Parappan Agrahar Jail: ಕುಕೃತ್ಯಗಳಿಗೆ ಅಧಿಕಾರಿಗಳೇ ಕಾರಣ| ಜೈಲುಗಳು ಉಗ್ರರನ್ನು ಪೋಷಿಸುತ್ತಿವೆ-ಮಾಜಿ ಸಚಿವ ಆರಗ ಜ್ಞಾನೇಂದ್ರ
ಉಗ್ರರ ಕೈಗೆ ಮೊಬೈಲ್ , ಟಿವಿ ಸೌಲಭ್ಯ ಜೈಲಿನೊಳಗೆ ಸುಲಭವಾಗಿ ಸಿಗ್ತಾ ಇದೆ. ಅತ್ಯಾಚಾರಿ ಉಮೇಶ್ ರೆಡ್ಡಿ ಕೊಠಡಿಯಲ್ಲಿ ಟಿವಿ ಇದೆ. ಇವೆಲ್ಲಕ್ಕೂ ಜೈಲು ಅಧಿಕಾರಿಗಳಿಂದಲೇ ಸಹಕಾರ ಸಿಗುತ್ತೆ ಅಂದ್ರೆ ಜೈಲು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಆತಂಕ ವ್ಯಕ್ತಪಡಿಸಿದರು.

ರಾಜ್ಯದ ಜೈಲುಗಳು ಶಿಕ್ಷಾಗೃಹ ,ಮನಃಪರಿವರ್ತನಾ ಕೇಂದ್ರವಾಗಿ ಉಳಿದಿಲ್ಲ, ಬದಲಾಗಿ ಉಗ್ರರನ್ನು ಪೋಷಿಸುವ ಶ್ರೀಮಂತ ಮನೆಗಳಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು. ಜೈಲು ಸುಧಾರಣಾ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಯಾರ ಭಯವಿಲ್ಲದೇ ನಡೆಯುತ್ತಿದೆ.

ಉಗ್ರರ ಕೈಗೆ ಮೊಬೈಲ್ , ಟಿವಿ ಸೌಲಭ್ಯ ಜೈಲಿನೊಳಗೆ ಸುಲಭವಾಗಿ ಸಿಗ್ತಾ ಇದೆ. ಅತ್ಯಾಚಾರಿ ಉಮೇಶ್ ರೆಡ್ಡಿ ಕೊಠಡಿಯಲ್ಲಿ ಟಿವಿ ಇದೆ. ಇವೆಲ್ಲಕ್ಕೂ ಜೈಲು ಅಧಿಕಾರಿಗಳಿಂದಲೇ ಸಹಕಾರ ಸಿಗುತ್ತೆ ಅಂದ್ರೆ ಜೈಲು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ನಟರೊಬ್ಬರು ಹಾಸಿಗೆ ದಿಂಬಿಗಾಗಿ ಕೋರ್ಟ್ ಮೊರೆಹೋಗಿ ಗೋಗರೆಯುತ್ತಿದ್ದಾರೆ.
ಆದರೆ ಅದೇ ಜೈಲಿನಲ್ಲಿ ಇರುವ ಉಗ್ರರು, ಹಾಗೂ ನಟೋರಿಯಸ್ ಅಪರಾಧಿಗಳು ರೌಡಿಗಳು ಯಾರ ಭಯವಿಲ್ಲದೇ ತಿಂದು ಉಂಡು, ಕುಣಿದು ಪಾರ್ಟಿ ಮಾಡಿ ಆರಾಮಾಗಿರಬಹುದಾಗಿದೆ ಎಂದು ಹೇಳಿದರು.
ಗಾಂಜಾ, ಮಧ್ಯ ಸುಲಭವಾಗಿ ಕೈಗೆ ಸಿಗಲು ಜೈಲು ಅಧಿಕಾರಿಗಳ ಪಾತ್ರವಿರುತ್ತದೆ. ಇಂತಹ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.

ಸುಪ್ರೀಂಕೋರ್ಟ್ ಕೂಡ ಜೈಲುಗಳಲ್ಲಿನ ರಾಜಾತಿಥ್ಯದ ಬಗ್ಗೆ ಛೀಮಾರಿ ಹಾಕಿದೆ. ತಾವು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಜೈಲುಗಳಲ್ಲಿ ಅನೇಕ ಸುಧಾರಣೆ ಕ್ರಮಗಳನ್ನು ಜಾರಿಗೆ ತರಲಾಗಿತ್ತು.
ಮೊಬೈಲ್ ಬಳಕೆ ತಡೆಯಲು ಜಾಮರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು. ಅಪರಾಧಿಗಳ ಕೈಗೆ ಮೊಬೈಲ್ , ಟಿವಿ, ಮಾದಕವಸ್ತುಗಳು ಸಿಗಲು ಸಹಕರಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ ವೈ ರಾಘವೇಂದ್ರ, ಶಾಸಕ ಎಸ್ ಎನ್ ಚೆನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್ ಕೆ ಜಗದೀಶ್, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಮಾಧ್ಯಮ ಸಂಚಾಲಕ ಕೆ. ವಿ. ಅಣ್ಣಪ್ಪ, ಮುಖಂಡ ಮಾಲತೇಶ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ






