ಕ್ರಿಕೆಟಿಗ್ ಸ್ಪಿನ್ನರ್ ಆರ್.ಅಶ್ವಿನ್ ಐಪಿಎಲ್ ಪಂದ್ಯಾವಳಿಗಳಿಗೆ ವಿದಾಯ ಹೇಳಿದ್ದಾರೆ. ಅನಿಲ್ ಕುಂಬ್ಳೆ ನಂತರ ಟೆಸ್ಟ್ ನಲ್ಲಿ 500 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಆರ್.ಅಶ್ವಿನ್ ಇಂದು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಈಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು , ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭವಿರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಮುಕ್ತಾಯಗೊಳ್ಳುತ್ತದೆ ಎಂದಿದ್ದಾರೆ. ಇಷ್ಟು ವರ್ಷಗಳ ಎಲ್ಲಾ ಅದ್ಭುತ ನೆನಪುಗಳು ಮತ್ತು ಸಂಬಂಧಗಳಿಗಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮತ್ತು ಮುಖ್ಯವಾಗಿ ಬಿಸಿಸಿಐಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿರುವ ಅವರು, ನನ್ನ ಮುಂದೆ ಇರುವುದನ್ನು ಆನಂದಿಸಲು ಮತ್ತು ಹೆಚ್ಚಿನದನ್ನು ಪಡೆಯಲು ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
221 ಐಪಿಎಲ್ ಪಂದ್ಯಾವಳಿಗಳನ್ನು ಆಡಿರುವ ಆರ್.ಅಶ್ವಿನ್ ತಮ್ಮ ಸ್ಪಿನ್ ಮೋಡಿಯ ಮೂಲಕ 187 ವಿಕೆಟ್ ಪಡೆದಿದ್ದರು. 5 ತಂಡಗಳ ಪರವಾಗಿ ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಚೆನ್ನೈ, ಪಂಜಾಬ್, ದೆಹಲಿ, ರಾಜಸ್ಥಾನ್ ರಾಯಲ್ಸ್ ಮತ್ತು ಪುಣೆ ತಂಡಗಳನ್ನು ಅವರು ಪ್ರತಿನಿಧಿಸಿದ್ದರು.
ಐಪಿಎಲ್ ಪಂದ್ಯಾವಳಿಗಳಲ್ಲಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಆರ್.ಅಶ್ವಿನ್ 5ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಚಾಹಲ್, ಭುವನೇಶ್ವರ ಕುಮಾರ್, ಸುನೀಲ್ ನರೇನ್, ಪಿಯೂಷ್ ಚಾವ್ಲಾ ಇದ್ದಾರೆ.