DistrictNationalShivamogga

ಸೆಪ್ಟೆಂಬರ್‌ 17ರಂದು ಮೋದಿ ಅವರಿಗೆ 75ನೇ ವರುಷದ ಹುಟ್ಟುಹಬ್ಬ- ಮಹಿಳೆಯರಿಗೆ ಬೃಹತ್‌ ಉಚಿತ ಆರೋಗ್ಯ ಶಿಬಿರ ಆಯೋಜನೆ

ದೇಶಾದ್ಯಂತ ಮಹಿಳೆಯರಿಗಾಗಿ ಆಯೋಜಿಸಿರುವ ಉಚಿತಾ ಆರೋಗ್ಯ ತಪಾಸಣಾ ಶಿಬಿರವು ಸೆ 17 ರಂದು ಮಧ್ಯಪ್ರದೇಶದ ಇಂದೋರನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಧ್ಯಾಹ್ನ ಹನ್ನೆರಡು ಗಂಟೆಗೆ ಚಾಲನೆ ನೀಡಲಿದ್ದಾರೆ.

ಸೆಪ್ಟೆಂಬರ್‌ 17 . ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರುಷದ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನಲೆಯಲ್ಲಿ ಸೆ.17 ರಿಂದ ಅಕ್ಟೋಬರ್‌ 2ರವರೆಗೆ ಸ್ವಸ್ಥನಾರಿ ಸಶಕ್ತ‌ಪರಿವಾರ ಅಭಿಯಾನದಡಿ ಮಹಿಳೆಯರಿಗಾಗಿ ದೇಶಾದ್ಯಂತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಶಿವಮೊಗ್ಗದಲ್ಲಿಯು ಸಹ ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿದೆಡೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ ವೈರಾಘವೇಂದ್ರ ತಿಳಿಸಿದರು.

ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಮಂಗಳವಾರದಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿ ವೈ ರಾಘವೇಂದ್ರ, ದೇಶಾದ್ಯಂತ ಮಹಿಳೆಯರಿಗಾಗಿ ಆಯೋಜಿಸಿರುವ ಉಚಿತಾ ಆರೋಗ್ಯ ತಪಾಸಣಾ ಶಿಬಿರವು ಸೆ 17 ರಂದು ಮಧ್ಯಪ್ರದೇಶದ ಇಂದೋರನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಧ್ಯಾಹ್ನ ಹನ್ನೆರಡು ಗಂಟೆಗೆ ಚಾಲನೆ ನೀಡಲಿದ್ದಾರೆ.

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಏಳು ಆರೋಗ್ಯ ಸಮುದಾಯ ಕೇಂದ್ರಗಳಲ್ಲಿಯು ಸಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸಂತಸದ ಕ್ಷಣ…ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ

ಗರ್ಭ ಆರೋಗ್ಯ ತಪಾಸಣೆ, ಕ್ಯಾನ್ಸರ್‌ ತಪಾಸಣೆ, ರಕ್ತದಾನ, ದಂತ ಚಿಕಿತ್ಸೆಯ ಪರೀಕ್ಷೆ ನಡೆಯಲಿದೆ ಎಂದು ಸಂಸದ ಬಿ ವೈರಾಘವೇಂದ್ರ ತಿಳಿಸಿದರು.

ನವದೆಹಲಿಯ ತಮ್ಮ ನಿವಾಸದಲ್ಲಿ ತಾಯಿಯೊಂದಿಗೆ ಪ್ರಧಾನಿ ಮೋದಿ ಕಳೆದ ಕ್ಷಣ..

ಸೆ.17ರಂದು ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏಪ೯ಡಿಸಲಾಗಿದ್ದು, ಸೆಪ್ಟೆಂಬರ್‌ 19ರಂದು ಆನಂದಪುರದಲ್ಲಿ, ಸೆಪ್ಟೆಂಬರ್‌ 22ರಂದು ಶಿರಾಳಕೊಪ್ಪದಲ್ಲಿ ಇನ್ನು ಸೆಪ್ಟೆಂಬರ್‌ 24ರಂದು ಆಯನೂರು, ಸೆಪ್ಟೆಂಬರ್‌ 26ರಂದು ಹೊಳಲೂರು ಮತ್ತು ಕನ್ನಂಗಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಿಬಿರ ಏಪ೯ಡಿಸಲಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಈ ಆರೋಗ್ಯ ಶಿಬಿರಗಳು ಅಕ್ಟೋಬರ್‌ 2 ಗಾಂಧಿ ಜಯಂತಿವರೆಗೆ ಮುಂದುವರೆಲಿದ್ದು, ಸಾವ೯ಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ವಿಧಾನಪರಿಷತ್ ಸದಸ್ಯ ಡಿ. ಎಸ್. ಅರುಣ್ , ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್. ಕೆ. ಜಗದೀಶ್ , ನಗರ ಅಧ್ಯಕ್ಷ ಮೋಹನ್ ರೆಡ್ಡಿ ಜಿಲ್ಲಾಸಂಚಾಲಕ ಅಣ್ಣಪ್ಪ ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಇಡಿ ದಿನ ವಿವಿಧ ಕಾಯ೯ಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ನಗರ ಬಿಜೆಪಿ ಮಾಧ್ಯಮ ಸಂಚಾಲಕ ಎಸ್ ಎನ್ ಶ್ರೀನಾಗ ತಿಳಿಸಿದ್ದಾರೆ.

ಮೊದಲಿಗೆ ಬೆಳಿಗ್ಗೆ 9.00 ಗಂಟೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಏಪ೯ಡಿಸಲಾಗಿದ್ದು, ಬೆಳಿಗ್ಗೆ 10.30 ಕ್ಕೆ ನಾರಾಯಣ ಹೃದಯಾಲಯ, ಕುವೆಂಪು ರಸ್ತೆಯಲ್ಲಿ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನಡೆಯಲಿದೆ.

ನಂತರ ಮದ್ಯಾಹ್ನ12.00 ಗಂಟೆಗೆ ತುಂಗಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಆರೋಗ್ಯ ತಪಾಸಣಾ ಶಿಬಿರ ಏಪ೯ಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಎಲ್ಲ ಕಾಯ೯ಕ್ರಮಗಳಲ್ಲಿ ಸಂಸದ ಬಿ ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್, ಹಾಗೂ ಧನಂಜಯ್ ಸರ್ಜಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್ ಕೆ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಪದಾಧಿಕಾರಿಗಳು,ಮಾಜಿ ಪಾಲಿಕೆ ಸದಸ್ಯರುಗಳು, ಬಿಜೆಪಿಯ ಪ್ರಮುಖರು, ಕಾರ್ಯಕರ್ತರು, ಉಪಸ್ಥಿತರಿರುತ್ತಾರೆ ಎಂದು ಎಸ್ ಎನ್ ಶ್ರೀನಾಗ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button