ಗೌರವ ಡಾಕ್ಟರೇಟ್ ಎಂಬ ಕರಾಳ ದಂಧೆ..ಭಾಗ-2 ಮಾಜಿ ಸಚಿವರಿಗೂ ಗಾಳ ಹಾಕಿದ್ದ ಖದೀಮರು-ಬಗೆದಷ್ಟು ಬಯಲಾಗ್ತಿದೆ ಅಸಲಿಯತ್ತು….
ಅಬ್ಬಬ್ಬಾ…ಈ ನಕಲಿ ಮಾಫಿಯಾ ಏಜೆಂಟರ ಧೈಯ೯ ಅದೇಷ್ಟು ಇದೆ ಅಂದರೇ, ಬೆರಳಣಿಕೆ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಕಾನೂನು ಸಚಿವ ಸುರೇಶ್ಕುಮಾರ್ ಅವರಿಗೂ ಗೌರವ ಡಾಕ್ಟರೇಟ್ ಪದವಿಯ ಆಮಿಷ ಒಡ್ಡಿದ್ದರು ಎಂದರೇ ನೀವು ನಂಬಲೇಬೇಕು. ಯಾಕೆಂದರೇ ಸ್ವತಃ ಈ ವಿಷಯ ಬಹಿರಂಗ ಮಾಡಿದ್ದು ಸುರೇಶ್ಕುಮಾರ್ ಅವರು. ತಮಗಾದ ಅನುಭವವನ್ನು ಅವರೇ ಹೇಳಿಕೊಂಡಿದ್ದರು.

ನಕಲಿ “ಗೌರವ ಡಾಕ್ಟರೇಟ್” ದಂಧೆ ಯಾವ ಮಟ್ಟಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ ಎಂದರೇ, ಅಗೆದಷ್ಟು, ಬಗೆದಷ್ಟು.. ಇದರ ಹಿಂದಿನ ಮಾಫಿಯಾ ಸಾಮ್ರಾಜ್ಯದ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿದೆ. ನಕಲಿ ಡಾಕ್ಟರೇಟ್ ಪಡೆದವರು ಬರೀ ಕಂಟ್ರಾಕ್ಟರುಗಳಲ್ಲ ಅದರಲ್ಲಿ ರಾಜಕಾರಣಿಗಳು ಇದ್ದಾರೆ ಎಂದು ನ್ಯೂಇಂಡಿಯಾ ಕನ್ನಡ ಈ ಮೊದಲೇ ತಮಗೆ ತಿಳಿಸಿತ್ತು.

ಈ ನಕಲಿ ದಂಧೆಯಲ್ಲಿರುವ ಏಜೆಂಟರು ಎಂತಹ ಮೋಸಗಾರರೆಂದರೆ, ರಾಜ್ಯದ ಪ್ರಾಮಾಣಿಕ ರಾಜಕಾರಣಿಗಳನ್ನು ಸಹ ಇವರು ಬಿಟ್ಟಿಲ್ಲ. ಮಾಜಿ ಕಾನೂನು ಸಚಿವರಿಗೆ ಗಾಳ ಹಾಕಿದ್ದ ಈ ನಕಲಿ ಜಾಲದ ಸದಸ್ಯರ ವಿರುದ್ದ ಕೊನೆಗೆ ಆ ಮಾಜಿ ಸಚಿವರೇ ಪೊಲೀಸರಿಗೆ ದೂರು ನೀಡಿದ ಪ್ರಸಂಗ ಈ ಹಿಂದೆ ನಡೆದಿತ್ತು. ಆ ನಂತರ ನಾಪತ್ತೆಯಾಗಿದ್ದ ಈ ಖದೀಮರು ಈಗ ಮತೆ ಚಾಲ್ತಿಯಲ್ಲಿದ್ದಾರೆ.
ರೂ.1.75ಲಕ್ಷಕ್ಕೆ “ಗೌರವ ಡಾಕ್ಟರೇಟ್”
ಮಾಜಿ ಕಾನೂನು ಸಚಿವರಿಗೆ ಆಫರ್
ಅಬ್ಬಬ್ಬಾ…ಈ ನಕಲಿ ಮಾಫಿಯಾ ಏಜೆಂಟರ ಧೈಯ೯ ಅದೇಷ್ಟು ಇದೆ ಅಂದರೇ, ಬೆರಳಣಿಕೆ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಕಾನೂನು ಸಚಿವ ಸುರೇಶ್ಕುಮಾರ್ ಅವರಿಗೂ ಗೌರವ ಡಾಕ್ಟರೇಟ್ ಪದವಿಯ ಆಮಿಷ ಒಡ್ಡಿದ್ದರು ಎಂದರೇ ನೀವು ನಂಬಲೇಬೇಕು. ಯಾಕೆಂದರೇ ಸ್ವತಃ ಈ ವಿಷಯ ಬಹಿರಂಗ ಮಾಡಿದ್ದು ಸುರೇಶ್ಕುಮಾರ್ ಅವರು. ತಮಗಾದ ಅನುಭವವನ್ನು ಅವರೇ ಹೇಳಿಕೊಂಡಿದ್ದರು.
ಸುರೇಶ್ಕುಮಾರ್ ಅವರಿಗೆ ಸಂಪಕಿ೯ಸಿದ್ದ ಖದೀಮರು, ವಿಶ್ವವಿದ್ಯಾಲಯದ ಶುಲ್ಕ, ದೇಣಿಗೆ, ನೋಂದಣಿ ಮತ್ತು ಸಮಾಲೋಚನಾ ಶುಲ್ಕವಾಗಿ 1.75 ಲಕ್ಷ ರೂ.ಗಳನ್ನು ಪಾವತಿಸಿದರೇ ನಿಮಗೆ ಗೌರವ ಡಾಕ್ಟರೇಟ್ ನೀಡುವದಾಗಿ ಸುರೇಶ್ಕುಮಾರ್ ಅವರಿಗೆ ಹೇಳಿ ಪತ್ರವನ್ನು ಬರೆದಿದ್ದರು.
ಕ್ಷಣ ಕಾಲ ಸ್ವತಃ ಯಮಾರಿದ್ದ ಸುರೇಶ್ಕುಮಾರ್ ಅವರು ತಮಗೆ ಬಂದಿದ್ದ ಪತ್ರದ ಪೂತಿ೯ ವಿವರ ಜಾಲಾಡಿದ್ದಾರೆ. ‘ದಿ ವಿಕ್ಟೋರಿಯಾ ಗ್ಲೋಬಲ್ ಯೂನಿವರ್ಸಿಟಿʼ ಹೆಸರಿನ ಲೆಟರ್ ಹೆಡ್ನಲ್ಲಿ ಬಂದಿದ್ದ ಪತ್ರವು ಹಾಗು ಗೌರವ ಡಾಕ್ಟರೇಟ್ ನೀಡುವದಾಗಿ ಹೇಳಿದ್ದೇರಡು ನಕಲಿ ಎಂಬುದನ್ನು ದೃಡಪಡಿಸಿಕೊಂಡಿದ್ದಾರೆ.

ಇದರಲ್ಲಿನ ಕುತಂತ್ರ ಅಡಗಿರುವುದು ಖಚಿತಪಡಿಸಿಕೊಂಡ ಸುರೇಶ್ಕುಮಾರ್ , ಬಳಿಕ ತಡಮಾಡದೇ ಆಗಿನ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದು, ಇಂತಹ ನಕಲಿ ವಿಶ್ವವಿದ್ಯಾಲಯಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ನಂತರ ಆಗ ಕನಾ೯ಟಕದ ಐಜಿಪಿ ಆಗಿದ್ದ ಆರ್ಕೆ ದತ್ತಾ ಅವರ ಗಮನಕ್ಕೆ ತಂದಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಐಜಿಪಿ ಆರ್ ಕೆ ದತ್ತಾ ಅವರು, ಆಗಿನ ಪೊಲೀಸ್ ಕಮಿಶನರ್ ಪ್ರವೀಣ ಸೂದ ಅವರಿಗೆ ಕರೆ ಮಾಡಿ, ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಅದರಂತೇ ಕಮೀಶನರ್ ಪ್ರವೀಣ ಸೂದ್ ಅವರು, ಸುಮೋಟು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇಲ್ಲಿ ಈ ನಕಲಿ ಮಾಫಿಯಾದ ದಂಧೆಕೋರರು ಪೊಲೀಸರನ್ನು ಯಮಾರಿಸಿದ್ದರು ಎಂಬ ರೋಚಕ ಕಥೆ ಕ್ಷಣ ಕಾಲ ಎಲ್ಲರನ್ನು ದಿಗಿಲು ಬಡಿಯುವಂತೆ ಮಾಡುತ್ತೆ.
ನಕಲಿ “ಗೌಡಾ” ಪ್ರಧಾನ ಕಾಯ೯ಕ್ರಮಕ್ಕೆ
ಐಜಿಪಿ ದತ್ತಾ ಅವರೇ ಮುಖ್ಯ ಅತಿಥಿ?

ತಮ್ಮದು ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ. ನಾವು ರಾಷ್ಟ್ರದ ಅನೇಕ ರಾಜಕಾರಣಿಗಳು, ಸಮಾಜಸೇವಕರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡುತ್ತವೆ. ಬೆಂಗಳೂರಿನಲ್ಲಿ ನಡೆಯುವ ಕಾಯ೯ಕ್ರಮಕ್ಕೆ ನೀವು ಮುಖ್ಯ ಅತಿಥಿಗಳಾಗಿ ಬರಬೇಕೆಂದು ಈ ನಕಲಿ ದಂಧೆಕೋರರು, ಆಗಿನ ಐಜಿಪಿ ಆರ್ ಕೆ ದತ್ತ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.
ಇವರ ವೇಷ ಭೂಷಣ ನೋಡಿದ ಐಜಿಪಿ ದತ್ತಾ ಅವರಿಗೆ ಇವರ ಅಸಲಿಯತ್ತು ಕಂಡು ಹಿಡಿಯಲು ಕ್ಷಣ ಕಾಲ ಮಾತ್ರ ಸಾಕಿತ್ತು. ಇವರು ಖದೀಮರು ಎಂದು ಅವರಿಗೆ ಅದಾಗಲೇ ಮನದಟ್ಟಾಗಿತ್ತು.
ಇವರ ಕಳ್ಳಾಟ ಗೊತ್ತಾಗಿದ್ದೇ ತಡ ಐಜಿಪಿ ದತ್ತ , ಯಾವುದೇ ದಾಖಲೆ ಇರದ ಕಾರಣ ಬರಲು ಆಗುವದಿಲ್ಲ ಎಂದು ಹೇಳಿ ಕಳುಹಿಸಿದ್ದರು.
ಆದರೆ ಹರಾಮಖೋರ ತಂಡವು, ಐಜಿಪಿ ಅವರು ಕಾಯ೯ಕ್ರಮಕ್ಕೆ ಬರಲಿದ್ದಾರೆಂದು ಎಂದು ಆಹ್ವಾನ ಪತ್ರ ಪ್ರಕಟಿಸಿಯೇ ಬಿಟ್ಟಿದ್ದರು. ಮುಂದೆ ಖದೀಮರಿಗೆ ಇದೇ ಹೇಗೆ ಮುಳುವು ಆಗಿದ್ದು ಎಂಬುದನ್ನು ನಂತರ ವಿವರಿಸುತ್ತೇನೆ.
ನಮ್ದು ಇಂಟರ್ನ್ಯಾಷನಲ್ ಯುನಿವ೯ಸಿಟಿ
ಐಷಾರಾಮಿ ಕ್ರೂಸ್ ಇವರ ಕಚೇರಿ
ನಕಲಿ ಗೌರವ ಡಾಕ್ಟರೇಟ್ ಕೊಡುವ ಈ ಖದೀಮರು, ಜನರನ್ನು ಯಾವ ಮಟ್ಟಿಗೆ ಯಮಾರಿಸುತ್ತಾರೆ ಎಂದರೇ, ಸ್ವತಃ ಮಾಜಿ ಸಚಿವ ಸುರೇಶ್ಕುಮಾರ್ ಅವರು ಸ್ವೀಕರಿಸಿದ ಪತ್ರದಲ್ಲಿ ತಿಳಿಸಿದಂತೆ, ‘ದಿ ವಿಕ್ಟೋರಿಯಾ ಗ್ಲೋಬಲ್ ಯೂನಿವರ್ಸಿಟಿʼ ಎಂದು ಹೇಳಿಕೊಂಡು ಬರೆದಿರುವ ಲೆಟರ್ ಹೆಡ್ನಲ್ಲಿ ನಮ್ದು ಇಂಟರನ್ಯಾಷನಲ್ ಯುನಿವ೯ಸಿಟಿ ಆಗಿದ್ದು, ನಮ್ದು ಕಚೇರಿ ಟಕ್ಸ್೯ ಮತ್ತು ಕ್ಯಾಲ್ಕೋಸ್ ದ್ವೀಪದಲ್ಲಿದೆ ಎಂದು ಬರೆದುಕೊಳ್ಳುತ್ತಾರೆ.
ಅಸಲಿಗೆ ಪೊಲೀಸರು ಈ ಕಚೇರಿಯ ಜಾಡನ್ನು ಬೆನ್ನತ್ತಿ ಹೊರಟಾಗ ಇವರು ಕೊಟ್ಟಿರುವ ವಿಳಾಸವು ಐಷಾರಾಮಿ ಕ್ರೂಸ್ ಹೊಂದಿರುವ ಒಂದು ಸಾಗರೋತ್ತರ ಪ್ರದೇಶ್ ಎಂದು ಬೆಳಕಿಗೆ ಬರುತ್ತದೆ.
40 “ಗೌಡಾ”ಸೀಟು ಇವೆ
ಮೊದಲು ಬಂದವರಿಗೆ ಮೊದಲ ಅವಕಾಶ
ಇದನ್ನು ಒದಿದಾಗ ನಾವು ಯಾವ ಮಾಕೆ೯ಟ್ಗೆ ಬಂದಿದಿವೀ ಅಂತ ಅನಿಸುತ್ತೇ. ಆದರೆ ಈ ರೀತಿ ಆಫರ್ ಕೊಟ್ಟಿದ್ದು, ಮಾಜಿ ಸಚಿವ ಸುರೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ. ಕೇವಲ 40 “ಗೌಡಾ” ಸೀಟುಗಳು ಖಾಲಿ ಇವೆ…ಮೊದಲು ಬಂದವರಿಗೆ ಮೊದಲ ಅವಕಾಶ ಎಂದು ಬರೆದಿರುವದನ್ನು ನೋಡಿಯೇ ಸುರೇಶ್ಕುಮಾರ್ ಅವಕ್ಕಾಗಿದ್ದರು.

ಆ ನಂತರ ಸುರೇಶ್ಕುಮಾರ್ ಅವರು ನೀಡಿದ್ದ ದೂರು ತೀವ್ರಗೊಳ್ಳತ್ತಿದ್ದಂತೆ ಗೌಡಾ ಖದೀಮರು ಕೆಲ ಕಾಲ ಕನಾ೯ಟಕದಿಂದ ನಾಪತ್ತೆಯಾಗಿದ್ದರು.
ಇದು ಒಬ್ಬ ಮಾಜಿ ಸಚಿವರ ಜೊತೆ ನಡೆದ ಘಟನೆ ಆಗಿದ್ದರೇ, ಇದೆಲ್ಲ ಗೊತ್ತಿದ್ದರೂ ಕಾಂಗ್ರೆಸ್ನ ಒಬ್ಬ ಮಾಜಿ ಸಚಿವ ಇದೇ ಖದೀಮರಿಂದ ಗೌರವ ಡಾಕ್ಟರೇಟ್ ಪಡೆದು ಮೆರೆದಾಡಿರುವ ಘಟನೆಯನ್ನು ಮುಂದಿನ ವರದಿಯಲ್ಲಿ ನಿಮ್ಮ ಮುಂದೆ ಇಡುತ್ತೇನೆ.
ಓದುಗರೇ, ಈ ನಕಲಿ “ಗೌಡಾ” ದಂಧೆಯ ಮೇಲೆ ನಂಬಿಕೆ ಬರಲಿ ಮತ್ತು ಈ ನಕಲಿ “ಗೌಡಾ”ಗೆ ಮೌಲ್ಯ ಹೆಚ್ಚಾಗಲಿ ಎಂದು ಈ ಖದೀಮರು, ಬೆರಳಿಣಿಕೆ ಒಳ್ಳೆಯ ಜನರನ್ನು ಯಮಾರಿಸಿ ಅವರಿಗೆ ಗೌಡಾ ನೀಡುತ್ತಾರೆ.
ಆಮೇಲೆ ನೋಡಿ, ನಮ್ಮ “ಗೌಡಾ”ಎಷ್ಟು ಪ್ರಾಮುಖ್ಯತೆ ಹೊಂದಿದೆ. ಎಂತಹ ದೊಡ್ಡ ವ್ಯಕ್ತಿಗಳಿಗೆ ನಾವು “ಗೌಡಾʼ ನೀಡಿದ್ದೇವೆ ಎಂದು ಚೌಕಾಸಿಗೆ ಇಳಿಯುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೆನೆಂದರೇ, ಈ “ಗೌಡಾ” ಖದೀಮರು ಈ ಮಟ್ಟಕ್ಕೆ ಬೆಳೆಯಲು ನಮ್ಮಲ್ಲಿರುವ ಕೆಲ ಮಹಾನ ಖದೀಮರ ತೆವಲು, ಪ್ರಚಾರದ ಗೀಳು ಸಹ ಒಂದು ಕಾರಣವಾದರೇ,
ಇನ್ನೊಂದು ಅಸಲಿ ಸಂಗತಿಯೇಂದರೇ, ಈ ನಕಲಿ “ಗೌಡಾ” ಖದೀಮರನ್ನು ಬೆನ್ನತ್ತಿ ನಮಗೆ “ಗೌಡಾ” ಕೊಡಿ ಎಂದು ದುಂಬಾಲು ಬೀಳುವ ಒಂದು ವಗ೯ವೇ ಇದೆ. ಅವರಲ್ಲಿ ಮುಖ್ಯವಾಗಿ ಸಮಾಜ ಸೇವೆ ಹೆಸರಿನಲ್ಲಿ ಪೋಸು ಕೊಡುವ ಕಂಟ್ರಾಕ್ಟರುಗಳು.

ಈ ಮಹಾನ ಖ…ಕಂಟ್ರಾಕ್ಟರುಗಳು, ತಮ್ಮ ಹೆಸರಿನ ಹಿಂದೆ ಡಾ. ಎಂದು ಬರೆದುಕೊಂಡು ಇಲ್ಲಿನ ಕಾನೂನು ಉಲ್ಲಂಘಿಸಿದ್ದಾರೆ. ಐಪಿಸಿ ಕಾಯ್ದೆ ಪ್ರಕಾರ, ಜೈಲು ಸೇರಬೇಕಾದ ಈ ಅಸಲಿ ಖದೀಮರು ನಮ್ಮೊಂದಿಗೆ ಒಬ್ಬರಾಗಿ ಸಾವ೯ಜನಿಕರನ್ನು ಯಮಾರಿಸುತ್ತಿದ್ದಾರೆ. ಆ ಖದೀಮರ ಸಂಪೂಣ೯ ಪಟ್ಟಿಯನ್ನು ಸಾಕ್ಷಿ ಸಮೇತ ಮುಂದಿನ ವರದಿಗಳಲ್ಲಿ ನೀಡಲಿದ್ದೇನೆ.
ಅದೇ ರೀತಿ ಮುಂದಿನ ಭಾಗದಲ್ಲಿ ನಕಲಿ ಗೌರವ ಡಾಕ್ಟರೇಟ್ ಪಡೆದ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಹಾಗು ಮಾಜಿ ಸಚಿವ ಯಾರು? ನಕಲಿ “ಗೌಡಾ” ಪಡೆಯುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆ ಶಾಸಕ ಯಾರು? ಸಾಕ್ಷಿ ಸಮೇತ ಸಮಗ್ರ ವರದಿ ಮುಂದಿನ ಭಾಗದಲ್ಲಿ ನೀಡಲಿದ್ದೇನೆ…ನಿರೀಕ್ಷಿಸಿ..
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕರು
ನ್ಯೂಇಂಡಿಯಾ ಕನ್ನಡ
ಬೆಂಗಳೂರು.
Email- editor@newindiakannada.com


