಪಿಯೂಸಿ ಉಪನ್ಯಾಸಕ ಸಂಘದ ರಾಜ್ಯ ಗೌರವಾಧ್ಯಕ್ಷರಾದ ತಿಮ್ಮಯ್ಯ ಪುರ್ಲೆ ಅವರು ತಮ್ಮ ಅನಸಿಕೆಯನ್ನು ಹಂಚಿಕೊಂಡಿದ್ದಾರೆ. ತಿಮ್ಮಯ್ಯ ಪುರ್ಲೆ ಅವರ ಅಭಿಪ್ರಾಯದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಖ್ಯಾತ ಶಿಕ್ಷಣ ತಜ್ಞ ಹಾಗು ಪಿಯೂಸಿ ಉಪನ್ಯಾಸಕ ಸಂಘದ ರಾಜ್ಯ ಗೌರವಾಧ್ಯಕ್ಷರಾದ ತಿಮ್ಮಯ್ಯ ಪುರ್ಲೆ

SSLC , PUC ಪರೀಕ್ಷೆಯಲ್ಲಿ ತೇರ್ಗಡೆಗೆ ಕೇವಲ 33%ಅಂಕ ಇಳಿಕೆ ನಿಗದಿ ಮಾಡುವ ಮುನ್ನ ಶಿಕ್ಷಣ ತಜ್ಞರ ಸಮಿತಿ ಅಥವಾ ಉನ್ನತ ಸಮಿತಿಯನ್ನು ರಚನೆ ಮಾಡಿತ್ತಾ? ಎಂದು ಶಿಕ್ಷಣ ತಜ್ಞ ಹಾಗು ಪಿಯೂಸಿ ಉಪನ್ಯಾಸಕ ಸಂಘದ ರಾಜ್ಯ ಗೌರವಾಧ್ಯಕ್ಷರಾದ ತಿಮ್ಮಯ್ಯ ಪುರ್ಲೆ ಪ್ರಶ್ನಿಸಿದ್ದಾರೆ.

ಆಕಸ್ಮಾತ ಈ ತರಹ ಸಮಿತಿ ರಚಿಸಿ, ಅಭಿಪ್ರಾಯ ಸಂಗ್ರಹಣೆಯನ್ನು ಮಾಡಲಾಗಿದ್ದರೇ ಅದರ ವರದಿಯನ್ನು ಸರ್ಕಾರ ಈ ಕೂಡಲೇ ಬಹಿರಂಗಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ದುಡಿದವರು, ಶಿಕ್ಷಣ ತಜ್ಞರುಗಳು, ಮಕ್ಕಳ ಮಾನಸಿಕ ಮನೋಭಾವ ತಿಳಿದವರು, ಪ್ರಜ್ಞಾವಂತ ಸಾಹಿತಿಗಳು ಪಠ್ಯಪುಸ್ತಕ ರಚನಾ ತಜ್ಞರುಗಳು ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರದ ಈ ನಿರ್ಧಾರ ಭವಿಷ್ಯದಲ್ಲಿ ಪ್ರತಿಭಾವಂತ ಮಕ್ಕಳ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ತಿಮ್ಮಯ್ಯ ಪುರ್ಲೆ ಆತಂಕ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ಪ್ರಗತಿ, ಅರ್ಹತೆ ಮಾನದಂಡವನ್ನೇ ಬದಲಾಯಿಸುವಂತಹ ನಿಲುವನ್ನು ತಾಳಲು ಸರ್ಕಾರಕ್ಕೆ ಶಿಫಾರಸು ಮಾಡಲು ಪ್ರಜ್ಞಾವಂತ ಶಿಕ್ಷಣ ತಜ್ಞರು ಶಿಫಾರಸ್ಸು ಮಾಡಲು ಸಾಧ್ಯವಿಲ್ಲ ಎಂದು ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.

ಈ ತರಹ ತೇರ್ಗಡೆಗೆ ಕನಿಷ್ಟ ಅಂಕ ನಿಗದಿ ಮಾಡಿದರೇ, ಉಪನ್ಯಾಸಕರು ಪಾಠ ಮಾಡೋದ್ಯಾಕೆ? ಪರೀಕ್ಷೆಗಳು ಯಾಕೆ ಬೇಕು?

ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಕಲಿತು ಅರ್ಹತೆ ಪಡೆಯದೇ ಹೋದಲ್ಲಿ ಗುಣಮಟ್ಟದ ಪದವೀಧರನಾಗಲು ಹೇಗೆ ಸಾಧ್ಯ? ಎಂದು ಶಿಕ್ಷಣ ತಜ್ಞ ತಿಮ್ಮಯ್ಯ ಪುರ್ಲೆ ಆತಂಕದಿಂದಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪದವಿಗಳಿಗೆ ವಿದ್ಯಾರ್ಥಿಗಳ ಕೊರತೆ ಇದೆ ಅದನ್ನ ನೀಗಿಸಲು ಈ ರೀತಿ ಮಾಡಿದ್ದಾಗಿ ಸರ್ಕಾರದ ಮೊಂಡುವಾದ ನಿಜಕ್ಕೂ ಖೇದಕರ ಸಂಗತಿ ಎಂದು ಹೇಳಿದ್ದಾರೆ.

ಸ್ವತಃ ಉಪನ್ಯಾಸಕರಾಗಿ ಸುಧೀರ್ಘ ಸೇವೆ ಸಲ್ಲಿಸಿರುವ ತಿಮ್ಮಯ್ಯ ಪುರ್ಲೆ ಅವರು ತಮ್ಮ ಅಗಾಧ ಅನುಭವ ಮೇರೆಗೆ, ಹೇಳುವ ಪ್ರಕಾರ, ಸರ್ಕಾರದ ಪ್ರಸ್ತುತ ಈ ನಿರ್ಧಾರವು, ಖಾಸಗಿ ಕಾಲೇಜುಗಳ ಮಾಫಿಯಾಗೆ ಪೂರಕವಾಗಬಹುದೆಂಬ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Back to top button