DistrictKarnatakaPoliticalShivamoggaSpecial Stories
Trending

ಶಿವಮೊಗ್ಗದಲ್ಲಿಯು ಮೈಸೂರು ಮಾದರಿ ದಸರಾ ಹವಾ-ಹ್ಯಾಟ್ರಿಕ್‌ ಹೀರೋ ಶಿವಣ್ಣನ ಹಾಡಿಗೆ ಜನರು ಫಿದಾ-ಯುವ ದಸರಾಕ್ಕೆ ಕಳೆಕಟ್ಟಿದ ಮ್ಯೂಸಿಕಲ್‌ ನೈಟ್‌

ಶಿವಮೊಗ್ಗ ದಸರಾಕ್ಕೆ 50 ಲಕ್ಷ ಅನುದಾನ ಬಿಡುಗಡೆ ಮಾಡುವ ಮೂಲಕ ಅದ್ದೂರಿ ದಸರಾ ಆಚರಣೆಗೆ ಸಹಕರಿಸಿದ ಸಿದ್ದರಾಮಯ್ಯರಿಗೆ ಶಾಸಕ ಚೆನ್ನಬಸಪ್ಪ ಈ ಸಂದಭ೯ದಲ್ಲಿ ಅಭಿನಂದನೆ ಸಲ್ಲಿಸಿದರು. ಆವತ್ತು ಗೋಕಾಕ್ ಚಳುವಳಿಗಾಗಿ ಡಾ ರಾಜ್ ಕುಮಾರ್ ಶಿವಮೊಗ್ಗಕ್ಕೆ ಆಗಮಿಸಿದ್ದರು, ಇಂದು ಅವರ ಪುತ್ರ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿ ಯುವ ದಸರಾಕ್ಕೆ ಆಗಮಿಸಿ, ದಸರಾ ವೈಭವಕ್ಕೆ ಮೆರಗು ತಂದಿದ್ದಾರೆ ಎಂದರು.

ಭಾನುವಾರದಂದು ಒಂದೆಡೆ ಇಂಡಿಯಾ ಪಾಕ್ ಕ್ರಿಕೇಟ್ ಪಂದ್ಯಾವಳಿ, ಇನ್ನೊಂದೆಡೆ ಹ್ಯಾಟ್ರಿಕ್‌ ಹೀರೋ ಶಿವಣ್ಣನ ನೋಡಬೇಕು. ಯಾವುದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಭಾನುವಾರದಂದು ಶಿವಮೊಗ್ಗದಲ್ಲಿ ನಡೆದ ಯುವ ದಸರಾ ಸಂದಭ೯ದಲ್ಲಿ ಜನರನ್ನು ಕಾಡುವಂತೆ ಮಾಡಿತ್ತು.

ಆದರೆ ಕೊನೆಗೆ ಬಹುತೇಕ ಜನರು ಇಂಡಿಯಾ ಪಾಕ್ ಕ್ರಿಕೇಟ್ ಪಂದ್ಯಾವಳಿಯ ಹೊರತಾಗಿಯು ತಮ್ಮ ಊರಿಗೆ ಬಂದ ಶಿವಣ್ಣನನ್ನ ನೋಡಲು ಸಾಗರೋಪಾದಿಯಲ್ಲಿ ಇಲ್ಲಿಯ ಫ್ರೀಡಂ ಪಾಕ್‌೯ನಲ್ಲಿ ಬಂದು ಸೇರಿದ್ದು ವಿಶೇಷವಾಗಿತ್ತು.

ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಹ್ಯಾಟ್ರಿಕ್‌ ಹೀರೋ ಶಿವಣ್ಣ… ಅದೇ ಯಂಗ್‌ ಸ್ಟೈಲ್‌ನಲ್ಲಿ ಬಂದಿದ್ದರು. ಶಿವಣ್ಣನ ಎನಜಿ೯ ಯುವ ದಸರಾದಲ್ಲಿ ಪಾಲ್ಗೊಂಡಿದ್ದ ಯುವ ಸಮೂಹದ ಉತ್ಸಾಹ ಮತ್ತಷ್ಟು ಇಮ್ಮಡಿಗೊಳಿಸುವಂತೆ ಮಾಡಿತ್ತು.

ಶಿವಮೊಗ್ಗದ ಫ್ರೀಡಂ ಪಾಕ್‌೯ನಲ್ಲಿ ಸಂಜೆ ನಡೆದ ಯುವ ದಸರಾದಲ್ಲಿ ಮ್ಯೂಸಿಕಲ್ ನೈಟ್ ಏಪ೯ಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾಯ೯ಕ್ರಮ ಉದ್ಘಾಟಿಸಿದರು.

ಬಳಿಕ ಶಿವಣ್ಣ, ಅಭಿಮಾನಿಗಳ ಹಷೋ೯ದ್ಗಾರಗಳ ಮಧ್ಯೆ ಯಾರೇ ಕೂಗಾಡಲಿ , ಮುತ್ತಣ್ಣ ಪೀಪಿ ಊದುವ ಪ್ರಸಿದ್ದ ಹಾಡುಗಳನ್ನ ಹಾಡಿ ಅಭಿಮಾನಿಗಳನ್ನು ರಂಜಿಸಿದರು.

ಇದೇ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ದಸರಾ ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲೆಡೆ ವೈಭವಯುತವಾಗಿ ನಡೆಯುತ್ತಿರುವುದು ಸಂತೋಷ ತಂದಿದೆ. ಚಾಮುಂಡಿ ಆರ್ಶೀವಾದ ನಾಡಿನ ಜನರ ಮೇಲಿರಲಿ ಎಂದು ಆಶಿಸಿದರು.

ಪ್ಯಾಟೆಹುಡುಗಿ ಹಳ್ಳಿಗೆ ಬಂದ್ರು ಶೋ ಖ್ಯಾತಿಯ ಐಶ್ವರ್ಯ ಇಡೀ ಕಾರ್ಯಕ್ರಮವನ್ನ ಲವಲವಿಕೆಯಿಂದ ನಿರೂಪಿಸಿದರು.

ಮ್ಯೂಸಿಕಲ್ ನೈಟ್ ಕಾರ್ಯಕ್ರಮದ ಭಾಗವಾಗಿ ಖ್ಯಾತ ಗಾಯಕಿ ಅನನ್ಯ ಭಟ್,ಗಾಯಕ ಹೇಮಂತ್, ಪಂಜಾಬ್ ಗಾಯಕ ಜಸ್ಕರನ್ ಸಿಂಗ್ ಗಾನಸುಧೆಯಲ್ಲಿ ಪ್ರೇಕ್ಷಕರು ಕೂತಲ್ಲೆ ಹೆಜ್ಜೆಹಾಕಿದರು. ಕಾಮಿಡಿಕಿಲಾಡಿ ಖ್ಯಾತಿಯ ಜಗಪ್ಪ, ಸುಶ್ಮಿತ , ಹುಲಿಕಾರ್ತಿಕ್ ತಮ್ಮ ಹಾಸ್ಯಕಲೆ ಮೂಲಕ ಭರ್ಜರಿ ಮನೋರಂಜನೆ ನೀಡಿದರು.

ಶಿವಮೊಗ್ಗ ದಸರಾಕ್ಕೆ 50 ಲಕ್ಷ ಅನುದಾನ ಬಿಡುಗಡೆ ಮಾಡುವ ಮೂಲಕ ಅದ್ದೂರಿ ದಸರಾ ಆಚರಣೆಗೆ ಸಹಕರಿಸಿದ ಸಿದ್ದರಾಮಯ್ಯರಿಗೆ ಶಾಸಕ ಚೆನ್ನಬಸಪ್ಪ ಈ ಸಂದಭ೯ದಲ್ಲಿ ಅಭಿನಂದನೆ ಸಲ್ಲಿಸಿದರು.

ಆವತ್ತು ಗೋಕಾಕ್ ಚಳುವಳಿಗಾಗಿ ಡಾ ರಾಜ್ ಕುಮಾರ್ ಶಿವಮೊಗ್ಗಕ್ಕೆ ಆಗಮಿಸಿದ್ದರು, ಇಂದು ಅವರ ಪುತ್ರ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿ ಯುವ ದಸರಾಕ್ಕೆ ಆಗಮಿಸಿ, ದಸರಾ ವೈಭವಕ್ಕೆ ಮೆರಗು ತಂದಿದ್ದಾರೆ ಎಂದರು.

ಇದಕ್ಕೂ ಮುನ್ನ ಆಹಾರ ಮೇಳಕ್ಕೆ ಶಾಸಕ ಚೆನ್ನಬಸಪ್ಪ ತಾವೇ ಸಾಂಕೇತಿಕವಾಗಿ ತಿಂಡಿ ತಯಾರಿಸುವ ಮೂಲಕ ಚಾಲನೆ ನೀಡಿದರು.

ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿ, ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ, ಮಹಾನಗರ ಪಾಲಿಕೆ ಆಯುಕ್ತ ಕೆ ಮಾಯಣ್ಣಗೌಡ, ಜಿಪಂ ಸಿಇಒ ಹೇಮಂತ್ ಕುಮಾರ್ ಮಾಜಿ ಪಾಲಿಕೆ ಸದಸ್ಯರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Back to top button