Bengaluru RuralBengaluru UrbanDistrictKarnatakaPoliticalShivamoggaSpecial Stories

MADDUR ಕಲ್ಲು ತೂರಾಟ ಪೂರ್ವ ನಿಯೋಜಿತ-ಗಣೇಶೋತ್ಸವಕ್ಕೆ ಕಾಂಗ್ರೆಸ್ ಸರ್ಕಾರದಿಂದಲೇ ವಿಘ್ನ-ರವಿಕುಮಾರ್‌

ಗಣೇಶೋತ್ಸವ ಮೆರವಣಿಗೆ ಗಲಾಟೆಗಳು ಹೆಚ್ಚಾಗಲು ಬಿಜೆಪಿ ಕಾರಣವೆಂದು ಆರೋಪಿಸುತ್ತಿರುವ ಸರ್ಕಾರ , ಕಿಡಿಗೇಡಿಗಳು ಗಲಭೆಕೋರರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯಸಚೇತಕ ರವಿಕುಮಾರ್ ಆರೋಪಿಸಿದರು.

ನಾಡ ಹಬ್ಬ ದಸರಾ , ರಾಷ್ಟ್ರೀಯ ಹಬ್ಬ ಗಣೇಶೋತ್ಸವಕ್ಕೆ ಕಾಂಗ್ರೆಸ್ ಸರ್ಕಾರದಿಂದ ವಿಘ್ನ ಎದುರಾಗಿದೆ ಎಂದು ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಆರೋಪಿಸಿದ್ದಾರೆ.

ಈ ಸರ್ಕಾರ ತೊಲಗಿದ್ರೆ ಮಾತ್ರ ವಿಘ್ನ ವಿನಾಯಕನಿಗೆ ಉಂಟಾದ ವಿಘ್ನಗಳು ನಿವಾರಣೆಯಾಗಲಿದೆ ಎಂದು ಹೇಳಿದ್ದಾರೆ.

ಬುಧವಾರದಂದು ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮದ್ದೂರು ಕಲ್ಲು ತೂರಾಟ ಪೂರ್ವ ನಿಯೋಜಿತ ಕೃತ್ಯವಾಗಿದೆ. ಗಣೇಶ ಮೆರವಣಿಗೆ ವೇಳೆ ಗಲಭೆ ಎಬ್ಬಿಸಲೆಂದೇ ಲೈಟ್ ಆಫ್ ಮಾಡಲಾಗಿತ್ತು.

ದೊಣ್ಣೆಗಳು, ದೊಡ್ಡಗಾತ್ರದ ಕಲ್ಲುಗಳನ್ನ ಸಂಗ್ರಹಿಸಲಾಗಿತ್ತು. ಈ ಘಟನೆ ಹಿಂದೆ ದೊಡ್ಡ ಗಲಭೆ ಸೃಷ್ಟಿಸುವ ಉದ್ದೇಶವಿತ್ತೆಂದು ರವಿಕುಮಾರ್‌ ಆರೋಪಿಸಿದರು.

ಮದ್ದೂರು ಕಲ್ಲು ತೂರಾಟದ ಬಗ್ಗೆ ಇನ್ನೊಂದು ಕೋಮಿನ ಬಂಧುಗಳು ಸಹ ಖಂಡಿಸಿದ್ದಾರೆ. ಗಣೇಶೋತ್ಸವ ಮೆರವಣಿಗೆ ಗಲಾಟೆಗಳು ಹೆಚ್ಚಾಗಲು ಬಿಜೆಪಿ ಕಾರಣವೆಂದು ಆರೋಪಿಸುತ್ತಿರುವ ಸರ್ಕಾರ , ಕಿಡಿಗೇಡಿಗಳು ಗಲಭೆಕೋರರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

Photo Credit-The Hindu

ಪೋಲೀಸರ ಮೇಲೆ ಹಲ್ಲೆ, ಹಸುಗಳ ಹತ್ಯೆ ಕೆಚ್ಚಲು ಕುಯ್ಯುವವರು, ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಹಚ್ಚುವ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲಿನ ಪ್ರಕರಣ ಹಿಂಪಡೆದಿರುವುದರಿಂದಲೇ ಅಪರಾಧಿಗಳು ಯಾವ ಕೇಸ್ ಆದ್ರೂ ಖುಲಾಸೆಯಾಗ್ತೀವಿ ಅಂತ ನಿರ್ಭಯರಾಗಿದ್ದಾರೆ ಎಂದು ಕಿಡಿಕಾರಿದರು.

ಕೆ ಜಿ ಹಳ್ಳಿಯಲ್ಲಿ ನಡೆದ ಅಂದಿನ ಘಟನೆಯ ಸಂಗ್ರಹ ಚಿತ್ರ-Photo Credit-The Fedral

ಕಾಂಗ್ರೆಸ್ ಸರ್ಕಾರದಿಂದ ಒಂದು ಸಮುದಾಯದ ತುಷ್ಠೀಕರಣ ಮಿತಿಮೀರಿದೆ ಎಂದ ಅವರು, ಬೇರೆ ಕೋಮಿನವರ ಹಬ್ಬದಲ್ಲಿ ಡಿಜೆ ಗೆ ಅವಕಾಶ ಕೊಡುವ ಸಿದ್ದರಾಮಯ್ಯ ಸಕಾ೯ರವು, ಗಣೇಶೋತ್ಸವದಲ್ಲಿ ಮಾತ್ರ ನಿರಾಕರಿಸುವುದು ಸಕಾ೯ರದ ತುಷ್ಟಿಕರಣ ನೀತಿ ತೋರಿಸುತ್ತದೆ ಎಂದು ಹೇಳಿದರು.

ಈ ಸಂದಭ೯ದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಕೆ ಜಗದೀಶ್, ಬಿಜೆಪಿ ಮುಖಂಡ ಟಿಡಿ ಮೇಘರಾಜ್ , ಮಾಲ್ತೇಶ್, ಕುಪೇಂದ್ರ, ಸುಧಾಕರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button