ದಾವಣಗೆರೆ ಗಣೇಶೋತ್ಸವದಲ್ಲಿ ಕಿಡಿಹೊತ್ತಿಸಿದ ಪೋಸ್ಟರ್?-ಪ್ಲೆಕ್ಸ್ ತೆರವಿಗೆ ವಿರೋಧ-ಪರಿಸ್ಥಿತಿ ಉದ್ವಿಗ್ನ
ವಿವಾದಿತ ಪ್ಲೆಕ್ಸ್ ತೆರವುಗೊಳಿಸುವಲ್ಲಿ ಪೊಲೀಸರು ಯಶಸ್ವಿ

ಗಣೇಶೋತ್ಸವ ಪ್ರತಿಷ್ಠಾಪನೆ ಮಾಡಿದ್ದ ಸಂದಭ೯ದಲ್ಲಿ ಆಳವಡಿಸಲಾಗಿದ್ದ ವಿವಾದಿತ ಫ್ಲೆಕ್ಸ್ ಅನ್ನು ಪೊಲೀಸರು ತೆರವುಗೊಳಿಸುವ ವೇಳೆ ಹಿಂದೂಪರ ಸಂಘಟನೆಗಳು ಪ್ರತಿರೋಧ ಒಡ್ಡಿದ ಪರಿಣಾಮ ಉದ್ವಿಗ್ನ ಪರಿಸ್ಥಿತಿ ನಿಮಾ೯ಣಗೊಂಡ ಘಟನೆ ದಾವಣಗೆರೆಯ ಮೆಟ್ಟಿಕಲ್ ಪ್ರದೇಶದಲ್ಲಿ ನಡೆದಿದೆ.

ಗುರುವಾರ ರಾತ್ರಿ ವಿವಾದಾತ್ಮಕ ಪೋಸ್ಟರ್ ಅನ್ನು ಆಳವಡಿಸಿದ್ದ ಸುದ್ದಿ ಪಡೆದ ಒಂದು ಕೋಮಿನ ಜನರು ಸ್ಥಳಕ್ಕೆ ಧಾವಿಸಿ ಬಳಿಕ ಈ ಕುರಿತು ಪ್ರಚೋದನಾಕಾರಿ ಪೋಸ್ಟರ್ ಅನ್ನು ತೆರವುಗೊಳಿಸುವಂತೇ ಆರ್ ಎಂಸಿ ಪೋಲೀಸ್ ಠಾಣೆಗೆ ದೂರು ನೀಡಿದರು.
ಗುರುವಾರ ರಾತ್ರಿ ವಿವಾದಾತ್ಮಕ ಪೋಸ್ಟರ್ ಅನ್ನು ಆಳವಡಿಸಿದ್ದ ಸುದ್ದಿ ಪಡೆದ ಒಂದು ಕೋಮಿನ ಜನರು ಸ್ಥಳಕ್ಕೆ ಧಾವಿಸಿ ಬಳೀಕ ಈ ಕುರಿತು ಪ್ರಚೋದನಾಕಾರಿ ಪೋಸ್ಟರ್ ಅನ್ನು ತೆರವುಗೊಳೀಸುವಂತೇ ಆರ್ ಎಂಸಿ ಪೋಲೀಸ್ ಠಾಣೆಗೆ ದೂರು ನೀಡಿದರು. ಸ್ಥಳಕ್ಕೆ ಆಗಮಿಸಿದ ಪೋಲೀಸರು ಪೋಸ್ಟರ್ ತೆರವಿಗೆ ಮುಂದಾದ ಸಂದಭ೯ದಲ್ಲಿ ಹಿಂದೂ ಸಂಘಟನೆಗಳು, ಹಾಗೂ ಮುಖಂಡರ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಆಕ್ರೋಶ ವ್ಯಕ್ತಪಡಿಸಿದರು. ಪೋಸ್ಟರ್ ತೆರವು ಮಾಡುವದಾದರೇ ಜಿಲ್ಲೆಯಲ್ಲಿ ವಿವಿದೆಡೆ ಆಳವಡಿಸಲಾದ ಇತರ ಪೋಸ್ಟರ್ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಈ ವೇಳೆ ಸಂಘಪರಿವಾರದ ಕಾರ್ಯಕರ್ತರು ಹಲವು ಹಿಂದೂ ಸಂಘಟನೆಗಳ ಯುವಕರು ಜಮಾಯಿಸಿದ್ದು ಪೊಲೀಸರ ನಡುವೆ ವಾಗ್ವಾದ ನಡೆಸಿದರು. ಈ ವೇಳೆ ನೂಕಾಟ ತಳ್ಳಾಟ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದೇ ವೇಳೆ ಜಿಲ್ಲೆಯಲ್ಲಿನ ಔರಂಗಜೇಬ್ ,ಟಿಪ್ಪು ಸುಲ್ತಾನ್ ಪ್ಲೆಕ್ಸ್ಗಳೂ ತೆರವಾಗಬೇಕೆಂದು ಮುಖಂಡರು ಪಟ್ಟು ಹಿಡಿದಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಬಳಿಕ ಫ್ಲೆಕ್ಸ್ ಆಳವಡಿಸಿದ್ದ ಸಂಘ ಹಾಗು ಮುಖಂಡರ ಜೊತೆ ಮಾತುಕತೆ ನಡೆಸಿದ ಪೊಲೀಸರು ಸಂಧಾನ ನಡೆಸಿದ್ದಲ್ಲದೆ, ಪ್ಲೆಕ್ಸ್ ತೆರವಿಗೆ ಬೆಳಿಗ್ಗೆವರೆಗೂ ಕಾಲಾವಕಾಶ ನೀಡಿದ್ದರು.
ಇಂದು ಶುಕ್ರವಾರದಂದು ಬೆಳಗ್ಗೆ ಮತ್ತೆ ಸಂಘಪರಿವಾರದ ಮುಖಂಡರ ಜೊತೆ ಮಾತುಕತೆ ನಡೆಸಿದ ಪೊಲೀಸರು ವಿವಾದಿತ ಪ್ಲೆಕ್ಸ್ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಗಣೇಶೋತ್ಸವದ ಮೆರವಣಿಗೆ ವೇಳೆ ಸಂದಭ೯ದಲ್ಲಿ ಈ ಪ್ರದೇಶದಲ್ಲಿ ಕಲ್ಲುತೂರಾಟ ನಡೆದಿತ್ತು. ಈ ಹಿನ್ನಲೆಯಲ್ಲಿ ಪೋಲೀಸರು ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದಾರೆ.


