DistrictHealthKarnatakaShivamoggaSpecial StoriesState

ಮಹಿಳೆ ಹೊಟ್ಟೆಯಲ್ಲಿತ್ತು 12ವರೆ ಕೆಜಿ ಬೃಹತ್ ಗಾತ್ರದ ಗಡ್ಡೆ!ಶಿಕಾರಿಪುರ ಸರ್ಕಾರಿ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ|ವೈದ್ಯರ ತಂಡಕ್ಕೆ ಜನರ ಮೆಚ್ಚುಗೆ

ಇಲ್ಲಿಯ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅಲ್ಲಿನ ವೈದ್ಯ ಡಾ. ಶ್ರೀನಿವಾಸ್ ಬೃಹತ್ ಗಡ್ಡೆ ಇರುವುದನ್ನ ಪತ್ತೆಹಚ್ಚಿದರು.

ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 12ವರೆ ಕೆಜಿ ಬೃಹತ್ ಗಾತ್ರದ ಗಡ್ಡೆಯನ್ನ ಯಶಸ್ವೀ ಶಸ್ತ್ರಕ್ರಿಯೆ ನಡೆಸಿ ಹೊರ ತೆಗೆಯುವ ಮೂಲಕ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಸರ್ಕಾರಿ ಆಸ್ಪತ್ರೆ ವೈದ್ಯರ ತಂಡ ಸೈ ಎನಿಸಿಕೊಂಡಿದೆ.

ಶಿಕಾರಿಪುರದ ಸೊಪ್ಪಿನಕೇರಿ ನಿವಾಸಿ 55 ವರ್ಷದ ಗಂಗಮ್ಮ ಎಂಬುವರಿಗೆ ಕಳೆದ ಒಂದು ವರ್ಷದಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.

ಇಲ್ಲಿಯ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅಲ್ಲಿನ ವೈದ್ಯ ಡಾ. ಶ್ರೀನಿವಾಸ್ ಹೊಟ್ಟೆಯಲ್ಲಿ ಬೃಹತ್ ಗಡ್ಡೆ ಇರುವುದನ್ನ ಪತ್ತೆ ಹಚ್ಚಿದರು.

ನವೆಂಬರ್ 25ರಂದು ಬಹಳ ಕ್ಲಿಷ್ಟವಾದ ಆಪರೇಷನ್ ಮೂಲಕ ಮಹಿಳೆಯ ಹೊಟ್ಟೆಯಲ್ಲಿದ್ದ ಸುಮಾರು 12ವರೆ ತೂಕದ ಬೃಹತ್ ಗಾತ್ರದ ಗೆಡ್ಡೆಯನ್ನ ಹೊರತೆಗೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.

ಶಸ್ತ್ರಕ್ರಿಯೆ ಚಿಕಿತ್ಸೆ ಬಳಿಕ ಗಂಗಮ್ಮನ ಆರೋಗ್ಯ ಸ್ಥಿರವಾಗಿದ್ದು , ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿದ ಡಾ.ಶ್ರೀನಿವಾಸ್, ಡಾ. ಪ್ರಕಾಶ್, ಅರವಳಿಕೆ ತಜ್ಞ ಡಾ. ಗುರುದತ್, ಶುಶ್ರೂಶಕಿ ಭಾರತಿ ಹಾಗೂ ಸಿಬ್ಬಂದಿಗಳ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಆಪರೇಶನ್‌ ಮಾಡಿಸಿದ್ದರೇ ದೊಡ್ಡ ಮೊತ್ತವನ್ನ ಪಾವತಿಸಬೇಕಾಗಿತ್ತು.

ಆದರೆ ಸರ್ಕಾರಿ ಆಸ್ಪತ್ರೆಯಲ್ಲೇ ಸುಗಮವಾಗಿ ಯಶಸ್ವಿಯಾಗಿ ಆಪರೇಶನ್‌ ನಡೆಸಿರೋದು ಬಡವರ್ಗದ ರೋಗಿಗಳಿಗೆ ಆಶಾದಾಯಕವಾಗಿದೆ.

Follow Us

Leave a Reply

Your email address will not be published. Required fields are marked *

Back to top button