KarnatakaPoliticalShivamoggaSpecial Stories

ಶೈಕ್ಷಣಿಕ ಮತ್ತು ಸಾಮಾಜಿಕ‌ ಸಮೀಕ್ಷೆ- ಆರಂಭದಲ್ಲೇ ವಿಘ್ನ-ಸವೆ೯ಗೆ ನಾವ್‌ ಬರಲ್ಲ- “ಆಶಾ” ಕಾರ್ಯಕರ್ತೆಯರ ಅಪಸ್ವರ

ಸರ್ಕಾರದ ಯಾವುದೇ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜನರಿಗೆ ಯಥಾವತ್ತು ತಲುಪಿಸಲು ಎಲ್ಲಾ ಇಲಾಖೆಗಳಿಗೆ ಸುಲಭವಾಗಿ ಲಭ್ಯವಾಗೋದು ಆಶಾ ಕಾರ್ಯಕರ್ತೆಯರು. ಈಗ ಶೈಕ್ಷಣಿಕ ಮತ್ತು ಸಾಮಾಜಿಕ‌ ಸಮೀಕ್ಷೆ ಕಾರ್ಯದಿಂದ ದೂರ ಉಳಿಯುವ ನಿಲುವಿಗೆ ಕಾರಣವೇನು ? ' ಸರ್ಕಾರದ ನಿಲುವಿಗೆ "ಆಶಾ" ವಾದವೇನು? ಅವರ ಪ್ರಸ್ತುತ ಬೇಡಿಕೆ ಏನು? ಅವರ‌ ಸಮಸ್ಯೆ ಎಂತಹದು ಎಂಬುದರ ಬಗ್ಗೆ ಬೆಳಕು ಚೆಲ್ಲುವ ಸಮಗ್ರ ವರದಿಯನ್ನು ನೀಡಿದ್ದಾರೆ ನಮ್ಮ "ನ್ಯೂಇಂಡಿಯಾ ಕನ್ನಡ" ಶಿವಮೊಗ್ಗ ಬ್ಯುರೋ ಮುಖ್ಯಸ್ಥೆ ಸೌಮ್ಯ ರೆಡ್ಡಿ.

ವಿರೋಧಪಕ್ಷಗಳ ತೀವ್ರ ಪ್ರತಿರೋಧದ ಮಧ್ಯೆ ಇದೇ ಸೆ.22 ರಿಂದ ಅ.7ರವರಗೆ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಜ್ಜಾಗಿದೆ. ಸಮೀಕ್ಷೆ ಕಾಯ೯ಕ್ಕೆ ವೇಗ ಹೆಚ್ಚಿಸಲು ದಸರಾ ರಜೆಯನ್ನು ಬಳಸಿಕೊಂಡು ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.

ಆದರೆ ಆರಂಭದಲ್ಲಿಯೇ ವಿಘ್ನ ಎಂಬಂತೇ ಆಶಾ ಕಾಯ೯ಕತ೯ರು ನಾವು ಸಮೀಕ್ಷೆ ಕಾಯ೯ಕ್ಕೆ ಬರೋದಿಲ್ಲ ಎಂದು ಪಟ್ಟು ಹಿಡಿದು ಕುತಿದ್ದಾರೆ.

ಇವತ್ತು ರಾಜ್ಯದಲ್ಲಿ ಸಕಾ೯ರದ ಏನೇ ಕಾಯ೯ಕ್ರಮಗಳು ಅನುಷ್ಠಾನವಾಗಬೇಕೆಂದರೇ ಆಶಾ ಕಾಯ೯ಕತ೯ರು ಬೇಕೆ ಬೇಕು. ಜನರ ಬಳಿ ಆಯಾ ಯೋಜನೆಯನ್ನು ಅದನ್ನು ನೇರವಾಗಿ ಒಯ್ದು ತಿಳುವಳಿಕೆ ಮೂಡಿಸಿ ಕಾಯ೯ಗತ ಮಾಡುವಲ್ಲಿ ಆಶಾ ಕಾಯ೯ಕತೆ೯ಯರದ್ದು ಮಹತ್ವದ ಪಾತ್ರ. ಇದನ್ನು ಸಕಾ೯ರ ಒಪ್ಪುತ್ತದೆ ಮತ್ತು ಇನ್ನು ಸಕಾ೯ರಕ್ಕೆ ಇವರು ಅನಿವಾಯ೯ವು ಹೌದು.

ಆದರೆ ಕೆಲಸವಾಗುವ ತನಕ ನಮ್ಮನ್ನು ಬಳಸಿಕೊಂಡು ಆ ನಂತರ ನಮ್ಮನ್ನು ಕೈಬಿಡುತ್ತಾರೆ ಎಂಬುದು ಆಶಾ ಕಾಯ೯ಕತೆ೯ಯರ ಅಳಲು. ಕೊಡೋ ಸಂಬಳಾನೇ ನಮಗೆ ಕಡಿಮೆ.

ಇನ್ನು ಇಂತಹ ಯೋಜನೆಗಳ ಜವಾಬ್ದಾರಿ ಹೊರಿಸುವ ಸಕಾ೯ರ, ಆರಂಭದಲ್ಲಿ ಗೌರವ ಧನ ನೀಡುತ್ತವೆ ಎನ್ನುತ್ತಾರೆ. ಕೆಲಸ ಆದ ಮೇಲೆ ಕೈಕೊಡ್ತಾರೆ ಎನ್ನುತ್ತಾರೆ ಆಶಾ ಕಾಯ೯ಕತೆ೯ಯರು.

ಹಾಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ಭತ್ಯೆ ಎಷ್ಟು ಕೊಡ್ತಿವಿ ಅಂತ ಸಕಾ೯ರ ಈವರೆಗೆ ಅಧಿಕೃತವಾಗಿ ಪ್ರಕಟಿಸದೇ ಇರುವುದು ಆಶಾ ಕಾಯ೯ಕತೆ೯ಯರ ಆಕ್ರೋಶಕ್ಕೆ ಮುಖ್ಯ ಕಾರಣ.

ಈ ಹಿಂದೆ ನಾಗಮೋಹನ್ ದಾಸ್ ಆಯೋಗದ ಜಾತಿ ಸಮೀಕ್ಷೆ ಭತ್ಯೆಯ ನಯಾ ಪೈಸೆ ಹಣವೇ ಇನ್ನು ಬಂದಿಲ್ಲ. ಈಗ ಮತ್ತೊಂದು ಸರ್ವೇ ಕೆಲಸಕ್ಕೆ ನಿಯೋಜಿಸಿದ್ದಾರೆ.

ಸಕಾ೯ರದ ಗ್ಯಾರಂಟಿ ಯೋಜನೆ ತಲುಪಿಸಲು ಮಾಡಿದ ಕೆಲಸಕ್ಕೂ ಹಣ ಕೈಸೇರಿಲ್ಲ. ಕಾರ್ಯಭಾರ ಜಾಸ್ತಿ ಪ್ರತಿಫಲ ಶೂನ್ಯ ಅನ್ನೋದು ಆಶಾ ಕಾರ್ಯಕರ್ತೆಯರ ಅಳಲಾಗಿದೆ.

ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾಯ೯ದಶಿ೯ ಡಿ ನಾಗಲಕ್ಷ್ಮೀ

ರಾಜ್ಯದೆಲ್ಲಡೆ ಸೆ13 ರಿಂದ ಆರಂಭವಾಗಿರುವ ಸಮೀಕ್ಷಾ ತರಬೇತಿ ಕಾರ್ಯದಿಂದ ದೂರ ಉಳಿಯಲು ನಿರ್ಣಯ ಕೈಗೊಂಡು ಎಲ್ಲ ಜಿಲ್ಲೆ ತಾಲ್ಲೂಕುಗಳ ಆರೊಗ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎನ್ನುತ್ತಾರೆ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾಯ೯ದಶಿ೯ ಡಿ ನಾಗಲಕ್ಷ್ಮೀ .

ನ್ಯೂ ಇಂಡಿಯಾ ಕನ್ನಡ ಜೊತೆ ವಿಶೇಷ ಸಂದಶ೯ನ ನೀಡಿದ ಅವರು, ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ 10 ಸಾವಿರ ಗೌರವಧನ ನೀಡದೇ ಮಾತು ತಪ್ಪಿದೆ. ನಾಗಮೋಹನ್ ದಾಸ್ ಸಮೀಕ್ಷೆಗೆ ಬಳಸಿಕೊಂಡು 1000 ರೂ ಭತ್ಯೆ ನೀಡುವುದಾಗಿ ಹೇಳಿ ಬಾಕಿ ಉಳಿಸಿಕೊಂಡಿದೆ.

ಈಗ ಹೊಸ ಸರ್ವೇ ಕಾರ್ಯಕ್ಕೆ ನಿಯೋಜಿಸಿದೆ. 450 ಕೋಟಿ ಸಮೀಕ್ಷೆಗಾಗಿ ಖರ್ಚು ಮಾಡುತ್ತಿದ್ದು ಶ್ರಮಪಟ್ಟು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೂ ಸೂಕ್ತ ಗೌರವ ಭತ್ಯೆ ನಿಗದಿ ಪಡಿಸಲಿ ಎಂದು ಆಗ್ರಹಿಸಿದ್ದಾರೆ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾಯ೯ದಶಿ೯ ಡಿ ನಾಗಲಕ್ಷ್ಮೀ.

ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರ ಪೂರ್ವಭಾವಿಯಾಗಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ನಮೂನೆ ನೀಡುವುದರ ಜೊತೆಗೆ, ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಕುಟುಂಬದ ಸದಸ್ಯರು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳಬೇಕಿದೆ.

ಅಗತ್ಯ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಲು ಹೇಳುವುದು, ಸರಿ ಇಲ್ಲದ ಪಕ್ಷದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವ ಮಾಹಿತಿಯನ್ನು ನೀಡುವುದು.

ನಮೂನೆಗಳನ್ನು ಹಂಚಿರುವ ವಿವರಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್ಲೋಡ್ ಮಾಡುವುದು ಇಷ್ಟು ಸಮೀಕ್ಷೆ ಮಾಡಲು ನಿಯೋಜಿಸಿರುವ ಶಿಕ್ಷಕರು ಬರುವ ಮುನ್ನ ಆಶಾ ಕಾಯ೯ಕತೆ೯ಯರು ಮಾಡಬೇಕಾದ ಕೆಲಸಗಳು.

ಈ ಎಲ್ಲಾ ಕೆಲಸಗಳಿಗೆ 2000 ರೂ ನೀಡುವುದಾಗಿ ಹೇಳಿದ್ದರೂ ಇಲಾಖೆಯಿಂದ ಇದುವರೆಗೂ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲಎಂಬುದು ಆಶಾ ಕಾಯ೯ಕತೆ೯ಯರ ಅಳಲು.

ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ ರೂ.1000 ನೀಡುವುದಾಗಿ ಹೇಳಿ ಸಮೀಕ್ಷೆ ಬಳಿಕ ಒಂದು ಪೈಸೆಯನ್ನೂ ನೀಡದೇ ಬಾಕಿ ಉಳಿಸಿಕೊಂಡಿದ್ದು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಚಿತ್ರವೆಂದರೇ, ಈವರೆಗೂ ಇಲಾಖೆಗಳಿಂದ ಮಾಡಿಸಿಕೊಂಡ ಹಲವಾರು ಸಮೀಕ್ಷೆಗಳಿಗೆ ಇದುವರೆಗೂ ಸೂಕ್ತ ಸಂಭಾವನೆ ದೊರೆತಿಲ್ಲ.

ಏಪ್ರಿಲ್ 1 ರಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.10,000 ಗ್ಯಾರಂಟಿ ಗೌರವಧನ ಎಂದು ಭರವಸೆ ನೀಡಿದ ರಾಜ್ಯ ಸರ್ಕಾರ ಈವರೆಗೆ ಈಡೇರಿಸಿಲ್ಲಎಂದು ಆಶಾ ಕಾಯ೯ಕತೆ೯ಯರು ಆರೋಪಿಸುತ್ತಾರೆ.

ಸರ್ವೆಗಾಗಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಮನೆಗೆ ಹೋಗುವಂತಹ ಪರಿಸ್ಥಿತಿ ಬಂದೊದಗಿದೆ.

ಆಶಾ ಕಾರ್ಯಕರ್ತೆಯರು ಪ್ರೋತ್ಸಾಹಧನ ಆಧಾರಿತ ಕೆಲಸ ಮಾಡುವ ಕಾರ್ಯಕರ್ತೆಯರು ಆಗಿರುವುದರಿಂದ, ಈ ಸರ್ವೆ ಮಾಡುವ ದಿನಗಳಲ್ಲಿ ಅವರ ಚಟುವಟಿಕೆಗಳಿಗೆ ಧಕ್ಕೆಯಾಗಿ ಪ್ರೋತ್ಸಾಹ ಧನ ಕಡಿಮೆಯಾಗಲಿದೆ.

ಈಗಿನ ಹೆಚ್ಚುವರಿ ಸಮೀಕ್ಷೆ ಕಾರ್ಯಕ್ಕೆ ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ರೂ. 5000, ನಗರ ಆಶಾ ಕಾರ್ಯಕರ್ತೆಯರಿಗೆ ರೂ.10,000 ಗೂ ಕಡಿಮೆ ಇರದಂತೆ ಗೌರವ ಧನ ನೀಡಲು ಒತ್ತಾಯಿಸಲಾಗಿದೆ.

ಇಲ್ಲವಾದಲ್ಲಿ ಸಮೀಕ್ಷೆ ಕೆಲಸಗಳಿಂದ ಕೈಬಿಡುವಂತೆ ಆಶಾ ಕಾರ್ಯಕರ್ತೆಯರ ಸಂಘಟನೆ ರಾಜ್ಯ ಸಕಾ೯ರಕ್ಕೇ ಆಗ್ರಹಿಸಿದೆ.

Leave a Reply

Your email address will not be published. Required fields are marked *

Back to top button