DistrictKarnatakaPoliticalShivamoggaSpecial Stories
Trending

ಶಿವಮೊಗ್ಗ ಅದ್ದೂರಿ ಯುವ ದಸರಾಕ್ಕೆ ಹ್ಯಾಟ್ರಿಕ್‌ ಹೀರೋ ಶಿವಣ್ಣ-ಫ್ರೀಡಂಪಾರ್ಕನಲ್ಲಿ ಮ್ಯೂಸಿಕಲ್ ನೈಟ್-ಆಯುಕ್ತ ಮಾಯಣ್ಣಗೌಡರಿಂದ ಸಿದ್ದತೆ ಪರಿಶೀಲನೆ

8000 ಮಂದಿ ಪ್ರೇಕ್ಷಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಳೆ ಬಂದರೆ ಅಡಚಣೆಯಾಗದಂತೆ ವಾಟರ್ ಪ್ರೂಫ್ ಶೀಟ್ ಬಳಸಿ ಬೃಹತ್ ಟೆಂಟ್ ನಿರ್ಮಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಕೆ ಮಾಯಣ್ಣಗೌಡ, ನ್ಯೂಇಂಡಿಯಾ ಕನ್ನಡಕ್ಕೆ ನೀಡಿದ ವಿಶೇಷ ಸಂದಶ೯ನದಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆಯುತ್ತಿರುವ ಅದ್ದೂರಿ 11 ದಿನಗಳ ದಸರಾ ಮಹೋತ್ಸವ ಎಲ್ಲ ವಗ೯ದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಒಂದೆಡೆ ಈ ಬಾರಿ ಜಂಬೂ ಸವಾರಿ ಅತಿ ಹೆಚ್ಚು ಜನಾಕರ್ಷಣೆಗೆ ಕಾರಣವಾಗಿದ್ದರೇ, ಮಕ್ಕಳಿಗಾಗಿಯೇ ಮಕ್ಕಳ ದಸರಾ ಸೇರಿದಂತೆ ಭಾನುವಾರದಂದು ನಡೆಯಲಿರುವ ಯುವ ದಸರಾ ಕಾಯ೯ಕ್ರಮ, ಯುವ ಸಮೂಹವನ್ನು ಒಂದೆಡೆ ಸೇರುವಂತೆ ಮಾಡಲಿದೆ.‌

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಹ್ಯಾಟ್ರಿಕ್‌ ಸ್ಟಾರ್‌ ಶಿವರಾಜ್‌ಕುಮಾರ್‌ ಅವರನ್ನು ಯುವ ದಸರಾ ಕಾಯ೯ಕ್ರಮಕ್ಕೆ ಆಹ್ವಾನಿಸಿದೆ. ಸಂಜೆ ಮ್ಯುಸಿಕಲ್ ನೈಟ್ ಕಾರ್ಯಕ್ರಮ ಸಹ ಏಪ೯ಡಿಸಲಾಗಿದೆ.

ಅಲ್ಲಮಪ್ರಭು (ಫ್ರೀಡಂಪಾರ್ಕ) ಮೈದಾನದಲ್ಲಿ ನಡೆಯಲಿರುವ ಈ ಕಾಯ೯ಕ್ರಮಕ್ಕೆ ಪಾಲಿಕೆ ಆಯುಕ್ತ ಕೆ ಮಾಯಣ್ಣಗೌಡ ನೇತೃತ್ವದ ತಂಡವು ಬಹುತೇಕ ಪೂವ೯ ಸಿದ್ದತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಬಹುತೇಕ ಪೂವ೯ ಸಿದ್ದತೆ ಮಾಡಲಾಗಿದೆ. ಇದೇ ವೇಳೆ ಆಹಾರ ಪ್ರಿಯರಿಗಾಗಿ ಆಹಾರ ಮೇಳ ಕಾರ್ಯಕ್ರಮ ಸಹ ಆಯೋಜಿಸಿದ್ದು ವಿಶೇಷ.

ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕರಾದ ಹೇಮಂತ್ ಕುಮಾರ್, ಗಾಯಕಿ ಅನುರಾಧಾ ಭಟ್ ಸಂಗೀತ ರಸೌದೌತಣ ನೀಡಲಿದ್ದಾರೆ.

ಗಿಚ್ಚಿಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್ , ಜಗಪ್ಪ, ಸುಶ್ಮಿತ ಆಗಮಿಸಲಿದ್ದು, ಖ್ಯಾತ ಹಾಡುಗಾರ ಜಸ್ಕರನ್ ಸಿಂಗ್ ಕೂಡ ಮ್ಯೂಸಿಕಲ್ ನೈಟ್ ನಲ್ಲಿ ಭಾಗವಹಿಸಲಿದ್ದಾರೆ. ಸರಿಗಮಪ, ಕನ್ನಡದ ಕೋಗಿಲೆ ಗಾಯಕರು ಪಾಲ್ಗೊಳ್ಳಲಿದ್ದಾರೆ.

8000 ಮಂದಿ ಪ್ರೇಕ್ಷಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಳೆ ಬಂದರೆ ಅಡಚಣೆಯಾಗದಂತೆ ವಾಟರ್ ಪ್ರೂಫ್ ಶೀಟ್ ಬಳಸಿ ಬೃಹತ್ ಟೆಂಟ್ ನಿರ್ಮಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಕೆ ಮಾಯಣ್ಣಗೌಡ, ನ್ಯೂಇಂಡಿಯಾ ಕನ್ನಡಕ್ಕೆ ನೀಡಿದ ವಿಶೇಷ ಸಂದಶ೯ನದಲ್ಲಿ ತಿಳಿಸಿದ್ದಾರೆ.

ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಅದ್ಬುತವಾಗಿ ನಡೆಯಲು ಬೇಕಿರುವ ಸೌಂಡ್ಸ್ ವೇದಿಕೆ ವ್ಯವಸ್ಥೆ ‌ನಿರ್ಮಿಸುವ ಜವಾಬ್ದಾರಿಯನ್ನ ಎಸ್ ಆರ್ ಎಸ್ ಶಾಮಿಯಾನ ತಂಡ ವಹಿಸಿಕೊಂಡಿದೆ.

ಸತತ ಒಂದು ವಾರದಿಂದ ವೇದಿಕೆ ಸಿದ್ದಪಡಿಸುವ ಕಾರ್ಯದಲ್ಲಿ ತೊಡಗಿದೆ ಈ ಬಾರಿ ಟೆಂಟನ್ನ ಜರ್ಮನ್ ಟೆಕ್ನಾಲಜಿ ಬಳಸಿ ನಿರ್ಮಿಸಿರೋದು ವಿಶೇಷ ಎಂದು ಶಾಮಿಯಾನ ತಂಡದ ನಿರ್ವಾಹಕ ಚಂದ್ರಕಾಂತ್, ನ್ಯೂ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಸಂಜೆ ನಡೆಯಲಿರುವ ಯುವದಸರಾ ಹಾಗೂ ಮ್ಯುಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಿವಮೊಗ್ಗ ಶಾಸಕ ಎಸ್‌ ಎನ್‌ ಚೆನ್ನಬಸಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.

Leave a Reply

Your email address will not be published. Required fields are marked *

Back to top button