ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನು ಪ್ರಬುದ್ಧತೆ ಮತ್ತು ಸಹಿಷ್ಣುತೆಯಿಂದ ಸ್ವೀಕರಿಸಬೇಕು-ಲೋಕಸಭಾಧ್ಯಕ್ಷ ಓಂ ಬಿರ್ಲಾ
ಜನರ ಆಕಾಂಕ್ಷೆಗಳನ್ನು ಈಡೇರಿಸಲು, ನಮ್ಮ ಶಾಸಕಾಂಗ ಸಂಸ್ಥೆಗಳು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತವಾಗಿ ಸ್ಪಂದಿಸುವಂತಿರಬೇಕು ಮತ್ತು ಇದಕ್ಕಾಗಿ ನಾವು ತಾಂತ್ರಿಕ ಸಾಧನಗಳನ್ನು ಸಕಾರಾತ್ಮಕವಾಗಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಕರೆ ನೀಡಿದರು.

ಸದನಗಳಲ್ಲಿ ಹೆಚ್ಚುತ್ತಿರುವ ಅರ್ಥವಿಲ್ಲದ ಗದ್ದಲಗಳು ಮತ್ತು ಅವ್ಯವಸ್ಥೆಯ ಪ್ರವೃತ್ತಿ ಪ್ರಜಾಪ್ರಭುತ್ವದಲ್ಲಿ ಗಂಭೀರವಾದ ಕಳವಳಕಾರಿಯಾದ ವಿಷಯವಾಗಿದ್ದು, ಈ ಪ್ರವೃತ್ತಿಯನ್ನು ಕೊನೆಗಾಣಿಸಲು, ಈ ಕುರಿತಂತೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ಅಗತ್ಯವಿದೆ ಎಂದು ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಅವರು ಹೇಳಿದರು.

ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ನಡೆದ 11 ನೇ ಸಿಪಿಎ ಭಾರತ ಪ್ರದೇಶ ಸಮ್ಮೇಳನದ ಸಮಾರೋಪ ಸಮಾರಂಭ ಮತ್ತು ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ, ಭಿನ್ನಾಭಿಪ್ರಾಯ ಮತ್ತು ಸಂವಾದಗಳು ಪ್ರಜಾಪ್ರಭುತ್ವದ ಆತ್ಮ, ಆದರೆ ಈ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಚರ್ಚೆಗಳು ಮತ್ತು ಸಂವಾದಗಳು ಎಂದಿಗೂ ನಿಲ್ಲಬಾರದು ಎಂದರು
ಜನರ ಆಕಾಂಕ್ಷೆಗಳನ್ನು ಈಡೇರಿಸಲು, ನಮ್ಮ ಶಾಸಕಾಂಗ ಸಂಸ್ಥೆಗಳು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತವಾಗಿ ಸ್ಪಂದಿಸುವಂತಿರಬೇಕು ಮತ್ತು ಇದಕ್ಕಾಗಿ ನಾವು ತಾಂತ್ರಿಕ ಸಾಧನಗಳನ್ನು ಸಕಾರಾತ್ಮಕವಾಗಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಕರೆ ನೀಡಿದರು.

ಶಾಸಕಾಂಗಗಳ ಗ್ರಂಥಾಲಯ, ಸಂಶೋಧನೆ ಮತ್ತು ಉಲ್ಲೇಖ ಶಾಖೆಗಳನ್ನು ಬಲಪಡಿಸುವುದು ಪ್ರಸ್ತುತ ಕಾಲದ ಅವಶ್ಯಕತೆಯಾಗಿದೆ, ಇದರಿಂದ ಸದನಗಳಲ್ಲಿ ಚರ್ಚೆಗಳು ಹೆಚ್ಚು ಆಳವಾದ, ಅರ್ಥಪೂರ್ಣ ಮತ್ತು ಸತ್ಯ ಆಧಾರಿತವಾಗಿ ಚರ್ಚಿಸಬಹುದಾಗಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವೂ ಒಂದು ಮೂಲಭೂತ ಮೌಲ್ಯ. ಆದ್ದರಿಂದ, ಭಿನ್ನಾಭಿಪ್ರಾಯವನ್ನು ಪ್ರಬುದ್ಧತೆ ಮತ್ತು ಸಹಿಷ್ಣುತೆಯಿಂದ ಸ್ವೀಕರಿಸಬೇಕು ಮತ್ತು ಚರ್ಚೆಗಳು ವೈಯಕ್ತಿಕ ದಾಳಿಗಳಲ್ಲ, ವಿಷಯಗಳಿಗೆ ಸೀಮಿತವಾಗಿರಬೇಕು ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಕಿವಿ ಮಾತು ಹೇಳಿದರು.
ಡಿಜಿಟಲೀಕರಣದಿಂದಾಗಿ, ಹೆಚ್ಚಿನ ಶಾಸಕಾಂಗ ಸಭೆಗಳು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುತ್ತಿವೆ. ಮುಂಬರುವ ದಿನಗಳಲ್ಲಿ, ಡಿಜಿಟಲೀಕರಣವನ್ನು ಹೆಚ್ಚು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಸಾರ್ವಜನಿಕರು ಮತ್ತು ಶಾಸಕಾಂಗ ಸಂಸ್ಥೆಗಳ ನಡುವಿನ ಸಂಪರ್ಕವನ್ನು ನಾವು ಮತ್ತಷ್ಟು ಬಲಪಡಿಸಬೇಕೆಂದರು.

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವು ಜಗತ್ತಿಗೆ ಮಾರ್ಗದರ್ಶಕ ಬೆಳಕಾಗಿದೆ, ನಮ್ಮ ದೇಶವನ್ನು ಪ್ರಜಾಪ್ರಭುತ್ವದ ತತ್ವದಡಿ ಹೆಚ್ಚು ಬಲಿಷ್ಠ, ಸ್ಪೂರ್ತಿದಾಯಕ ಮತ್ತು ಅನುಕರಣೀಯವಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಓಂ ಬಿರ್ಲಾ ಹೇಳಿದರು.
ಈ ಸಮ್ಮೇಳನವು ನಮಗೆ ಹೆಚ್ಚಿನ ಜವಾಬ್ದಾರಿಗಳ ಜ್ಞಾನ ಮತ್ತು ಪರಸ್ಪರರ ಅನುಭವಗಳಿಂದ ಕಲಿಯಲು ಸ್ಫೂರ್ತಿ ನೀಡಿದೆ. ನಮ್ಮ ಶಾಸಕಾಂಗ ಸಂಸ್ಥೆಗಳಲ್ಲಿ ರಾಜ್ಯಗಳ ಯಶಸ್ಸು ಮತ್ತು ಉತ್ತಮ ಅಭ್ಯಾಸಗಳನ್ನು ನಾವು ಜಾರಿಗೆ ತಂದರೆ, ಪ್ರಜಾಪ್ರಭುತ್ವವು ಖಂಡಿತವಾಗಿಯೂ ಹೆಚ್ಚು ಪಾರದರ್ಶಕ ಮತ್ತು ಭಾಗವಹಿಸುವಿಕೆಯಾಗುತ್ತದೆ ಎಂದರು.
ಈ ಸಮ್ಮೇಳನದ ಚರ್ಚೆಗಳು ಮತ್ತು ನಿರ್ಧಾರಗಳೊಂದಿಗೆ ಮುಂದುವರಿಯುತ್ತಾ, ನಾವು ಕೊನೆಯ ವ್ಯಕ್ತಿಯ ಧ್ವನಿಯನ್ನು ಸದನಕ್ಕೆ ತೆಗೆದುಕೊಂಡು ಹೋಗಿ ಅದಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ ಎಂದು ಓಂ ಬಿರ್ಲಾ ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿಗೆ ಸನ್ಮಾನ

ಇದೇ ವೇಳೆ ಸತತ 45 ವರ್ಷಗಳಿಂದ ರಾಜ್ಯ ವಿಧಾನಪರಿಷತ್ ಸದಸ್ಯರಾಗಿ ಹಲವು ಖಾತೆಗಳ ಸಚಿವರಾಗಿ ಹಾಗೂ ಮೂರು ಬಾರಿ ಸಭಾಪತಿಗಳಾಗಿ ಸೇವೆ ಸಲ್ಲಿಸಿ ಹಲವಾರು ವಿಶ್ವಮಟ್ಟದ ದಾಖಲೆಗಳಿಗೆ ಭಾಜನರಾಗಿರುವ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಿ ಅವರ ಜನಸೇವೆ, ಸಾಧನೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಕೊಂಡಾಡಲಾಯಿತು.
ಕರ್ನಾಟಕ ವಿಧಾನಮಂಡಲದ ವಿಧಾನಸಭೆ ಹಾಗೂ ಪರಿಷತ್ ಕುರಿತ ಕಾಫಿ ಟೇಬಲ್ ವಿಶೇಷ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ವರದಿ: ಡಾ.ಮಹೇಶ ವಾಳ್ವೇಕರ್
ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಗಳು ವಿಧಾನಸೌಧ
ಹಾಗೂ ಹಿರಿಯ ಪತ್ರಕರ್ತರು, ಮಾಧ್ಯಮ ತಜ್ಞರು, ಮಾಧ್ಯಮ ಸಲಹೆಗಾರರು.
ಬೆಂಗಳೂರು.


