DharwadKarnatakaSpecial Stories

ಮುಸ್ಲಿಂರ ಹೃದಯದಲ್ಲಿ ಹಿಂದೂಸ್ತಾನ ಅಡಗಿದೆ|ಭಾರತದ ನೆಲವನ್ನು ತಾಯಿಯಂತೆ ಪೂಜಿಸುತ್ತಾರೆ|ಪ್ರಾಮಾಣಿಕತೆ ಎಂಬುದು ಇಸ್ಲಾಂನಲ್ಲಿದೆ-ಅನೀಲ್‌ಕುಮಾರ್‌ ಪಾಟೀಲ್‌

ಭಾರತದ ಮುಸ್ಲಿಂರ ಬಗ್ಗೆ ಮಾತನಾಡುವವರು ಮೊದಲು ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂದು ನೋಡಿಕೊಳ್ಳಲಿ ಎಂದು ಅನೀಲ್‌ಕುಮಾರ್‌ ಪಾಟೀಲ್‌ ಟೀಕಿಸಿದರು.

ಹುಬ್ಬಳ್ಳಿ: ಮುಸ್ಲಿಂರ ಬಗ್ಗೆ ಮಾತನಾಡುವವರು ಒಮ್ಮೆ ಯೋಚಿಸಿ ಮಾತನಾಡಲಿ. ಯಾಕೆಂದರೇ, ಅವರ ಹೃದಯದಲ್ಲಿ ಭಾರತದ ಸಂಸ್ಕ್ರತಿ, ವೈಚಾರಿಕತೆ, ದೇಶದ ಬಗ್ಗೆ ಅವರಿಗೆ ಇರುವ ಭಕ್ತಿ ಗೌರವಗಳನ್ನು ಯಾರು ಅಲ್ಲಗೆಳೆಯಲಾಗದು ಎಂದು ಮಾಜಿ ಮಹಾಪೌರ ಹಾಗು ಧಾರವಾಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅನೀಲ್‌ಕುಮಾರ್‌ ಪಾಟೀಲ್‌ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಖ್ಯಾತಿಯ ರಯೀಸ್ ಅನೀಸ್‌ ಸಬ್ರಿ ಅವರ ಸೂಫಿ ನೈಟ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅನೀಲ್‌ಕುಮಾರ್‌ ಪಾಟೀಲ್‌, ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಂರು ಏನು ಬಯಸುತ್ತಾರೆ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಜೀವನ ಇರುವತನಕ ಹಿಂದೂಸ್ತಾನದಲ್ಲಿಯೇ ಇರಬೇಕಾದ ಅನಿರ್ವಾಯತೆ ಇದೆ ಎಂಬುದನ್ನು ಯಾರು ಮರೆಯಬಾರದು. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ, ಶಾಂತಿ ಸೌಹಾರ್ದತೆಯಿಂದ ಬಾಳಬೇಕಿದೆ ಎಂದು ಕರೆ ನೀಡಿದರು.

ಭಾರತದ ಮುಸ್ಲಿಂರ ಬಗ್ಗೆ ಮಾತನಾಡುವವರು ಮೊದಲು ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂದು ನೋಡಿಕೊಳ್ಳಲಿ ಎಂದು ಅನೀಲ್‌ಕುಮಾರ್‌ ಪಾಟೀಲ್‌ ಟೀಕಿಸಿದರು.

ಮುಸ್ಲಿಂರು ಅಹಿಂಸಾ ಪ್ರತಿಪಾದಕರಾಗಿದ್ದಾರೆ. ಪ್ರಾಮಾಣಿಕತೆ, ದೇಶದ ಬಗ್ಗೆ ಅವರಲ್ಲಿರುವ ಭಕ್ತಿ ಗೌರವ ಇಸ್ಲಾಂನಲ್ಲಿ ಅಡಕವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಭೂಮಿಯ ಮೇಲೆ ಹುಟ್ಟಿದ ನಮಗೆ ಇದು ತಾಯಿ ಸಮಾನವಾಗಿದೆ. ಈ ದೇಶದ ಒಳಿತಿಗೆ ಇರುವ ನಾವು ಸತ್ತ ನಂತರವು ನಮ್ಮ ಗೋರಿ ಮೇಲೆ ಹಿಂದೂಸ್ತಾನ ಎಂದು ಬರೆಯುತ್ತೇವೆ ಎಂಬ ಭಾವನೆ ಮುಸ್ಲಿಂರಲ್ಲಿದೆ ಎಂದು ಅನೀಲ್‌ಕುಮಾರ್‌ ಪಾಟೀಲ್‌ ಶಾಯಿರಿ ಹೇಳುವ ಮೂಲಕ ದೇಶದ ಬಗ್ಗೆ ಮುಸ್ಲಿಂ ಬಾಂಧವರ ಒಡಲಾಳದಲ್ಲಿರುವ ವಿಚಾರವನ್ನು ಹೇಳಿದರು.

ಇಪ್ಪತ್ತು ವರುಷಗಳ ಹಿಂದೆ ಅನೀಲ್‌ಕುಮಾರ್‌ ಪಾಟೀಲ್‌ ಹುಬ್ಬಳ್ಳಿಯಲ್ಲಿ ಸೂಫಿ ನೈಟ್‌ ಏರ್ಪಡಿಸಿದ್ದರು. ಈ ಬಾರಿ ಅನೀಲ್‌ಕುಮಾರ್‌ ಪಾಟೀಲ್‌ ಅವರ ಪುತ್ರ ಮಹಾನಗರ ಪಾಲಿಕೆ ಸದಸ್ಯ ಹಾಗೂ ಹುಬ್ಬಳ್ಳಿ ಧಾರವಾಡ ಯುವ ಕಾಂಗ್ರೆಸ್‌ ಅಧ್ಯಕ್ಷ ಅರ್ಜುನ್‌ ಪಾಟೀಲ್‌ ಆಯೋಜಿಸಿದ್ದರು.

ಇಲ್ಲಿಯ ಗಿರಣಿಚಾಳ ಬಳಿಯ ಬಾಗವಾನ ಮೈದಾನದಲ್ಲಿ ನಡೆದ ಸೂಫಿ ನೈಟ್‌ ಕಾರ್ಯಕ್ರಮಕ್ಕೆ ಅನೀಲ್‌ಕುಮಾರ್‌ ಪಾಟೀಲ್‌ ಅವರ ಅಭಿಮಾನಿಗಳ ಸಂಘವು ಸಹ ಕೈಜೋಡಿಸಿತ್ತು.

ಸೂಫಿ ಗಾಯಕ ರಯೀಸ್‌ ಅನೀಸ್‌ ಸಬ್ರಿ, ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದರು. ನೆರೆದಿದ್ದ ಸಾವಿರಾರು ಸಂಖ್ಯೆಯ ಜನರು ಸೂಫಿ ಗಾಯಕನ ಹಾಡನ್ನು ಆಲಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ವಿಧಾನಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಹು.ಧಾ.ಮಹಾನಗರ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳವೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button