ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ- ಮಹಾದೇವ ಸಾಹುಕಾರ್ ಭೈರಗೊಂಡ ಶಿಷ್ಯನ ಮಡ೯ರ್
ಕ್ಷೌರಿಕನ ಅಂಗಡಿಯೊಳಗೆ ಕುರ್ಚಿಯ ಮೇಲೆ ಕುಳಿತಿದ್ದ ದಾಳಿಕೋರರು ಭೀಮನಗೌಡ ಬಿರಾದಾರ ಅವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ತಲವಾರ್ನಿಂದ ಹಲ್ಲೆ ಮಾಡಿ ಸಿನಿಮಯ ರೀತಿಯಲ್ಲಿ ಪರಾರಿಯಾಗಿದ್ದಾರೆ.
ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯ್ತಿಅಧ್ಯಕ್ಷ, ಕಾಂಗ್ರೆಸ್ ಮುಖಂಡ ಭೀಮನಗೌಡ ಬಿರಾದಾರ ಅವರನ್ನು ಹಾಡಹಗಲೇ ದುಷ್ಕಮಿ೯ಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಎಂಟುವರೆ ಗಂಟೆ ಸುಮಾರಿಗೆ ಗ್ರಾಮ ಪಂಚಾಯಿತಿ ಕಚೇರಿಯ ಅನತಿ ದೂರದಲ್ಲಿಯೇ ಇರುವ ಕ್ಷೌರಿಕನ ಅಂಗಡಿಯಲ್ಲಿ ಈ ದುಷ್ಕ್ರತ್ಯ ನಡೆದಿದೆ.
ಮಹಾದೇವ ಸಾಹುಕಾರ್ ಭೈರಗೊಂಡ ಶಿಷ್ಯನ ಮಡ೯ರ್

ಮಹಾದೇವ ಸಾಹುಕಾರ್ ಭೈರಗೊಂಡ ಅವರ ಪರಮಾಪ್ತರಾಗಿದ್ದ ಭೀಮನಗೌಡ ಬಿರಾದಾರ ಇಂದು ದೇವರ ನಿಂಬರಗಿ ಗ್ರಾಮದ ಕ್ಷೌರಿಕನ ಅಂಗಡಿಗೆ ಆಗಮಿಸಿದ್ದ ವೇಳೆ ಮೂರರಿಂದ ನಾಲ್ಕು ಜನ ಮುಸುಕುಧಾರಿಗಳು ಬಂದು ಅಲ್ಲಿ ಕೆಲಸ ಮಾಡುವವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ನಂತರ ಕ್ಷೌರಿಕನ ಅಂಗಡಿಯಲ್ಲಿನ ಕುರ್ಚಿಯ ಮೇಲೆ ಕುಳಿತಿದ್ದ ದಾಳಿಕೋರರು ಭೀಮನಗೌಡ ಬಿರಾದಾರ ಅವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ತಲವಾರ್ನಿಂದ ಹಲ್ಲೆ ಮಾಡಿ ಸಿನಿಮಯ ರೀತಿಯಲ್ಲಿ ಪರಾರಿಯಾಗಿದ್ದಾರೆ.

ಹಳೆಯ ರಾಜಕೀಯ ವೈಷಮ್ಯದ ಹಿನ್ನೆಲೆ ಕೊಲೆ ಮಾಡಲಾಗಿದೆ ಎಂದು ಮೃತ ಬಿರಾದಾರನ ಚಿಕ್ಕಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನೇರ ಎದೆಗೆ ಗುಂಡು ಹಾರಿಸಿ ಬಬ೯ರ ಹತ್ಯೆ ಮಾಡಲಾಗಿದೆ.
ಸದ್ಯ ಮೃತ ಬಿರಾದಾರ ಅವರ ದೇಹವನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ತರಲಾಗಿದೆ. ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಕೊಲೆಗಾರರು ತಪ್ಪಿಸಿಕೊಳ್ಳದಂತೇ ಎಲ್ಲ ಕಡೆ ನಾಕಾಬಂದಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕರು,
ನ್ಯೂ ಇಂಡಿಯಾ ಕನ್ನಡ


