ರಾಜ್ಯ ಒಳಮೀಸಲಾತಿ ವರ್ಗೀಕರಣ ನೀತಿ-ಬಂಜಾರ ಸಮುದಾಯಕ್ಕೆ ಅನ್ಯಾಯ-ಮಾಜಿ ಶಾಸಕ ಅಶೋಕ್ ನಾಯಕ್ ನೇತೃತ್ವದಲ್ಲಿ ಧರಣಿ
ಶಿವಮೊಗ್ಗ ಗ್ರಾಮೀಣ ಮಾಜಿ ಶಾಸಕ ಅಶೋಕ್ ನಾಯಕ್ ನೇತೃತ್ವದಲ್ಲಿ ನಡೆದಿರುವ ಧರಣಿಯಲ್ಲಿ ಶಿವಮೊಗ್ಗ, ಶಿಕಾರಿಪುರ ತಾಲೂಕಿನ ತಾಂಡಾದ ಬಂಜಾರ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.
ಕೇಂದ್ರ ಸರ್ಕಾರ ಜಾತಿಗಣತಿ ಆರಂಭಿಸುವವರೆಗೂ ರಾಜ್ಯದ ಒಳಮೀಸಲಾತಿ ವರ್ಗೀಕರಣ ಆದೇಶ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಬಂಜಾರ ಸಮುದಾಯದ ವಿವಿಧ ಸಂಘಟನೆಗಳು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಕಾಲ ಧರಣಿ ಆರಂಭಿಸಿದೆ.

ಒಳಮೀಸಲಾತಿ ವರ್ಗೀಕರಣ ನೀತಿಯಲ್ಲಿ ಅವೈಜ್ಞಾನಿಕ ವಾಗಿದ್ದು, ಇದರಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಂಡಿದೆ.

ಶಿವಮೊಗ್ಗ ಗ್ರಾಮೀಣ ಮಾಜಿ ಶಾಸಕ ಅಶೋಕ್ ನಾಯಕ್ ನೇತೃತ್ವದಲ್ಲಿ ನಡೆದಿರುವ ಧರಣಿಯಲ್ಲಿ ಶಿವಮೊಗ್ಗ, ಶಿಕಾರಿಪುರ ತಾಲೂಕಿನ ತಾಂಡಾದ ಬಂಜಾರ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.
ಬಂಜಾರ ಸಮುದಾಯದ ಬೇಡಿಕೆಗಳೇನು?
1.ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯನ್ನ ತಿರಸ್ಕರಿಸಬೇಕು. ಕೇಂದ್ರ ಸರ್ಕಾರ ಜಾತಿಗಣತಿ ಆರಂಭಿಸುವವರೆಗೂ ರಾಜ್ಯದ ಒಳಮೀಸಲಾತಿ ವರ್ಗೀಕರಣ ಆದೇಶ ತಡೆಹಿಡಿಯಬೇಕು.
2.ಪರಿಶಿಷ್ಟ ಜಾತಿಗಳಲ್ಲಿನ ಎಲ್ಲಾ ಜಾತಿಗಳು ಶೋಷಿತ ಮತ್ತು ದಮನಿತ ಸಮುದಾಯಗಳಾಗಿದ್ದು, ಸ್ಪೃಶ್ಯ ಅಸ್ಪೃಶ್ಯ ಅಸಂವಿಧಾನಿಕ ಪದ ತೆಗೆದುಹಾಕಿ ದಮನಿತ ಜಾತಿಯೆಂದು ಹೆಸರಿಸಬೇಕು.
3.ಹಲವು ಆಯೋಗಗಳ ವರದಿಯಂತೆ ಅಲೆಮಾರಿಗಳಿಗೂ ಪ್ರತ್ಯೇಕವಾಗಿ ಶೇ. 1 ರಷ್ಟು ಮೀಸಲಾತಿ ನೀಡುವಂತೆ ಆಗ್ರಹ
4.ಜನಸಂಖ್ಯೆ ಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ‘ಸಿ’ ವರ್ಗಕ್ಕೆ ಜನಸಂಖ್ಯೆ ಅನುಗುಣವಾಗಿಯೇ 6% ರಷ್ಟು ಮೀಸಲಾತಿ ಕಲ್ಪಿಸಬೇಕು.
ಲೋಪದೋಷ ಸರಿಪಡಿಸಿ -ಮಾಜಿ ಶಾಸಕ ಅಶೋಕ್ ನಾಯಕ್

ಧರಣಿ ನಿರತ ಸ್ಥಳದಲ್ಲಿ ನ್ಯೂಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಮಾಜಿ ಶಾಸಕ ಅಶೋಕ್ ನಾಯಕ್, ಒಳಮೀಸಲಾತಿ ವರ್ಗೀಕರಣದಲ್ಲಾದ ಲೋಪದೋಷ ಸರಿಪಡಿಸಿ ನ್ಯಾಯ ಒದಗಿಸುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಯಿಲ್ಲ ಎಂದು ಹೇಳಿದರು. ಈಗ ಶಿವಮೊಗ್ಗದಲ್ಲಿ ಹೋರಾಟ ಶುರುವಾಗಿದೆ, ಮುಂದೆ ಚಿತ್ರದುರ್ಗ, ದಾವಣಗೆರೆ , ಸೇರಿದಂತೆ ರಾಜ್ಯಾದ್ಯಂತ ಬಂಜಾರ ಸಮುದಾಯ ಪ್ರತಿಭಟನೆ ನಡೆಸಲಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಆರಂಭಗೊಂಡಿರುವ ಬಂಜಾರ ಸಮುದಾಯದ ಪ್ರತಿಭಟನಾ ಧರಣಿಯಲ್ಲಿ ಸೆಪ್ಟೆಂಬರ್ 20 ರವರೆಗೂ ಸರಣಿ ಪ್ರಕಾರ ವಿವಿಧ ತಾಂಡಾಗಳ ಜನರು ಪಾಲ್ಗೊಳ್ಳುತ್ತಿದ್ದು ಸಮುದಾಯದ ಶಕ್ತಿಪ್ರದರ್ಶನ ಮಾಡಲಿದ್ದಾರೆ ಎಂದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಮುಖ್ಯಸ್ಥರು
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ


