ಪ್ರಸೂತಿ ತಜ್ಞೆ ಡಾ ಜಯಶ್ರೀ ಹೊಮ್ಮರಡಿ, ಪುತ್ರ ಆಕಾಶ್ ನೇಣಿಗೆ ಶರಣು|ಸಾವಿಗೆ ಕೌಟಂಬಿಕ ಕಲಹವೇ ಕಾರಣ? ವಿನೋಬಾನಗರ ಠಾಣೆಯಲ್ಲಿ ಪ್ರಕರಣ ದಾಖಲು
ಅಶ್ವಥ್ ನಗರ ಬಡಾವಣೆಯಲ್ಲಿ ಇರುವ ತಮ್ಮ ಮನೆಯಲ್ಲಿನ ಮೊದಲ ಮಹಡಿಯಲ್ಲಿ ಡಾ ಜಯಶ್ರೀ ಹೊಮ್ಮರಡಿ ನೇಣಿಗೆ ಶರಣಾದರೇ, ಕೆಳಮಹಡಿಯಲ್ಲಿರುವ ರೂಮ್‌ನಲ್ಲಿ ಆಕಾಶ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಡಿ 5, ನಗರದ ಪ್ರಸೂತಿ ತಜ್ಞೆ ಡಾ ಜಯಶ್ರೀ ಹೊಮ್ಮರಡಿ(55) ಹಾಗೂ ಅವರ ಮಗ ಆಕಾಶ್(34) ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಅಶ್ವಥ್ ನಗರದಲ್ಲಿ ನಡೆದಿದೆ.
ಅಶ್ವಥ್ ನಗರ ಬಡಾವಣೆಯಲ್ಲಿ ಇರುವ ತಮ್ಮ ಮನೆಯಲ್ಲಿನ ಮೊದಲ ಮಹಡಿಯಲ್ಲಿ ಡಾ ಜಯಶ್ರೀ ಹೊಮ್ಮರಡಿ ನೇಣಿಗೆ ಶರಣಾದರೇ, ಕೆಳಮಹಡಿಯಲ್ಲಿರುವ ರೂಮ್‌ನಲ್ಲಿ ಆಕಾಶ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕೌಟಂಬಿಕ ಕಲಹ ಎನ್ನಲಾಗುತ್ತಿದೆಯಾದರೂ ಪೊಲೀಸ್ ತನಿಖೆಯಿಂದ ನಿಜಾಂಶ ಹೊರಬರುವ ನಿರೀಕ್ಷೆಯಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿನೋಬನಗರ ಪೊಲೀಸ್ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸಮಸ್ತ ಆಸ್ತಿ ಸೊಸೆ ಹೆಸರಿಗೆ ಬರೆದಿಟ್ಟು ಆತ್ಮಹತ್ಯೆ
ಸಾವಿಗೂ ಮುನ್ನ ಬರೆದಿರುವ ಡೆತ್ನೋಟ್ ಪತ್ತೆ
ನೇಣಿಗೆ ಶರಣಾಗುವ ಮುನ್ನ ಡಾ ಜಯಶ್ರೀ ಹೊಮ್ಮರಡಿ ಅವರು ಬರೆದಿಟ್ಟ ಡೆತ್‌ನೋಟ್‌ನ್ನು ಪೊಲೀಸರಿಗೆ ಲಭಿಸಿದೆ ಎಂದು ಹೇಳಲಾಗಿದೆ.

ಸಾವಿಗೂ ಮುನ್ನವೇ ತಮ್ಮ ಸಮಸ್ತ ಆಸ್ತಿಯನ್ನು ಸೊಸೆಯ ಹೆಸರಿಗೆ ಡಾ ಜಯಶ್ರೀ ಹೊಮ್ಮರಡಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ.
15 ತಿಂಗಳ ಹಿಂದೆ ಮೃತ ಆಕಾಶ್ ಅವರ ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ಆಕಾಶ್ ಅವರಿಗೆ ಎರಡನೇ ಮದುವೆಯನ್ನು ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.






