DistrictKarnatakaShivamogga

ಮರ್ಯಾದೆ ಹತ್ಯೆ ತಡೆಗೆ ʼಮಾನ್ಯʼ ಹೆಸರಿನಲ್ಲಿ ಕಠಿಣ ಕಾಯ್ದೆ|ಸಮಾನಮನಸ್ಕರ ಬಳಗದಿಂದ ಸಹಿ ಸಂಗ್ರಹ|ಡಿ.30 ರಂದು ಸಿಎಂ ಭೇಟಿ-ಟೆಲೆಕ್ಸ್‌ ಎನ್‌.ರವಿಕುಮಾರ್‌

ಇತ್ತೀಚಿನ ವರ್ಷಗಳಲ್ಲಿ ಮರ್ಯಾದಾಗೇಡು ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾನೂನಿನ ಭಯವೇ ಇಲ್ಲದಂತಾಗಿದೆ ಎಂದು ಟೆಲೆಕ್ಸ್ ಎನ್‌ ರವಿಕುಮಾರ್‌ ಹಾಗೂ ದೇಶಾದ್ರಿ ಹೊಸಮನೆ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ: ತಂದೆಯಿಂದಲೇ ಕೊಲ್ಲಲ್ಲಪಟ್ಟ ಹುಬ್ಬಳ್ಳಿಯ ಮಾನ್ಯತಾ ಪಾಟೀಲ್‌ ಹೆಸರಿನಲ್ಲಿ ಮರ್ಯಾದೆ ಹತ್ಯೆ ತಡೆಗೆ ಕಠಿಣ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಹಿರಿಯ ಪತ್ರಕರ್ತ ಟೆಲೆಕ್ಸ್ ಎನ್‌ ರವಿಕುಮಾರ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮರ್ಯಾದೆ ನೆಪದಲ್ಲಿ ನಡೆಯುವ ಇಂತಹ ಹತ್ಯೆಗಳನ್ನು ತಡೆಗಟ್ಟಲು ಮೃತಪಟ್ಟ ಮಾನ್ಯ ಹೆಸರಿನಲ್ಲಿ ಕಾಯ್ದೆ ರಚಿಸಬೇಕು ಎಂದು ಆಗ್ರಹಿಸಿ ಸಮಾನಮನಸ್ಕರ ಬಳಗ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಪತ್ರಕರ್ತರು, ಸಾಹಿತಿಗಳು ಚಿಂತಕರು ಪ್ರಗತಿಪರ ಸಂಘಟನೆಗಳು ಕೈಜೋಡಿಸಿದ್ದಾರೆ ಎಂದು ಟೆಲೆಕ್ಸ್ ಎನ್‌ ರವಿಕುಮಾರ್‌ ಹೇಳಿದರು.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನ ಪತ್ರಿಕಾ ಭವನದಲ್ಲಿ ಶನಿವಾರದಂದು ಪತ್ರಕರ್ತ ದೇಶಾದ್ರಿ ಹೊಸಮನೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿರುವ ಪತ್ರಕರ್ತ ದೇಶಾದ್ರಿ ಹೊಸಮನೆ ಹಾಗು ಟೆಲೆಕ್ಸ್‌ ಎನ್‌ ರವಿಕುಮಾರ್‌

ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ದಲಿತ ಯುವಕನನ್ನ ವಿವಾಹವಾದ ಕಾರಣಕ್ಕೆ ಜಾತಿ ಪ್ರತಿಷ್ಠೆಗಾಗಿ ಸ್ವಂತ ಮಗಳನ್ನೇ ಗರ್ಭಿಣಿಯೆಂದು ಲೆಕ್ಕಿಸದೇ ಹತ್ಯೆ ಮಾಡಿರುವುದು ಸಮಾಜದ ಆಶಯಕ್ಕೆ ವಿರುದ್ದವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಮರ್ಯಾದಾಗೇಡು ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾನೂನಿನ ಭಯವೇ ಇಲ್ಲದಂತಾಗಿದೆ ಎಂದು ಟೆಲೆಕ್ಸ್ ಎನ್‌ ರವಿಕುಮಾರ್‌ ಹಾಗೂ ದೇಶಾದ್ರಿ ಹೊಸಮನೆ ಕಳವಳ ವ್ಯಕ್ತಪಡಿಸಿದರು.

ಮರ್ಯಾದಾ ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ತಡೆಗೆ ಕಠಿಣ ಕಾನೂನಿನ ಅಗತ್ಯತೆ ಹೆಚ್ಚಾಗಿದೆ.

ಮಾನ್ಯತಾ ಹೆಸರಲ್ಲೇ ಮರ್ಯಾದಾ ಹತ್ಯೆ ತಡೆ ಕಾಯ್ದೆ ಜಾರಿಗೆ ಒತ್ತಾಯಿಸಿ ಸಮಾನಮನಸ್ಕರ ಬಳಗ ಡಿ.30 ರಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಪತ್ರಕರ್ತ ಟೆಲೆಕ್ಸ್ ಎನ್‌ ರವಿಕುಮಾರ್‌ ಹೇಳಿದರು.

ಕಾನೂನಿನ ಭಯವಿಲ್ಲದೇ ಇರುವುದರಿಂದಲೇ ಸಮಾಜದಲ್ಲಿ ಜಾತಿ ಕ್ರೌರ್ಯ ಹೆಚ್ಚಾಗುತ್ತಿದ್ದು ಗರಿಷ್ಠ ಶಿಕ್ಷೆ ವಿಧಿಸುವ ಮರ್ಯಾದೆ ಹತ್ಯೆ ತಡೆಗೆ ನೂತನ ಕಾನೂನು ರೂಪಿಸಬೇಕಿದೆ ಎಂದು ಪತ್ರಕರ್ತ ರವಿಕುಮಾರ್ ಅಭಿಪ್ರಾಯಪಟ್ಟರು.

ಮರ್ಯಾದೆ ಹತ್ಯೆ ತಡೆಗಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಗಳಿವೆ ಅದನ್ನು ರಾಜ್ಯಸರ್ಕಾರಗಳು ಅಳವಡಿಸಿಕೊಳ್ಳಬೇಕಿದೆ.

ಈ ನಿಟ್ಟಿನಲ್ಲಿ ನಮ್ಮ ಅಭಿಯಾನದ ಮುಖಾಂತರ ಹೊಸ ಕಾನೂನು ಜಾರಿಗೆ ಸಿಎಂಗೆ ಆಗ್ರಹಿಸಲಿದ್ದೇವೆ ಸಿಎಂ ಸಿದ್ದರಾಮಯ್ಯ ಮನವಿಗೆ ಪೂರಕವಾಗಿ ಸ್ಪಂದಿಸುವ ವಿಶ್ವಾಸ ವ್ಯಕ್ತಪಡಿಸಿದರು.

Follow Us

Leave a Reply

Your email address will not be published. Required fields are marked *

Back to top button