ಶಿವಮೊಗ್ಗ ಜಿಲ್ಲಾದ್ಯಂತ ಸಾಲು ಸಾಲು ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ-ಬಿಗಿ ಪೋಲಿಸ್ ಬಂದೋಬಸ್ತ
ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪೂರ್ವಭಾವಿ ಕ್ರಮ ಬಂದೋಬಸ್ತ್ ಕುರಿತ ಮಾಹಿತಿ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲಾದ್ಯಂತ ಸಾಲು ಸಾಲು ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಪರ್ವ ಇಂದಿನಿಂದ ಆರಂಭಗೊಂಡಿದೆ. ಇಂದು ಸೆ.4ರಂದು ಭದ್ರಾವತಿ ನಗರದಲ್ಲಿ ಹಿಂದೂಮಹಾಸಭಾ ಗಣಪತಿ ಮೆರವಣಿಗೆ ಹಮ್ಮಿಕ್ಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಭದ್ರತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.
ಶಿವಮೊಗ್ಗ ಜಿಲ್ಲಾದ್ಯಂತ ಸಾವಿರಾರು ಸಿಸಿ ಕ್ಯಾಮರಾಗಳನ್ನ ಅಳವಡಿಸಿ ಲೈವ್ ಸ್ಟ್ರೀಮಿಂಗ್ ಮೂಲಕ ಕಣ್ಣಿಟ್ಟಿದೆ.. ಇನ್ನೂ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪೂರ್ವಭಾವಿ ಕ್ರಮ ಬಂದೋಬಸ್ತ್ ಕುರಿತ ಮಾಹಿತಿ ಪಡೆದಿದ್ದಾರೆ.
ಇನ್ನು ಬಂದೋಬಸ್ತ್ ಕುರಿತು ಹಲವು ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಶಾಂತಿ ಕದಡುವ ಶಂಕಿತ 86 ಜನ ಕಿಡಿಗೇಡಿಗಳ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ರೂಟ್ ಮಾರ್ಚ್, ಸಶಸ್ತ್ರ ಮೀಸಲು ಪಡೆ, ಶ್ವಾನದಳ, ಡ್ರೋಣ್ ತಂಡದಿಂದ ಪರಿಶೀಲನೆ ನಡೆಸಲಾಗಿದೆ.
ಇನ್ನು ಗಣೇಶ್ ವಿಸರ್ಜನಾ ಮೆರವಣಿಗೆ ಮಾರ್ಗ ತಪಾಸಣೆ, ಸೂಕ್ಷ್ಮ ಪ್ರದೇಶದಲ್ಲಿ ಪೋರ್ಟಬಲ್ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ.
ಇನ್ನು ಸೆಪ್ಟಂಬರ್ 6 ರಂದು ಶಿವಮೊಗ್ಗದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮೆರವಣಿಗೆ-ಎಡಿಜಿಪಿ ಹಿತೇಂದ್ರರಿಂದ ಹಲವು ಸೂಚನೆ
*ಗಣಪತಿ, ಈದ್ ಮಿಲಾದ್ ಮೆರವಣಿಗೆ ವೇಳೆ ರಸ್ತೆಯ ಎರಡೂ ಬದಿ ತೀವ್ರ ನಿಗಾ
*ಪೆಟ್ರೋಲಿಂಗ್ ಹೆಚ್ಚಳಕ್ಕೆ ಸೂಚನೆ
*ಜನದಟ್ಟಣೆ ಸೂಕ್ಷ್ಮ ಸ್ಥಳಗಳಲ್ಲಿ ದ್ರೋಣ್ ಬಳಸಿ ದೃಶ್ಯಾವಳಿ ಸೆರೆ
*75 ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಮಾಡುವರ ವಿರುದ್ದ ಕ್ರಮ ಕೈಗೊಳ್ಳಲು ಸೂಚನೆ
ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಪ್ರಮುಖ ಗಣಪತಿ ವಿಸರ್ಜನಾ ಮೆರವಣಿಗಳು ಮತ್ತು ಈದಮಿಲಾದ್ ಸಾಂಗವಾಗಿ ಸೌಹಾರ್ದತೆಯಿಂದ ನಡೆಯುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸರ್ವ ಸನ್ನದ್ದವಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ,
ಬ್ಯೂರೋ ಮುಖ್ಯಸ್ಥರು,
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ



