CinemaDistrictKarnatakaMandyaRamanagaraState

“ಮಂಡ್ಯದ ಗಂಡು” ಅಂಬರೀಶ್‌ ಪುಣ್ಯಸ್ಮರಣೆ ನಾಡಿನ ಗಣ್ಯರಿಂದ ಸ್ಮರಣೆ-ಗೌರವ ನಮನ

ಸ್ನೇಹ ಮತ್ತು ಸರಳತೆಗೆ ಮತ್ತೊಂದು ಹೆಸರಾಗಿದ್ದ ಅಪ್ರತಿಮ ಕಲಾವಿದ ಅಂಬರೀಶ್ ಎಂಬ ನಾಯಕ ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಜೀವಂತ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸ್ಮರಿಸಿದ್ದಾರೆ.

ಕನ್ನಡ ಚಿತ್ರರಂಗದ ‘ರೆಬೆಲ್ ಸ್ಟಾರ್’, ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಮಿಂಚಿದ್ದ ಅಂಬರೀಶ್ ಅವರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ನಾಡಿನ ಅನೇಕ ಗಣ್ಯರು ತಮ್ಮ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ಅವರು ತಮ್ಮ ಸಂದೇಶದಲ್ಲಿ, ಅಂಬರೀಶ್‌ ಅವರು, ಶಾಸಕರಾಗಿ, ಸಂಸದರಾಗಿ ಮತ್ತು ಸಚಿವರಾಗಿ ನಾಡು-ನುಡಿಗೆ ಅವರು ಸಲ್ಲಿಸಿದ ಸೇವೆಗಳು ಸದಾ ಸ್ಮರಣೀಯ ಎಂದು ಹೇಳಿದ್ದಾರೆ..

ಸ್ನೇಹ ಮತ್ತು ಸರಳತೆಗೆ ಮತ್ತೊಂದು ಹೆಸರಾಗಿದ್ದ ಅಪ್ರತಿಮ ಕಲಾವಿದ ಅಂಬರೀಶ್ ಎಂಬ ನಾಯಕ ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಜೀವಂತ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸ್ಮರಿಸಿದ್ದಾರೆ.

ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಅಂಬರೀಶ್‌, ಅಭಿಮಾನಿಗಳ ಪಾಲಿನ ಶಾಶ್ವತ ರೆಬೆಲ್ ಸ್ಟಾರ್, ಮಾಜಿ ಸಚಿವರು, ಅನುಪಮ ವ್ಯಕ್ತಿತ್ವದ ಜನಾನುರಾಗಿ ಕಲಾವಿದರಾಗಿದ್ದರು.

ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಆ ಮಹಾನ್ ಕಲಾಚೇತನಕ್ಕೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಜನಮಾನಸದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಅವರ ಕಲಾ ಸೇವೆ ಮತ್ತು ಜನಪರತೆ ಸದಾ ಸ್ಮರಣೀಯ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡ ಹಾಗು ಲೋಕಸಭಾ ಮಾಜಿ ಸದಸ್ಯ ಡಿ ಕೆ ಸುರೇಶ್‌, ಕನ್ನಡ ಚಿತ್ರರಂಗ ಕಂಡ ಮೇರು ನಟ, ಮಾಜಿ ಸಚಿವರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸಿದ್ದಾರೆ.

ಕನ್ನಡ ಚಲನಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Follow Us

Leave a Reply

Your email address will not be published. Required fields are marked *

Back to top button