DistrictShivamogga

ಆರ್ಯವೈಶ್ಯ ಸಮಾಜದ ಕುಲದೇವತೆ “ವಿಶ್ವರೂಪಿಣಿ ಶ್ರೀವಾಸವಿ”ಚಿತ್ರದ ಟೀಸರ್‌ ವೀಕ್ಷಣೆ| ಶಾಸಕ ಡಿ ಎಸ್‌ ಅರುಣ್ ಚಾಲನೆ

ವಿಧಾನಪರಿಷತ್‌ ಸದಸ್ಯ ಹಾಗು ಸಮಾಜದ ಮುಖಂಡ ಡಿ ಎಸ್‌ ಅರುಣ್‌ ಕಾರ್ಯಕ್ರಮ ಉದ್ಘಾಟಿಸಿದರು.

ಆರ್ಯವೈಶ್ಯ ಸಮಾಜದ ಕುಲದೇವತೆಯಾದ ಶ್ರೀ ವಾಸವಿ ಮಾತೆಯ ಜೀವ ಚರಿತ್ರೆ ಆಧರಿಸಿ, ನಿರ್ಮಾಣ ಮಾಡಲಾಗುತ್ತಿರುವ “ವಿಶ್ವರೂಪಿಣಿ ಶ್ರೀವಾಸವಿ” ಚಲನಚಿತ್ರದ ಟೀಸರ್‌ ವೀಕ್ಷಣೆ ಕಾರ್ಯಕ್ರಮ ಶನಿವಾರಂದು ಶಿವಮೊಗ್ಗದಲ್ಲಿ ಏರ್ಪಡಿಸಲಾಗಿತ್ತು.

ವಿಧಾನಪರಿಷತ್‌ ಸದಸ್ಯ ಹಾಗು ಸಮಾಜದ ಮುಖಂಡ ಡಿ ಎಸ್‌ ಅರುಣ್‌ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಆರ್ಯವೈಶ್ಯ ಸಮಾಜದ ಆರಾಧ್ಯದೇವತೆಯ ಚಲನಚಿತ್ರವು ಯಶಸ್ವಿಯಾಗಲೆಂದು ಹಾರೈಸಿದರು.

ಇದೇ ವೇಳೆ ಚಿತ್ರದ ನಿರ್ಮಾಪಕ ಹಾಗು ಸಂಗೀತ ನಿರ್ದೇಶಕ ಬಿ ಎಂ ಪ್ರಸಾದ್‌, ಹಾಗು ಹಿನ್ನಲೆ ಗಾಯಕರನ್ನು ಸನ್ಮಾನಿಸಲಾಯಿತು.

ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಶೇಷಾಚಲ, ವಾಸವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಶ್ವಥ್ ನಾರಾಯಣ ಶ್ರೇಷ್ಠಿ, ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಶಶಿಧರ್, ಆರ್ಯವೈಶ್ಯ ಶ್ರೀ ರಾಮ ಸಹಕಾರ ಸಂಘದ ಉಪಾಧ್ಯಕ್ಷ ಈಶ್ವರ್ ಹಾಗು ಆರ್ಯವೈಶ್ಯ ಸಮಾಜ ಬಾಂಧವರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button