ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಜಾರಿಗೆ ಬರಲು ಬಿಡುವುದಿಲ್ಲ-ಶಾಸಕ ಎಸ್.ಎನ್.ಚೆನ್ನಬಸಪ್ಪ ಗುಡುಗು|ಶಿವಪ್ಪ ನಾಯಕ ವೃತ್ತದಲ್ಲಿ ಬಿಜೆಪಿ ಜನಾಂದೋಲನ ಸಭೆ
ಸರ್ಕಾರದ ವಿರುದ್ದ ಧ್ವನಿ ಎತ್ತದಂತೆ ಮಾಡಿದ್ದ ತುರ್ತುಪರಿಸ್ಥಿತಿ ಹೇರಿಕೆಗೆ ಜನ ಬಗ್ಗಿಲ್ಲ ಜಗ್ಗಿಲ್ಲ. ಈಗ ಕಾಂಗ್ರೆಸ್ ಸರ್ಕಾರ ತರಲು ಹೊರಟಿರುವ ಸಂವಿಧಾನ ವಿರೋಧಿ ಮಸೂದೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ಹೇಳಿದರು.

ಸಾರ್ವಜನಿಕರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುವ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನ ಜಾರಿಗೆ ಬರಲು ಬಿಡುವುದಿಲ್ಲ ಎಂದು ಬಿಜೆಪಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚೆನ್ನಬಸಪ್ಪ ಗುಡುಗಿದರು.
ಶುಕ್ರವಾರದಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಏರ್ಪಡಿಸಲಾಗಿದ್ದ ಜನಾಂದೋಲನ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಕೇವಲ ಬಿಜೆಪಿ ಪಕ್ಷ ಮಾತ್ರವಲ್ಲ ಜನಸಾಮಾನ್ಯರು ಕೂಡ ಸತ್ಯ ಮಾತನಾಡದಂತೆ ತಡೆಹಿಡಿಯಲಿದೆ ಎಂದರು.
ಹಿಂದೂಗಳು ಯಾವತ್ತಿಗೂ ಶಾಂತಿ ಕದಡುವ ಕೆಲಸ ಮಾಡಿಲ್ಲ, ಶಿವಮೊಗ್ಗದಲ್ಲಿ ಏನೇ ಶಾಂತಿಭಂಗ ಕೆಲಸವಾರೂ ಹಿಂದೂ ಸಮಾಜವನ್ನೇ ಕಾಂಗ್ರೆಸ್ ಹೊಣೆಮಾಡುತ್ತದೆ.
ಕಾಂಗ್ರೆಸ್ ಒಲೈಕೆ ರಾಜಕಾರಣಕ್ಕಾಗಿ ದೇಶ ವಿಭಜನೆಯಾಯಿತು. ದೇಶ ವಿಭಜನೆಯ ದುರಂತ ಕುರಿತ ಬರೆಯಲಾದ ಪುಸ್ತಕಗಳ ಮೇಲೂ ಕಾಯ್ದೆ ಪರಿಣಾಮ ಬೀರಲಿದೆ.
ಯಾರೇ ಸತ್ಯ ಮಾತನಾಡಿದ್ರೆ ದ್ವೇಷಕಾರುವ ಭಾಷಣ ಎಂದೇ ಪರಿಗಣಿಸಲಾಗುತ್ತದೆ ಎಂದು ಕಾಯ್ದೆಯಲ್ಲಿನ ಕರಾಳ ಮುಖವನ್ನ ಎಸ್.ಎನ್.ಚೆನ್ನಬಸಪ್ಪ ವಿವರಿಸಿದರು.

ಸರ್ಕಾರದ ವಿರುದ್ದ ಧ್ವನಿ ಎತ್ತದಂತೆ ಮಾಡಿದ್ದ ತುರ್ತುಪರಿಸ್ಥಿತಿ ಹೇರಿಕೆಗೆ ಜನ ಬಗ್ಗಿಲ್ಲ ಜಗ್ಗಿಲ್ಲ. ಈಗ ಕಾಂಗ್ರೆಸ್ ಸರ್ಕಾರ ತರಲು ಹೊರಟಿರುವ ಸಂವಿಧಾನ ವಿರೋಧಿ ಮಸೂದೆಗೆ ಹೆದರುವ ಪ್ರಶ್ನೆಯೇ ಇಲ್ಲ.
ಮಸೂದೆ ವಿರೋಧಿಸಿ ಅವಶ್ಯಕತೆ ಬಿದ್ದರೆ ರಾಷ್ಟ್ರಪತಿ ಬಳಿ ನಿಯೋಗ ಹೋಗಲಿದ್ದೇವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಸೂದೆ ಜಾರಿಗೆ ಬರದಂತೆ ಆಗ್ರಹಿಸುವುದಾಗಿ ಎಸ್.ಎನ್.ಚೆನ್ನಬಸಪ್ಪ ಹೇಳಿದರು.
ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮಸೂದೆ ತಡೆಹಿಡಿಯುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಮಾಜಿ ಶಾಸಕ ಅಶೋಕ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಜ್ಞಾನೇಶ್ವರ, ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಗ್ರಾಮಾಂತರ ಅಧ್ಯಕ್ಷ ಸಿಂಗನಹಳ್ಳಿ ಸುರೇಶ ಮತ್ತಿತರ ಮುಖಂಡರು , ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.









