DistrictShivamogga

ಶಿವಮೊಗ್ಗ: ಜಿಲ್ಲೆ ಅಭಿವೃದ್ಧಿ ಮಾಡುವಲ್ಲಿ ಮಧು ಬಂಗಾರಪ್ಪ ವಿಫಲ!ಸಾಲ ಮಾಡಿ ಹಣ ಕೊಟ್ಟ ಬಡವರಿಗೆ ಸಿಗದ ಸೂರು|ಸಚಿವರ ಬೇಜವಾಬ್ದಾರಿ ವರ್ತನೆಗೆ ಕೆ.ಬಿ.ಪ್ರಸನ್ನಕುಮಾರ್‌ ಕಿಡಿ!

ಉಸ್ತುವಾರಿ ಸಚಿವರಾಗಿ ಎರಡೂವರೆ ವರ್ಷ ಕಳೆದರೂ ಕೂಡ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗುತ್ತಿಲ್ಲ. ಸಮರ್ಪಕ ಅನದಾನ ತರುವಲ್ಲಿ ಸಂಪೂರ್ಣ ಮಧು ಬಂಗಾರಪ್ಪ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ, ಜೆ.ಡಿ.ಎಸ್‌ ಮುಖಂಡ ಕೆ.ಬಿ.ಪ್ರಸನ್ನಕುಮಾರ್‌ ಕಿಡಿಕಾರಿದರು.

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್ಪ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಮಾಜಿ ಶಾಸಕ, ಜೆ.ಡಿ.ಎಸ್‌ ಮುಖಂಡ ಕೆ.ಬಿ.ಪ್ರಸನ್ನಕುಮಾರ್‌ ಆರೋಪಿಸಿದ್ದಾರೆ.

ಉಸ್ತುವಾರಿ ಸಚಿವರಾಗಿ ಎರಡೂವರೆ ವರ್ಷ ಕಳೆದರೂ ಕೂಡ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗುತ್ತಿಲ್ಲ. ಸಮರ್ಪಕ ಅನುದಾನ ತರುವಲ್ಲಿ ಮಧು ಬಂಗಾರಪ್ಪ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಮಂಗಳವಾರದಂದು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೋವಿಂದಾಪುರದಲ್ಲಿ ನಾನು ಮತ್ತು ಕೆಎಸ್‌ ಈಶ್ವರಪ್ಪನವರು ಶಾಸಕನಾಗಿದ್ದ ಅವಧಿಯಲ್ಲಿ ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿತ್ತು.

ಈವರೆಗೂ ಕೆಲವರಿಗೆ ಮಾತ್ರ ಮನೆ ವಿತರಿಸಲಾಗಿದೆ. ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸದ ಹಿನ್ನಲೆಯಲ್ಲಿ ನೂರಾರು ಬಡಜನರು ಸಾಲ ಮಾಡಿ ಆಶ್ರಯ ಮನೆಗೆ ಹಣ ಕೊಟ್ಟು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ ಎಂದು ಹೇಳಿದರು.

ಈಗ ಆಶ್ರಯ ಮನೆ ಪಡೆದು ವಾಸಿಸುತ್ತಿರುವರಿಗೆ ಇ-ಖಾತೆ ಆಗಿಲ್ಲವೆಂದು ಹೇಳಿದ ಅವರು, ಇ-ಖಾತೆ ಇಲ್ಲದೆ ನಿವಾಸಿಗಳು ಯಾವುದೇ ಸಾಲ ಪಡೆಯಲು ಬರುವುದಿಲ್ಲ. ಹೀಗಾಗಿ ಜನರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಕೆಲವು ಗುತ್ತಿಗೆದಾರರಿಗೆ 12 ಕೋಟಿರೂ ಅಷ್ಟು ಬಾಕಿ ಇರುವದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಹೀಗಾಗಿ ಜಿಲ್ಲೆಯ ಹಲವೆಡೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಹೇಳಿದರು.

ಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ತಂದು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಮಾಡಲು ಮುಂದಾಗಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಹೇಳಿದರು.

ಇನ್ನು ಓಸಿ ಮತ್ತು ಗಾಂಜಾ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಯುವಕರು ಈ ಚಟಕ್ಕೆ ದಾಸರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ನೂತನ ಎಸ್‌ಪಿ ಅವರು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

ಜೆಡಿಎಸ್‌ ನಗರಾಧ್ಯಕ್ಷ ದೀಪಕ್‌ಸಿಂಗ್‌, ನರಸಿಂಹ ಗಂಧದಮನೆ, ರಾಘವೇಂದ್ರ ಉಡುಪ, ಹೆಚ್‌ ಎಂ ಸಂಘಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button