ಸ್ವಾತಂತ್ರ್ಯ ಭಾರತದ ಅಭಿವೃದ್ಧಿಯ ಪ್ರತೀಕ ಸರ್.ಎಂ. ವಿಶ್ವೇಶ್ವರಯ್ಯ-ಸಂಸದ ಬಿ ವೈ ರಾಘವೇಂದ್ರ ಅಭಿಮತ
ವೃತ್ತಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದರೂ ಕೇವಲ ಮೂಲಸೌಕರ್ಯ ಅಭಿವೃದ್ಧಿಗೆ ತಾವು ಸೀಮಿತವಾಗದೆ, ಕಾರ್ಖಾನೆ ಅಭಿವೃದ್ಧಿ, ಶಿಕ್ಷಣ ಕ್ಷೇತ್ರ, ಸಾಮಾಜಿಕ ಪ್ರಗತಿ ಸೇರಿದಂತೆ ಎಲ್ಲ ರಂಗಗಳಲ್ಲೂ ತನ್ನ ಛಾಪು ಮೂಡಿಸಿ ವಿಶ್ವದ ನುರಿತ ಅಭಿಯಂತರರ ಸಾಲಿನಲ್ಲಿ ಮೊದಲಿಗರಾಗಿ ನಿಂತವರು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ಭಾರತದ ಆರಂಭಿಕ ಹಂತದಲ್ಲಿ ದೇಶದ ಪ್ರಗತಿಗೆ ಬೇಕಿರುವ ರೂಪರೇಷೆಗಳನ್ನು ಸಿದ್ಧತೆ ಮಾಡಿಕೊಂಡು ಅದಕ್ಕೆ ಪೂರಕವಾಗಿ ಕೆಲಸ ಮಾಡಿದವರು ಸರ್.ಎಂ. ವಿಶ್ವೇಶ್ವರಯ್ಯನವರು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.

ಭದ್ರಾವತಿಯ ವಿ.ಐ.ಎಸ್.ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರವು “ಅಭಿಯಂತರರ ದಿನಾಚರಣೆ” ಪ್ರಯುಕ್ತ ಶ್ರೀ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯರವರ 165ನೇ ವರ್ಷದ ಜನ್ಮ ದಿನಾಚರಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ದೇಶದ ಸಮಗ್ರ ಅಭಿವೃದ್ಧಿಗೆ ಸರ್.ಎಂ. ವಿಶ್ವೇಶ್ವರಯ್ಯರವರ ಕೊಡುಗೆ ಇತಿಹಾಸ ಪುಟಗಳಲ್ಲಿ ದಾಖಲಾಗುವಂತಹದ್ದು ಎಂದು ಸ್ಮರಿಸಿದರು.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದರೂ ಕೇವಲ ಮೂಲಸೌಕರ್ಯ ಅಭಿವೃದ್ಧಿಗೆ ತಾವು ಸೀಮಿತವಾಗದೆ, ಕಾರ್ಖಾನೆ ಅಭಿವೃದ್ಧಿ, ಶಿಕ್ಷಣ ಕ್ಷೇತ್ರ, ಸಾಮಾಜಿಕ ಪ್ರಗತಿ ಸೇರಿದಂತೆ ಎಲ್ಲ ರಂಗಗಳಲ್ಲೂ ತನ್ನ ಛಾಪು ಮೂಡಿಸಿ ವಿಶ್ವದ ನುರಿತ ಅಭಿಯಂತರರ ಸಾಲಿನಲ್ಲಿ ಮೊದಲಿಗರಾಗಿ ನಿಂತವರು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಿದ ಇಂತಹ ಮಹಾನ್ ಸಾಧಕ ನಮ್ಮ ರಾಜ್ಯದವರು ಎನ್ನಲು ನಮಗೆಲ್ಲ ಮತ್ತೊಂದು ಹೆಮ್ಮೆಯ ವಿಷಯ ಎಂದು ಹೇಳಿದರು.
ದೇಶಕ್ಕೆ ಅವರು ನೀಡಿದ ಅಗಾಧವಾದ ಕೊಡುಗೆಯನ್ನು ಸ್ಮರಿಸುವ ಹಾಗೂ ಗೌರವ ಸಲ್ಲಿಸುವ ಸಲುವಾಗಿ ಅವರ ಜನ್ಮ ದಿನದಂದು “ಅಭಿಯಂತರರ ದಿನ” ವಾಗಿ ಆಚರಿಸುವುದು ಮತ್ತೊಂದು ಸಂತೋಷ ಹಾಗು ಹೆಮ್ಮೆಯ ಸಂಗತಿ ಎಂದರು.

ಈಗಿನ ಪೀಳಿಗೆ ಮತ್ತು ಮುಂಬರುವ ಪೀಳಿಗೆ ವಿಶ್ವೇಶ್ವರಯ್ಯರವರು ಹಾಕಿಕೊಟ್ಟ ಆದರ್ಶಗಳನ್ನು ಮತ್ತು ಬಿಟ್ಟು ಹೋಗಿರುವ ತಂತ್ರಜ್ಞಾನದ ಬುದ್ಧಿವಂತಿಕೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡುವ ಮಹತ್ಕಾರ್ಯವಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಮಲಿಂಗ, ಧರ್ಮ ಪ್ರಸಾದ್ ,ಚನ್ನವೀರಪ್ಪ, ಮಂಗೋಟೆ ರುದ್ರೇಶ್ , ತೀರ್ಥಯ್ಯ ಅವರು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಮುಖ್ಯಸ್ಥರು
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ


