DistrictShivamogga

ಹಳೆಯ ಕಾಲದ ನಾಣ್ಯ-ನೋಟುಗಳು, ಅಂಚೆಚೀಟಿಗಳ, ಅಪರೂಪದ ವಸ್ತು ಪ್ರದರ್ಶನ|ಜ.16ರಿಂದ18 ರವರೆಗೆ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಆಯೋಜನೆ|

ದೇಶ ವಿದೇಶದ ನಾಣ್ಯ ಮತ್ತು ನೋಟುಗಳು, ಪಾಲಿಮರ್ ಪ್ಲಾಸ್ಟಿಕ್ ನೋಟುಗಳು ಸೇರಿದಂತೆ ಭಾರತದಲ್ಲಿ ಬ್ರಿಟಿಷರು, ಪೋರ್ಚುಗೀಸರ ಅಳ್ವಿಕೆಯ ಕಾಲದ ನಾಣ್ಯಗಳು, ನೋಟುಗಳು, ಸ್ವತಂತ್ರ ಭಾರತದ ನವೀಕೃತ ವಿಶೇಷ ನಾಣ್ಯ ನೋಟುಗಳು ಸಹ ಪ್ರದರ್ಶನದಲ್ಲಿ ನೋಡಲು ಸಿಗಲಿದೆ.

ಶಿವಮೊಗ್ಗ: ರಾಜ ಮಹಾರಾಜರ ಆಳ್ವಿಕೆ ಕಾಲದ ಆಕರ್ಷಕ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಸೀಸದ ನಾಣ್ಯಗಳನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಶಿವಮೊಗ್ಗದ ಜನರಿಗೆ ಒದಗಿಬಂದಿದೆ.

ಹೌದು..ಜನೆವರಿ 16ರಿಂದ 18ರವರೆಗೆ ಅಪರೂಪದ ವಸ್ತು ಪ್ರದರ್ಶನ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.

ಈ ಕುರಿತು ಮಲೆನಾಡು ನಾಣ್ಯ‌ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟಿನ ಅಧ್ಯಕ್ಷ ದೇವದಾಸ್ ಎನ್. ನಾಯಕ್ ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ವಸ್ತು ಪ್ರದರ್ಶನದಲ್ಲಿ ಭಾರತದ ವಿವಿಧೆಡೆಯಿಂದ ವಿಶ್ವವಿಖ್ಯಾತ ನಾಣ್ಯ ಸಂಗ್ರಾಹಕರು ಪಾಲ್ಗೊಳ್ಳಲಿದ್ದಾರೆ.

ದೇಶ ವಿದೇಶದ ನಾಣ್ಯ ಮತ್ತು ನೋಟುಗಳು, ಪಾಲಿಮರ್ ಪ್ಲಾಸ್ಟಿಕ್ ನೋಟುಗಳು ಸೇರಿದಂತೆ ಭಾರತದಲ್ಲಿ ಬ್ರಿಟಿಷರು, ಪೋರ್ಚುಗೀಸರ ಅಳ್ವಿಕೆಯ ಕಾಲದ ನಾಣ್ಯಗಳು, ನೋಟುಗಳು, ಸ್ವತಂತ್ರ ಭಾರತದ ನವೀಕೃತ ವಿಶೇಷ ನಾಣ್ಯ ನೋಟುಗಳು ಸಹ ಪ್ರದರ್ಶನದಲ್ಲಿ ನೋಡಲು ಸಿಗಲಿದೆ ಎಂದರು.

ದೇಶದ ಮಹಾನ್ ವ್ಯಕ್ತಿಗಳ ಹಾಗೂ ವಿಶೇಷ ಸ್ಮಾರಕಗಳ ಬೆಳ್ಳಿ ನಾಣ್ಯಗಳು ಈ ಪ್ರದರ್ಶನದಲ್ಲಿ ಇರಲಿವೆ ಎಂದು ತಿಳಿಸಿದರು.

ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಶಾಸಕ ಎಸ್. ರುದ್ರೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಕಿಮ್ಮನೆ ಜಯರಾಂ ಸಾಮೂಹಿಕವಾಗಿ ನೆರವೇರಿಸಲಿದ್ದಾರೆ ಎಂದರು.

ಶಿವಮೊಗ್ಗದವರಿಗೆ ಹಾಗೂ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆಯಬೇಕೆಂದು ಮನವಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಚಂದ್ರಕಾಂತ್, ಜಂಟಿಕಾರ್ಯದರ್ಶಿ ಎಲ್. ಸುಬ್ರಹ್ಮಣ್ಯ, ಕೋಶಾಧ್ಯಕ್ಷ ವಿನೋದ್‌ಕುಮಾರ್ ಜೈನ್ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button