Dharmstala: ಸಾಮೂಹಿಕ ಅಂತ್ಯಕ್ರಿಯೆ ಆರೋಪಗಳ ಬಗ್ಗೆ ಎನ್‌ಐಎ ತನಿಖೆಯ ಅಗತ್ಯವಿಲ್ಲ-ಸಿಎಂ ಸಿದ್ದರಾಮಯ್ಯ
ತನಿಖೆ ನಡೆಸಿ ಎಸ್‌ಐಟಿ ತನಿಖೆಯ ಸಾಕ್ಷಾತ ವರದಿ ನೀಡಲಿದೆ

ಮೈಸೂರು: ಧರ್ಮಸ್ಥಳದಲ್ಲಿ ನಡೆದಿದೆ ಎಂದು ಹೇಳಲಾಗುವ ಸಾಮೂಹಿಕ ಅಂತ್ಯಕ್ರಿಯೆ ಆರೋಪಗಳ ಬಗ್ಗೆ ಎನ್‌ಐಎ ತನಿಖೆಯ ಅಗತ್ಯವಿಲ್ಲ . ಎಸ್‌ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ತನಿಖೆ ನಡೆಸಿ ಎಸ್‌ಐಟಿ ತನಿಖೆಯ ಸಾಕ್ಷಾತ ವರದಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಧರ್ಮಸ್ಥಳದ ಮೇಲೆ ಆರೋಪಗಳು ಕೇಳಿ ಬಂದಾಗ ಜನರಲ್ಲಿ ಅನುಮಾನವನ್ನು ಹೋಗಲಾಡಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ . ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ.

ಇನ್ನು ಬಿಜೆಪಿಯವರು ಎಲ್ಲದರಲ್ಲು ರಾಜಕೀಯ ಮಾಡುತ್ತಿದ್ದಾರೆ ಎಂದ ಅವರು, ಧಮ೯ಸ್ಥಳಕ್ಕೆ ಹೋದರೆ , ಹೋಗಲಿ ಎಂದರು. ಆರಂಭದಲ್ಲಿ ಎಸ್‌ಐಟಿ ರಚಿಸಿದಾಗ ಸ್ವಾಗತಿಸಿದ್ದ ಬಿಜೆಪಿ ಈಗ ಮತ ರಾಜಕಾರಣ ಮಾಡಲು ಮುಂದಾಗಿದೆ ಎಂದು ಟೀಕಿಸಿದರು
ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ‘ಧರ್ಮಸ್ಥಳ ಸತ್ಯ ಯಾತ್ರೆ :

ಧರ್ಮಸ್ಥಳ ಕ್ಷೇತ್ರ ವಿರುದ್ಧ ‘ಪಿತೂರಿ ಮತ್ತು ಅಪಪ್ರಚಾರದ’ ಹಿಂದಿನ ವ್ಯಕ್ತಿಗಳನ್ನು ಮತ್ತು ವಿದೇಶಿ ಫಂಡಿಂಗ್ ಅನ್ನು ಕಂಡುಹಿಡಿಯಲು, ಎನ್‌ಐಎ ತನಿಖೆ ನಡೆಸಬೇಕೆಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ‘ಧರ್ಮಸ್ಥಳ ಸತ್ಯ ಯಾತ್ರೆ’ಯು ಭಾನುವಾರದಂದು ಹಾಸನದಿಂದ ಆರಂಭಗೊಂಡಿದೆ. ಧರ್ಮದ ಪರವಾಗಿ ನಿಲ್ಲಬೇಕು ಮತ್ತು ಸತ್ಯ ಗೆಲ್ಲಬೇಕು ಎಂಬುದು ಸೇರಿದಂತೆ ಸಮಾಜ ವಿರೋಧಿ ಶಕ್ತಿಗಳು ಪಿತೂರಿ ನಡೆಸಿವೆ ಎಂದು ನಿಖೀಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದೇ ವೇಳೆ ಬಿಜೆಪಿ ಸಹ ನಾಳೆ ಸೆಪ್ಟೆಂಬರ್ 1 ರಂದು ‘ಧರ್ಮಸ್ಥಳ ಚಲೋ’ ಯಾತ್ರೆಯನ್ನು ಕೈಗೊಂಡಿದೆ.


