InternationalSpecial StoriesTUESDAY LATEST NEWS

Afghanistan Earthquake- ಮಿಡ್‌ನೈಟ್‌ ದುರಂತ- ಕುನಾರ್ ಒಂದರಲ್ಲೇ ಸುಮಾರು 812 ಜನರ ದಾರುಣ ಅಂತ್ಯ

ಅಫ್ಘಾನಿಸ್ತಾನ ಭೂಕಂಪದ ಕೇಂದ್ರಬಿಂದುವಿನ ಬಳಿ ಇದ್ದ ಕುನಾರ್ ಒಂದರಲ್ಲೇ ಸುಮಾರು 812 ಜನರು ಸಾವನ್ನಪ್ಪಿದ್ದಾರೆ ಮತ್ತು 2,500 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಭಾನುವಾರ ತಡರಾತ್ರಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪದ ಪರಿಣಾಮ ಸುಮಾರು 812 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಸಂದಭ೯ದಲ್ಲಿ 2,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪೂವ೯ ಅಫ್ಘಾನಿಸ್ತಾನದಾದ್ಯಂತ ಮೊದಲು ಭೂಕಂಪ ಸಂಭವಿಸಿದ್ದು, ಆ ಬಳಿಕ 30 ನಿಮಿಷಗಳ ಅವಧಿಯಲ್ಲಿ ಮೂರರಿಂದ ನಾಲ್ಕು ಬಾರಿ ಕಂಪನಗಳು ಸಂಭವಿಸಿದೆ.

ಘಟನೆಯಲ್ಲಿ ಅಫ್ಘಾನಿಸ್ತಾನ ಭೂಕಂಪದ ಕೇಂದ್ರಬಿಂದುವಿನ ಬಳಿ ಇದ್ದ ಕುನಾರ್ ಒಂದರಲ್ಲೇ ಸುಮಾರು 812 ಜನರು ಸಾವನ್ನಪ್ಪಿದ್ದಾರೆ ಮತ್ತು 2,500 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಬದುಕುಳಿದ ನೂರಾರು ಜನರು ಸ್ಥಳೀಯ ಆಸ್ಪತ್ರಗಳಲ್ಲಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಇನ್ನು ಮನೆಗಳ ಕೆಳಗೆ ಹೂತು ಹೋಗಿರುವವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಅವಶೇಷಗಳನ್ನು ಅಗೆಯುವುದನ್ನು ಈ ಕ್ಷಣದವರೆಗೂ ಮುಂದುವರೆಸಿದ್ದಾರೆ, ಆದರೆ ಈ ಮಧ್ಯೆ ಬದುಕುಳಿದವರನ್ನು ಹುಡುಕುವ ಭರವಸೆಗಳು ಕ್ಷೀಣವಾಗುತ್ತಿವೆ ಎಂದು ರಕ್ಷಣಾ ಪಡೆಗಳು ಹೇಳಿವೆ.

ಅಫ್ಘಾನಿಸ್ತಾನದ ಭೂಕಂಪದ ಕೇಂದ್ರಬಿಂದು ಜಲಾಲಾಬಾದ್‌ನಿಂದ ಸುಮಾರು 27 ಕಿಲೋಮೀಟರ್ ದೂರದಲ್ಲಿತ್ತು. ಭೂಕಂಪವು ಭೂಮಿಯ ಮೇಲ್ಮೈಯಿಂದ ಎಂಟು ಕಿಲೋಮೀಟರ್ ಕೆಳಗೆ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ.

ಕುನಾರ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ನೂರ್ ಗುಲ್, ಸೋಕಿ, ವಾಟ್ಪುರ್, ಮನೋಗಿ ಮತ್ತು ಚಾಪಾ ದಾರಾ ಎಂದು ಗುರುತಿಸಲಾಗಿದೆ.

ಇಲ್ಲಿ ಮಣ್ಣು ಮತ್ತು ಕಲ್ಲಿನಿಂದ ಮನೆಗಳನ್ನು ನಿಮಿ೯ಸಲಾಗಿದ್ದರಿಂದ ಇಡೀ ಹಳ್ಳಿಗಳಲ್ಲಿನ ಮನೆಗಳು ಕುಸಿದು ಹೋಗಿ ಪ್ರಾಣ ಹಾನಿ ಹೆಚ್ಚಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಭಾರಿ ಪ್ರಮಾಣದಲ್ಲಿ ಭೂಕುಸಿತದ ಪರಿಣಾಮ ರಕ್ಷಣಾ ಕಾಯ೯ಕ್ಕೆ ಅಡಚಣೆ ಉಂಟಾಗಿದೆ. ಇನ್ನು ನೆರೆಯ ನಂಗರ್ಹಾರ್ ಪ್ರಾಂತ್ಯದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಮತ್ತು 255 ಮತ್ತು ಲಗ್ಮನ್ ಪ್ರಾಂತ್ಯದಲ್ಲಿ 58 ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಸಹಾಯ ಹಸ್ತಕ್ಕೆ ಮುಂದಾದ ಭಾರತ

ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪನ ಸಂಭವಿಸುತ್ತಿದ್ದಂತೆ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿ, ದುರಂತದಲ್ಲಿ ನಾಗರಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

S jaishankar, Minister, Indian External Affairs

ಬಳಿಕ ಆ ಕೂಡಲೇ ಜನರ ತಾತ್ಕಾಲಿಕ ವಸತಿಗಾಗಿ 1000 ಕುಟುಂಬ ಡೇರೆಗಳನ್ನು ಮತ್ತು 15 ಟನ್ ಆಹಾರ ಸಾಮಗ್ರಿಗಳನ್ನು ಭಾರತೀಯ ಹೈಕಮಿಷನ್ ತಕ್ಷಣವೇ ಕಾಬೂಲ್‌ನಿಂದ ಕುನಾರ್‌ಗೆ ಸಾಗಿಸುತ್ತಿದೆ” ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಸಹಾಯವನ್ನು ಕಳುಹಿಸಲಾಗುವುದು ಎಂದು ಸಚಿವ ಎಸ್‌ ಜೈಶಂಕರ್ ತಿಳಿಸಿದ್ದಾರೆ

ಇನ್ನು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯಾದ WHO ಅಫ್ಘಾನಿಸ್ತಾನದಲ್ಲಿ ತನ್ನ ತಂಡಗಳನ್ನು ನಿಯೋಜಿಸಿದೆ. ಈ ಮಧ್ಯೆ ಭೂಕಂಪಗಳಿಂದ ಹಾನಿಗೊಳಗಾದವರಿಗೆ ಬ್ರಿಟನ್ ತುರ್ತು ಹಣಕಾಸು ಬೆಂಬಲವನ್ನು ನೀಡಲು ಮುಂದಾಗಿದೆ.

ಬ್ರಿಟನ್‌ನ 1 ಮಿಲಿಯನ್ ಪೌಂಡ್ ಸಹಾಯವನ್ನು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ಮತ್ತು ಅಂತರರಾಷ್ಟ್ರೀಯ ರೆಡ್‌ಕ್ರಾಸ್ (IFRC) ನಡುವೆ ವಿಭಜಿಸಲಾಗುವುದು, ಇದು ಆಫ್ಘನ್ನರಿಗೆ ನಿರ್ಣಾಯಕ ಆರೋಗ್ಯ ರಕ್ಷಣೆ ಮತ್ತು ತುರ್ತು ಸರಬರಾಜುಗಳನ್ನು ತಲುಪಿಸುತ್ತದೆ ಎಂದು ಪ್ರಕಟಿಸಿದೆ.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button