CrimeDistrictShivamoggaSpecial Stories
Trending

ಶಿವಮೊಗ್ಗ: ಸಾಲದ ಕಂತು ಪಾವತಿ ವಿಳಂಬ-ಬಲವಂತದಿಂದ ರೈತನ ಜಾನುವಾರು ಹೊತ್ತೊಯ್ದ ಫೈನಾನ್ಸ್ ಸಿಬ್ಬಂದಿ

ಒಂದು ಹಸು ಅಕಾಲಿಕವಾಗಿ ಸಾವನ್ನಪ್ಪಿದ ಕಾರಣ ರೈತ ಭರತ್ ಅವರು ಆರ್ಥಿಕ ಸಂಕಷ್ಟಕ್ಕೆ ಈಡಾಗೀದ್ದರು. ಇದರಿಂದಾಗಿ ಅವರು ಕೇವಲ ಒಂದು ತಿಂಗಳ ಸಾಲದ ಕಂತನ್ನು ಕಟ್ಟಲು ಆಗಿರಲಿಲ್ಲ. ಈ ಹಿನ್ನಲೆಯಲ್ಲಿ ಏಕಾಏಕಿ ರೈತನ ಮನೆಗೆ ಆಗಮಿಸಿದ ಫೈನಾನ್ಸ್ ಕಂಪನಿ ಸಿಬ್ಬಂದಿ, ಎರಡು ಹಸು ಹಾಗಿ ಒಂದು ಎತ್ತನ್ನು ಬಲವಂತದಿಂದಲೇ ಗೂಡ್ಸ್ ವಾಹನದಲ್ಲಿ ಹೊತ್ತೊಯ್ದಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಸಾಲದ ಕಂತು ಪಾವತಿಸಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿಯು ರೈತನೊಬ್ಬನ ಜಾನುವಾರುಗಳನ್ನು ಬಲವಂತವಾಗಿ ಹೊತ್ತೊಯ್ದ ಘಟನೆ ಶಿವಮೊಗ್ಗದ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಗ್ರಾಮದ ಭರತ್ ಎಂಬ ರೈತನು, 2 ಲಕ್ಷ ಸಾಲ ಪಡೆದು ಹಸು ಹಾಗು ಎತ್ತುಗಳನ್ನು ಖರೀಧಿ ಮಾಡಿದ್ದರು. ಪ್ರತಿಯಾಗಿ ಪ್ರತಿ ತಿಂಗಳು ಸಾಲದ ಕಂತು ಪಾವತಿಸುತ್ತಿದ್ದರು. ಈಗಾಗಲೇ ಒಂದುವರೆ ಲಕ್ಷರೂಗಳಷ್ಟು ಸಾಲವನ್ನು ಮರುಪಾವತಿ ಮಾಡಿದ್ದರು.

ಈ ಮಧ್ಯೆ ಒಂದು ಹಸು ಅಕಾಲಿಕವಾಗಿ ಸಾವನ್ನಪ್ಪಿದ ಕಾರಣ ರೈತ ಭರತ್ ಅವರು ಆರ್ಥಿಕ ಸಂಕಷ್ಟಕ್ಕೆ ಈಡಾಗೀದ್ದರು. ಇದರಿಂದಾಗಿ ಅವರು ಕೇವಲ ಒಂದು ತಿಂಗಳ ಸಾಲದ ಕಂತನ್ನು ಕಟ್ಟಲು ಆಗಿರಲಿಲ್ಲ.
ಈ ಹಿನ್ನಲೆಯಲ್ಲಿ ಏಕಾಏಕಿ ರೈತನ ಮನೆಗೆ ಆಗಮಿಸಿದ ಫೈನಾನ್ಸ್ ಕಂಪನಿ ಸಿಬ್ಬಂದಿ, ಎರಡು ಹಸು ಹಾಗಿ ಒಂದು ಎತ್ತನ್ನು ಬಲವಂತದಿಂದಲೇ ಗೂಡ್ಸ್ ವಾಹನದಲ್ಲಿ ಹೊತ್ತೊಯ್ದಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಆ ನಂತರ ರೈತ ಸಂಘಟನೆಗಳ ಮುಖಂಡರು, ಖಾಸಗಿ ಫೈನಾನ್ಸ್ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ವಶಪಡಿಸಿಕೊಂಡಿರುವ ಜಾನುವಾರುಗಳನ್ನು ಕೂಡಲೇ ರೈತನಿಗೆ ಮರಳಿ ನೀಡಬೇಕೆಂಧು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹಿಟ್ಟೂರು ರಾಜು, ಚಂದ್ರಯ್ಯ, ರಾಘವೇಂದ್ರ, ಶೇಖರಪ್ಪ, ಪುರದಾಳು ನಾಗರಾಜ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

Back to top button