ಶಿವಮೊಗ್ಗ: ಸೂಡಾ ವಿರುದ್ದ ಭ್ರಷ್ಟಾಚಾರದ ಆರೋಪ|ಎಲ್ಲ ಅಧ್ಯಕ್ಷರ ಅವಧಿಯ ಕಾಮಗಾರಿಯ ತನಿಖೆ ಆಗಲಿ-ಹೆಚ್.ಎಸ್.ಸುಂದರೇಶ್
ಗುತ್ತಿಗೆದಾರರು ನೀಡಿರುವ ದೂರಿನ ಮೇರೆಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಲೋಪವೆಸಗಿರುವ ಅಧಿಕಾರಿಗೆ ಶಿಕ್ಷೆಯಾಗಲಿ ಎಂದು ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.

ಶಿವಮೊಗ್ಗ: ಸೂಡಾದಲ್ಲಿ ಭ್ರಷ್ಟಾಚಾರವಾಗಿದ್ದರೇ ಸೂಕ್ತ ತನಿಖೆ ನಡೆಯಲಿ ಎಂದು ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದ್ದಾರೆ.
ತಮ್ಮ ಅವಧಿ ಸೇರಿದಂತೆ ಈ ಹಿಂದೆ ಇದ್ದ ಎಲ್ಲ ಅಧ್ಯಕ್ಷದ ಅವಧಿಯಲ್ಲಿನ ಕಾಮಗಾರಿಗಳ ಬಗ್ಗೆಯು ಸಮಗ್ರ ತನಿಖೆ ನಡೆಸಬೇಕು ಎಂದಿದ್ದಾರೆ.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಸೂಡಾದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರದಂದು ಮಾಧ್ಯಮಗೋಷ್ಠಿ ಕರೆದಿದ್ದ ಅವರು, ತಾವು ಅಧ್ಯಕ್ಷರಾಗುವ ಮುನ್ನವೇ ಹಲವು ಕಾಮಗಾರಿಗಳು ಮುಗಿದಿವೆ ಎಂದು ಹೇಳಿದರು.
ಗುತ್ತಿಗೆದಾರರು ನೀಡಿರುವ ದೂರಿನ ಮೇರೆಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಲೋಪವೆಸಗಿರುವ ಅಧಿಕಾರಿಗೆ ಶಿಕ್ಷೆಯಾಗಲಿ ಎಂದು ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.
ಈವರೆಗೆ ನಡೆದ ಕಾಮಗಾರಿಗಳಲ್ಲಿ ಲೋಪವಾಗಿದ್ದರೆ, ಸಮಗ್ರ ತನಿಖೆ ನಡೆದು ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ ಎಂದು ಹೇಳಿದರು.
ಇನ್ನು ಪ್ರಾಧಿಕಾರದ ಅಧ್ಯಕ್ಷನಾಗಿ ನನ್ನ ಅವಧಿ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಫೆಭ್ರವರಿ 26ಕ್ಕೆ ತಮ್ಮ ಅಧಿಕಾರವಧಿ ಮುಗಿಯಲಿದೆ ಎಂದರು.
ಪಾರ್ಕಗಳ ಅಭಿವೃದ್ದಿಗೆ ಒತ್ತು|
ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ನಗರದ ಹಲವೆಡೆ ಪಾರ್ಕಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಹೆಚ್.ಎಸ್.ಸುಂದರೇಶ್ ಹೇಳಿದರು.
ಇನ್ನು ಅಮೃತ್ ಸಿಟಿ ಯೋಜನೆಯಡಿ ಜಿಐಎಸ್ ಆಧಾರಿತ ಮಹಾಯೋಜನೆಯ ತಾತ್ಕಾಲಿಕ ಮಾಸ್ಟರ್ ಪ್ಲಾನ್ ಅನುಮೋದನೆಗಾಗಿ ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ ಎಂದರು.
ಸೂಡಾ ವತಿಯಿಂದ ನಿದಿಗೆ ಗ್ರಾಮದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಸತಿ ಬಡಾವಣೆಯ ಅಭಿವೃದ್ದಿಪಡಿಸಲು ಅಂದಾಜುಪಟ್ಟಿ ತಯಾರಿಸಿ ಅನುಮೋದನೆಗಾಗಿ ಆಯುಕ್ತಾಲಯಕ್ಕೆ ಕಳಿಸಿದ್ದು ಒಂದೆರಡು ತಿಂಗಳಲ್ಲಿ ಅನುಮೋದನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಊರಗಡೂರಿನಲ್ಲಿ 4 ಎಕರೆ ಜಾಗದಲ್ಲಿ ಅಪಾರ್ಟಮೆಂಟ್ ನಿರ್ಮಿಸಲು ಆಯುಕ್ತಾಲಯಕ್ಕೆ ಪೂರ್ವಾನುಮತಿಗೆ ಯೋಜನಾ ವರದಿ ಸಲ್ಲಿಸಲಾಗಿದ್ದು, ಈಗಾಗಲೇ ಊರುಗಡೂರಿನಲ್ಲಿ 400 ನಿವೇಶನ ಸಿದ್ದವಾಗಿದ್ದು ಮೀಸಲಾತಿ ಅನ್ವಯ ಹಂಚಿಕೆಯಾಗಬೇಕಿದೆ ಎಂದು ಹೇಳಿದರು.
ಗೋಪಿಶೆಟ್ಟಿ ಗ್ರಾಮದಲ್ಲಿ 30 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸತಿ ಬಡಾವಣೆಗೆ ವಿನ್ಯಾಸ ನಕ್ಷೆ ತಾಂತ್ರಿಕ ಅನುಮತಿ ಬೇಕಿದೆ. ರೈತರಿಂದ ವಶಪಡಿಸಿಕೊಂಡ ಜಮೀನಿನ ಪರಿಹಾರದಲ್ಲಿ ಒಂದಷ್ಟು ತೊಂದರೆಗಳಿವೆ.ಅದೆಲ್ಲ ನಿವಾರಣೆಯಾದ ಬಳಿಕ ಕಡಿಮೆ ದರದಲ್ಲಿ ಬಡವರಿಗೆ ನಿವೇಶನ ನೀಡುವ ಕಾರ್ಯ ಕೈಗೂಡಲಿದೆ ಎಂದರು.
ಪ್ರಾಧಿಕಾರದ ವತಿಯಿಂದ ದೇವಕಾತಿಕೊಪ್ಪ, ಚೆನ್ನಮ್ಮಾಂಬಪುರ, ಆಲ್ಕೊಳ, ಬೊಮ್ಮನಕಟ್ಟೆ ಗ್ರಾಮದ ಕರೆಗಳ ಅಭಿವೃದ್ದಿಪಡಿಸುವ ಯೋಜನೆ ಕೈಗೊಂಡಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಯುಕ್ತ ವಿಶ್ವನಾಥ್.ಎಸ್.ಮುದ್ದಜ್ಜಿ, ಸದಸ್ಯರಾದ ಅರುಣಾಕುಮಾರಿ, ಪ್ರಾನ್ಸಿಸ್, ಎಂಜಿನಿಯರ್ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







