DistrictKarnatakaMandyaPoliticalShivamogga
Trending

Santosh Lad: ಬಾಯಲ್ಲಿ ಬಂತು ಕೊಳಕು ಮಾತು! ಏನ್‌..ರೀ..ಸಚಿವರೇ..ಇದೇನು ಸಂಸ್ಕೃತಿ?-ಸಂಪುಟದಿಂದ ಕೈಬಿಡಲು ಬಿ ವೈ ವಿಜಯೇಂದ್ರ ಆಗ್ರಹ

ಹತ್ತು ವರ್ಷದಲ್ಲಿ ಯಾವ ಹಿಂದೂಗಳನ್ನು ಉದ್ದಾರ ಮಾಡಿದ್ದೀರಿ ಎನ್ನುತ್ತಲೇ ಸಂತೋಷ್‌ ಲಾಡ್‌ ಅವರ ಪದಗುಚ್ಛಗಳಿಂದ ಕೀಳುಮಟ್ಟದ ಪದಗಳು ಬರುತೊಡಗುತ್ತವೆ. ಜನರಿಗೆ ಕಾಫಿ, ಟೀ ಯಾಕೆ ಕುಡಿಸುತ್ತೀರಾ ಉ…. ಕುಡಿಸಿ ಎಂದು ಬಿಟ್ಟರು.

ಸಿದ್ದರಾಮಯ್ಯ ಸಂಪುಟದಲ್ಲಿ ಇರುವ ಕೆಲವೇ ಬೆರಳಣಿಕೆಯಷ್ಟು ಬುದ್ದಿವಂತ? ಸಚಿವರುಗಳಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಕೂಡ ಒಬ್ಬರಾಗಿದ್ದರೂ ಎಂದು ಈವರೆಗೆ ಹೇಳಲಾಗುತ್ತಿತ್ತು.

ಸಿದ್ದರಾಮಯ್ಯ ಅವರ ಮೆಚ್ಚಿನ ಸಚಿವರಲ್ಲಿ ಒಬ್ಬರು ಆಗಿದ್ದ ಸಂತೋಷ್‌ ಲಾಡ್‌ ಅವರು ಇಂದು ಆಡಿರುವ ಕೊಳಕು ಮಾತುಗಳು.. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಂತೋಷ್ ಲಾಡ್‌ ಅವರು ತಾವು ಎಂತಹ ಕೀಳುಮಟ್ಟಕ್ಕೆ ಇಳಿಯಬಲ್ಲರು ಎಂಬುದು ಈಗ ಸಾಬೀತುಪಡಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿರುವ ಯಂಗಟರ್ಕ್‌ ಸಚಿವರಲ್ಲಿ ಒಬ್ಬರಾಗಿರುವ ಸಂತೋಷ್‌ ಲಾಡ್‌ ಅವರ ಬಾಯಲ್ಲಿ ಇಂತಹ ಮಾತುಗಳು ಬರುತ್ತವೆ ಎಂದರೇ ನಂಬಲು ಸಾಧ್ಯವಿಲ್ಲ.

ಈ ವಿನಯತೇ..ವಿಧೇಯತೇ…ಆಡುವ ಭಾಷೆಯಲ್ಲಿರಬೇಕು ಎನ್ನುತ್ತಾರೆ ಜನರು…

ಸಂಡೂರು ಪಟ್ಟಣದಲ್ಲಿ ಜನರ ಮುಂದೆ ಧಣಿಯಾಗಿ ಮೆರೆದು ಬಡವರ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸುತ್ತಿದ್ದ ಸಂತೋಷ್‌ ಲಾಡ್‌. ಈಗ ಕೇವಲ ರಾಜಕೀಯಕ್ಕಾಗಿ ಮೊದಲ ಬಾರಿಗೆ ಕೀಳು ಪದಗಳನ್ನು ಆಡುವ ಮೂಲಕ ತಮ್ಮ ವರ್ಚಸ್ಸನ್ನು ತಾವೇ ಹಾಳು ಮಾಡಿಕೊಂಡಿದ್ದಾರೆ.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಮಂಗಳವಾರದಂದು ನಡೆದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಸಂತೋಷ್‌ ಲಾಡ್‌ ಭಾಗವಹಿಸಿದ್ದರು.

ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇಳೆ ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕೊಳಕು ಮಾತುಗಳನ್ನು ಆಡಿದ್ದಾರೆ.

ಅವರಾಡಿದ ಮಾತುಗಳನ್ನು ಸಭ್ಯರು ಯಾರು ಓದುವಂತಿಲ್ಲ. ಹೀಗಾಗಿ ಆರಂಭಿಕ ಪದವನ್ನು ಮಾತ್ರ ಇಲ್ಲಿ ಪ್ರಕಟಿಸುತ್ತಿದ್ದೇವೆ.

ದೆಹಲಿಯಲ್ಲಿ ನಡೆದ ಕಾರ್‌ ಬಾಂಬ್‌ ಸ್ಫೋಟ ವಿಚಾರದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಮೊದಲಿಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರತೊಡಗಿದ್ದಾರೆ.

ಕಳೆದ 10 ವರ್ಷದಲ್ಲಿ 25 ಬಾಂಬ್ ಸ್ಪೋಟ ಆಗಿದೆ. ಪುಲ್ವಾಮ, ಪೆಹಲ್ಗಾಮ್ ಸೇರಿದಂತೆ ಹಲವು ದೊಡ್ಡ ಸ್ಪೋಟಗಳಾಗಿದೆ.

ನಾವು ಕೇಂದ್ರ ಸರ್ಕಾರದ ಜೊತೆಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾತನಾಡಲ್ಲ ಎಂದು ಹೇಳಿದ್ದಾರೆ.

ಆಪರೇಶನ್‌ ಸಿಂಧೂರ್, ಹೆಣ್ಣುಮಕ್ಕಳ ಗೌರವ ಅಂದವರು ಏನು ಮಾಡುತ್ತಿದ್ದಾರೆ? ತಾಲಿಬಾನ್ ಸಚಿವ ಭಾರತಕ್ಕೆ ಬಂದು ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರು ಇರಬಾರದು ಎಂದು ತಾಕೀತು ಮಾಡುತ್ತಾನೆ.

ಅದನ್ನು ಕೇಂದ್ರ ಸರ್ಕಾರ ಒಪ್ಪುತ್ತದೆ. ಆಗ ದೇಶದ ಮಹಿಳೆಯರಿಗೆ ಅವಮಾನ ಆಗಲಿಲ್ವಾ? ಹತ್ತು ವರ್ಷದಲ್ಲಿ ಯಾವ ಹಿಂದೂಗಳನ್ನು ಉದ್ದಾರ ಮಾಡಿದ್ದೀರಿ ಎನ್ನುತ್ತಲೇ ಸಂತೋಷ್‌ ಲಾಡ್‌ ಅವರ ಪದಗುಚ್ಛಗಳಿಂದ ಕೀಳುಮಟ್ಟದ ಪದಗಳು ಬರುತೊಡಗುತ್ತವೆ.

ಜನರಿಗೆ ಕಾಫಿ, ಟೀ ಯಾಕೆ ಕುಡಿಸುತ್ತೀರಾ ಉ…. ಕುಡಿಸಿ ಎಂದು ಬಿಟ್ಟರು.

ತಾವೊಬ್ಬ ಜವಾಬ್ದಾರಿಯುತ ಸಚಿವ ಎಂಬುದನ್ನು ಮೆರೆತು ಕೀಳುಮಟ್ಟದ ಪದಗಳನ್ನು ಬಳಕೆ ಮಾಡಿರುವ ಸಂತೋಷ್‌ ಲಾಡ್‌ ವಿರುದ್ದ ಈಗ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗತೊಡಗಿದೆ.

ಸಚಿವರು ಕ್ಷಮೆಯಾಚಿಸಬೇಕು ಹಾಗು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

“ಪದ ಸಂಸ್ಕ್ರತಿ ವ್ಯಕ್ತಿತ್ವದ ಮುಖಬಿಂಬ ಪ್ರತಿಬಿಂಬಿಸುತ್ತದೆ” ಪದಸಂಸ್ಕೃತಿಯನ್ನು ಮರೆತ ಸಚಿವ ಸಂತೋಷ್ ಲಾಡ್ ಅವರು ತಮ್ಮ ಕೀಳು ಮಟ್ಟದ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ….’ಎಂಬಂತೆ ಸಂತೋಷ್ ಲಾಡ್ ಅವರ ಎಲುಬಿಲ್ಲದ ನಾಲಿಗೆಯಲ್ಲಿ ಹೊಲಸು ಮಾತುಗಳು ಹೊರಹೊಮ್ಮಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೆಮ್ಮೆಯ ಕರ್ನಾಟಕ ಸರ್ಕಾರದ ಜವಾಬ್ದಾರಿಯುತ ಮಂತ್ರಿ ಸ್ಥಾನದಲ್ಲಿ ಕುಳಿತು ಅದರ ಘನತೆಗೆ ಕೊಚ್ಚೆ ಬಳಿಯುವ ಮಾತುಗಳನ್ನಾಡುತ್ತಿದ್ದಾರೆ.

ಸಂತೋಷ್ ಲಾಡ್ ರಂಥವರು, ಕಾಂಗ್ರೆಸ್‌ ಸರ್ಕಾರದ ಸಚಿವರು ಎಂದು ಹೇಳಿಕೊಳ್ಳಲು ಮಾತ್ರ ಲಾಯಕ್ಕಾಗಿದ್ದಾರೆಯೇ ಹೊರತು, ಕರ್ನಾಟಕ ಸರ್ಕಾರದ ಸಚಿವರು ಎಂದು ಹೇಳಿಕೊಳ್ಳುವ ಯಾವ ಯೋಗ್ಯತೆಯೂ ಇಲ್ಲ ಎನ್ನುವುದನ್ನು ಅವರ ಈ ಹಿಂದಿನ ಮಾತುಗಳು ಹಾಗೂ ನಡವಳಿಕೆಗಳು ಸಾಕ್ಷೀಕರಿಸಿವೆ ಎಂದು ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಬಾಂಬ್ ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಬೇಜವಾಬ್ದಾರಿ ಟೀಕೆ ಮಾಡುವ ಭರದಲ್ಲಿ ಜನರಿಗೆ ಕಾಫಿ, ಟೀ ಏಕೆ ಕುಡಿಸ್ತೀರಾ……. ಕುಡಿಸಿ ಎಂಬ ಕೀಳುಮಟ್ಟದ ಪದ ಬಳಸುವ ಮೂಲಕ ಕನ್ನಡದ ಪದ ಸಂಸ್ಕ್ರತಿಯನ್ನು ಮಲಿನಗೊಳಿಸಿದ್ದಾರೆ.

ಕನ್ನಡಿಗರ ಸಂಸ್ಕಾರ ನಡವಳಿಕೆಯನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿಗಳಿಗೆ ತಮ್ಮ ಸರ್ಕಾರದ ಘನತೆಯ ಕುರಿತು ಕನಿಷ್ಠ ಬದ್ಧತೆಯಿದ್ದರೆ ಈ ಕೂಡಲೇ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾ ಗೊಳಿಸುವ ಮೂಲಕ ರಾಜ್ಯದ ಗೌರವ ಉಳಿಸಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button