DistrictInternationalKarnatakaNationalNew DelhiShivamogga
Trending

‘ವಂದೇ ಮಾತರಂ ಗೀತೆ’ಗೆ 150ನೇ ವರ್ಷದ ಸ್ಮರಣೆ-ಈ ಗೀತೆಯಲ್ಲಿ ಭಾರತ ಮಾತೆಯ ಆರಾಧನೆಯಿದೆ-ಪ್ರಧಾನಿ ಮೋದಿ|ಶಿವಮೊಗ್ಗದಲ್ಲಿಯು ಮೊಳಗಿದ ಸಂಭ್ರಮ-ಸಂಸದ ಬಿ ವೈ ರಾಘವೇಂದ್ರ ಭಾಗಿ

ವಂದೇ ಮಾತರಂ.. ಈ ಪದಗಳು ಭಾರತ ಮಾತೆಯ ಮೇಲಿನ ಭಕ್ತಿ, ಭಾರತ ಮಾತೆಯ ಆರಾಧನೆಯನ್ನು ಹೆಚ್ಚಿಸುವಂತೇ ಮಾಡುತ್ತದೆ. ಈ ಪದಗಳು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ವಂದೇ ಮಾತರಂ ಎಂಬ ಈ ಪದಗಳು ಒಂದು ಮಂತ್ರ, ಒಂದು ಶಕ್ತಿ, ಒಂದು ಕನಸು, ಒಂದು ಸಂಕಲ್ಪ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ವಂದೇ ಮಾತರಂನೊಂದಿಗೆ ನಾನು ಅವರಿಗೆ ಶುಭಾಶಯಗಳನ್ನು ಕೋರುವದಾಗಿ ತಿಳಿಸಿದ್ದಾರೆ.

ವಂದೇ ಮಾತರಂ ಗೀತೆ ರಚನೆ ಮಾಡಿ 150 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನವೆಂಬರ್‌ 7 ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಂದೇ ಮಾತರಂ.. ವಂದೇ ಮಾತರಂ.. ಈ ಪದಗಳು ಭಾರತ ಮಾತೆಯ ಮೇಲಿನ ಭಕ್ತಿ, ಭಾರತ ಮಾತೆಯ ಆರಾಧನೆಯನ್ನು ಹೆಚ್ಚಿಸುವಂತೇ ಮಾಡುತ್ತದೆ.

ಈ ಪದಗಳು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ವಂದೇ ಮಾತರಂ..ಈ ಪದ ನಮ್ಮ ವರ್ತಮಾನವನ್ನು ಆತ್ಮ ವಿಶ್ವಾಸದಿಂದ ತುಂಬುತ್ತದೆ ಎಂದ ಪ್ರಧಾನಿ ಮೋದಿ, ವಂದೇ ಮಾತರಂ ಅನ್ನು ಸಾಮೂಹಿಕವಾಗಿ ಹಾಡುವ ಅದ್ಭುತ ಅನುಭವ ನಿಜಕ್ಕೂ ಅಭಿವ್ಯಕ್ತಿಗೆ ಮೀರಿದ್ದು.

ಒಂದೇ ಲಯ, ಒಂದೇ ಸ್ವರ, ಒಂದೇ ಭಾವನೆ, ಒಂದೇ ರೋಮಾಂಚನ, ಒಂದೇ ಹರಿವು, ಅಂತಹ ಸುಸಂಬದ್ಧತೆ, ಅಂತಹ ಅಲೆಯೊಂದಿಗೆ ಹಲವಾರು ಧ್ವನಿಗಳು, ಈ ಶಕ್ತಿಯು ಹೃದಯವನ್ನು ಮಿಡಿಯುವಂತೆ ಮಾಡಿದೆ ಎಂದರು.

ಈ ಶುಭ ಸಂದರ್ಭವು ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ನಮ್ಮ ಲಕ್ಷಾಂತರ ದೇಶವಾಸಿಗಳಿಗೆ ನವೀಕೃತ ಶಕ್ತಿಯನ್ನು ತುಂಬುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ, ಇತಿಹಾಸದಲ್ಲಿ ಈ ದಿನವನ್ನು ಗುರುತಿಸಲು, ವಂದೇ ಮಾತರಂ ವಿಶೇಷ ನಾಣ್ಯ ಮತ್ತು ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು.

ವಂದೇ ಮಾತರಂ ಎಂಬ ಈ ಮಂತ್ರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೇಶದ ಮಹಾನ್ ಪುರುಷರಿಗೆ, ಭಾರತ ಮಾತೆಯ ಪುತ್ರರಿಗೆ ನಾನು ಗೌರವಯುತ ಗೌರವ ಸಲ್ಲಿಸುತ್ತೇನೆ ಮತ್ತು ಈ ಸಂದರ್ಭದಲ್ಲಿ ನನ್ನ ಸಹ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಭಾಗಿಯಾಗಿ ವಂದೇ ಮಾತರಂ ಗೀತೆಗೆ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಂದೇ ಮಾತರಂ ಗೀತೆಗೆ 150 ವರುಷ ತುಂಬಿದ ಹಿನ್ನೆಲೆಯಲ್ಲಿ ಇಡೀ ವರುಷ ದೇಶಾದ್ಯಂತ ಸಂಭ್ರಮಾಚರಣೆ ನಡೆಯಲಿದೆ ಎಂದು ಹೇಳಿದರು.

ಇಂತಹ ಅಮೃತ ಘಳಿಗೆಯಲ್ಲಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಇಡೀ ವಿಶ್ವವೇ ಭಾರತವನ್ನು ಗುರುತಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯು ಹಾಗೂ ಸ್ವಾತ್ರಂತ್ರ್ಯ ಪೂರ್ವದಲ್ಲಿಯು ರಾಷ್ಟ್ರ ಪ್ರೇಮವನ್ನು ಸಾರುವಲ್ಲಿ ಈ ಗೀತೆ ಮಹತ್ವದ ಪಾತ್ರ ವಹಿಸಿತ್ತು ಎಂದು ಹೇಳಿದರು.

ಭಾರತದ ಭವ್ಯ ಪರಂಪರೆಯ ವಿಶ್ವಕ್ಕೆ ನಮ್ಮ ಇತಿಹಾಸ ತಲುಪಿಸುವಲ್ಲಿ ವಂದೇ ಮಾತರಂ ಗೀತೆಯ ಪಾತ್ರ ಅತಿ ದೊಡ್ಡದು ಎಂದು ಬಿ ವೈ ರಾಘವೇಂದ್ರ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಕೆ ಜಗದೀಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಮಾಜಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಶಿವರಾಜು, ಎಂ ಬಿ ಹರಿಕೃಷ್ಣ, ಮಾಲತೇಶ್ ಸಿ ಹೆಚ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button