ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ಸಿದ್ದರಾಮಯ್ಯ-ಬಿ ವೈ ವಿಜಯೇಂದ್ರ ಹೋರಾಟಕ್ಕೆ ಸಿಕ್ಕ ಭರ್ಜರಿ ಗೆಲುವು-ರೈತ ನಾಯಕನಾಗಿ ಹೊರಹೊಮ್ಮಿದ ರಾಜ್ಯ ಬಿಜೆಪಿ ಅಧ್ಯಕ್ಷ
ರಾಜ್ಯ ಸರ್ಕಾರವು ರೈತರ ಸಂಘಟಿತ ಹೋರಾಟಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ 3300 ರೂ. ದರ ನಿಗದಿ ಮಾಡಿರುವದನ್ನು ಸ್ವಾಗತಿಸಿರುವ ಬಿ ವೈ ವಿಜಯೀಂದ್ರ, ರೈತರು ಮುಷ್ಕರವನ್ನು ಕೈ ಬಿಟ್ಟಿರುವುದು ಸಮಂಜಸವಾಗಿದೆ ಎಂದು ಹೇಳಿದ್ದಾರೆ.

ದರ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಹೋರಾಟ ಆರಂಭಿಸಿದ ದಿನದಿಂದಲೂ ರೈತರ ಪರವಾಗಿ ಬಂಡೆಗಲ್ಲಿನಂತೇ ನಿಂತು ರೈತರಿಗೆ ಬಲ ತುಂಬುವಲ್ಲಿ ಯಶಸ್ವಿಯಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ವಿಜಯದ ನಗೆ ಬೀರಿದ್ದಾರೆ.
ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದೇ ರೈತರ ಬೆನ್ನಿಗೆ ಟೊಂಕ ಕಟ್ಟಿ ನಿಂತಿದ್ದ ಅವರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ.

ರಾಜ್ಯ ಸರ್ಕಾರವು ರೈತರ ಸಂಘಟಿತ ಹೋರಾಟಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ 3300 ರೂ. ದರ ನಿಗದಿ ಮಾಡಿರುವದನ್ನು ಸ್ವಾಗತಿಸಿರುವ ಬಿ ವೈ ವಿಜಯೀಂದ್ರ, ರೈತರು ಮುಷ್ಕರವನ್ನು ಕೈ ಬಿಟ್ಟಿರುವುದು ಸಮಂಜಸವಾಗಿದೆ ಎಂದು ಹೇಳಿದ್ದಾರೆ.
ಅನ್ನದಾತರ ಬೆಂಬಲಕ್ಕೆ ನಿಂತ ವಿಜಯೇಂದ್ರ
ರೈತ ಹೋರಾಟಕ್ಕೆ ಸಿಕ್ಕ ಜಯ ಎಂದ ಯುವನಾಯಕ

ದೇಶದ ಬೆನ್ನೆಲುಬು ರೈತ, ‘ಅನ್ನದಾತ ಮುನಿದರೆ ಸರ್ಕಾರ ನಿದ್ರೆಗೆ ಜಾರಲು ಸಾಧ್ಯವೇ ಇಲ್ಲ’ ಎಂಬ ಇತಿಹಾಸ ಮರುಕಳಿಸಿದೆ ಎಂದು ಬಿ ವೈ ವಿಜಯೀಂದ್ರ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ನಡೆದ ಕಬ್ಬು ಬೆಳೆಗಾರ ರೈತರ ಸಂಘಟಿತ ಹೋರಾಟಕ್ಕೆ ಕೊನೆಗೆ ಜಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹೋರಾಟದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ, ರೈತನಾಯಕ ಬಿ ಎಸ್ ಯಡಿಯೂರಪ್ಪ ಅವರ ಪುತ್ರನಾಗಿ ಭಾಗವಹಿಸಿ ರೈತ ಹೋರಾಟಕ್ಕೆ ದನಿಗೂಡಿಸಿದ ಸಂದರ್ಭ ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೀಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ರೈತರ ಹಿತಕ್ಕಾಗಿ ನಮ್ಮ ಸ್ಪಂದನೆ ಸದಾ ಮುಂದುವರೆಯಲಿದೆ ಎಂದಿರುವ ಅವರು, ರೈತರು ಹೋರಾಟಕ್ಕಿಳಿಯುವ ಸಂದರ್ಭ ಸೃಷ್ಟಿಸದೇ ರೈತರ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸುವುದು ಅಧಿಕಾರದಲ್ಲಿರುವ ಸರ್ಕಾರಗಳ ಕರ್ತವ್ಯ ಎಂದು ಕಿವಿ ಮಾತು ಹೇಳಿದ್ದಾರೆ.

ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಈವರೆಗೂ ಅನುಸರಿಸಿದ ಉಪೇಕ್ಷೆ ಧೋರಣೆಗಳನ್ನು ಮುಂದಾದರೂ ನಿಲ್ಲಿಸಲಿ ಎಂದು ಹೇಳಿದ್ದಾರೆ.
ರೈತರ ನಿವೇದನೆಗಳಿಗೆ ಸರ್ಕಾರ ಸ್ಪಂದಿಸಲಿ
‘ವಿಶೇಷ ರೈತ ನೆರವು ಘಟಕ’ ಸ್ಥಾಪನೆಗೆ ವಿಜಯೇಂದ್ರ ಆಗ್ರಹ

ಮೇಲಿಂದ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿವೆ, ರೈತರ ಸೂಕ್ಷ್ಮ ಭಾವನೆಗಳಿಗೆ ಸ್ಪಂದಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ರೈತರ ನಿವೇದನೆಗಳಿಗೆ ಸ್ಪಂದಿಸುವ ‘ವಿಶೇಷ ರೈತ ನೆರವು ಘಟಕ’ವನ್ನು ಸ್ಥಾಪಿಸಲಿ ಎಂದು ಬಿ ವೈ ವಿಜಯೀಂದ್ರ ಒತ್ತಾಯಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ


