DistrictShivamogga

ಭದ್ರಾವತಿ: ಡಕಾಯಿತಿಗೆ ಹೊಂಚು ಹಾಕಿದ್ದ ರೌಡಿ ಗ್ಯಾಂಗ್|ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ|ರೌಡಿ ಡಿಚ್ಚಿ ಮುಬಾರಕ್‌ ಮೇಲೆ ಪೊಲೀಸ್‌ ಫೈರಿಂಗ್‌|

ಮೂವರು ಪಿಎಸ್‌ಐ ಅವರನ್ನು ಟಾರ್ಗೆಟ್‌ ಮಾಡಿದ್ದ ರೌಡಿಗಳು ಹೊಸಮನೆ ಠಾಣೆ ಪಿಎಸ್ಐ ಸಿದ್ದಪ್ಪ ಎಂಬುವವರ ಮೇಲೆ ಚಾಕುವಿನಿಂದ ಇರಿದಿದ್ದಾರೆ. ರೌಡಿಗಳ ಹೊಡೆತಕ್ಕೆ ಸಿಲುಕಿದ ಟೌನ್ ಠಾಣೆ ಪಿಎಸ್ಐ ಕೃಷ್ಣಕುಮಾರ್ ಕೈ ಬೆರಳು ಮುರಿತವಾಗಿದೆ. ಸಿಬ್ಬಂದಿ ಆದರ್ಶ ಅವರ ಕಾಲಿಗೂ ಗಾಯವಾಗಿದೆ.

ಶಿವಮೊಗ್ಗ: ಡಕಾಯಿತಿ ನಡೆಸಲು ಹೊಂಚು ಹಾಕಿದ್ದ ತಂಡವನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ರೌಡಿಗಳು ಚಾಕುವಿನಿಂದ ಇರಿದು ಕಲ್ಲುಗಳನ್ನು ತೂರುವ ಮೂಲಕ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಭದ್ರಾವತಿ ಬಳಿಯ ಗೌರಪುರದಲ್ಲಿ ನಡೆದಿದೆ. ಪ್ರತಿಯಾಗಿ ಪೊಲೀಸರು ಸಹ ಪ್ರಾಣ ರಕ್ಷಣೆಗೆ ರೌಡಿ ಕಾಲಿಗೆ ಗುಂಡು ಹಾರಿಸಿದ್ದರಿಂದ ಪರಿಸ್ಥಿತಿ ತಹಬಂದಿಗೆ ಬಂದಿದೆ.

ಘಟನೆಯಲ್ಲಿ ಹೊಸಮನೆ ಠಾಣೆ ಪಿಎಸ್ಐ ಸಿದ್ದಪ್ಪ ಎಂಬುವವರ ಮೇಲೆ ಚಾಕುವಿನಿಂದ ಇರಿಯಲಾಗಿದ್ದು ಹಾಗೂ ಪಿಎಸ್‌ಐ ಕೃಷ್ಣಕುಮಾರ್‌ ಅವರ ಕೈಬೆರಳು ಮೂರಿತವಾಗಿದೆ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶುಕ್ರವಾರವಷ್ಟೇ ಇಲ್ಲಿಯ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ರೌಡಿಶೀಟರ್‌ ಡಿಚ್ಚಿ ಮುಬಾರಕ್‌. ಕೇವಲ ಒಂದೇ ದಿನದಲ್ಲಿ ಮತ್ತೆ ಡಕಾಯಿತಿಗೆ ಹೊಂಚು ಹಾಕಿದ್ದ.

ಶನಿವಾರ ಈತ ತನ್ನ 7-8 ಜನ ಸಂಗಡಿಗರೊಂದಿಗೆ ಕಾರು ಮತ್ತು ಸ್ಕೂಟಿಯಲ್ಲಿ ಮಾರಕಾಸ್ತ್ರಗಳೊಂದಿಗೆ ಭದ್ರಾವತಿ ತಾಲೂಕು ಶಿವನಿ ಕ್ರಾಸ್​ ಗೌರಪುರದ ಬಳಿ ಇರುವ ಬಗ್ಗೆ ಭದ್ರಾವತಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಈತನ ಚಲನವಲದ ಬಗ್ಗೆ ನಿಗಾ ಇಟ್ಟಿದ್ದರಿಂದ ಮಾಹಿತಿ ಬಂದ ಕೂಡಲೇ ಭದ್ರಾವತಿ ಡಿವೈಎಸ್​​ಪಿ ಅವರು ರೌಡಿಗಳು ಜಮಾಯಿಸಿದ್ದ ಸ್ಥಳಕ್ಕೆ ಒಂದು ತಂಡ ರಚನೆ ಮಾಡಿ ಕಳುಹಿಸಿದ್ದರು.

ಡಿಚ್ಚಿ ಮುಬಾರಕ್‌ ಹಾಗೂ ಆತನ ತಂಡವನ್ನು ಬಂಧಿಸಲು ರಚಿಸಲಾಗಿದ್ದ ತಂಡದಲ್ಲಿ ಹೊಸಮನೆ ಪಿಎಸ್ಐ ಸಿದ್ದಪ್ಪ ಎಂ.ಪಿ., ಪೇಪರ್ ಟೌನ್ ಠಾಣೆ ಪಿಎಸ್ಐ ಕೃಷ್ಣಕುಮಾರ್, ನ್ಯೂ ಟೌನ್ ಠಾಣೆ ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿಯಾದ ವೆಂಕಟೇಶ್, ಆದರ್ಶ್, ಮಂಜುನಾಥ್, ಚಿನ್ನನಾಯ್ಕ್, ಸುನೀಲ್, ಕಾಂತರಾಜ್, ನಾಗರಾಜ್ ಹಾಗೂ ತೇಜಕುಮಾರ್ ಇದ್ದರು.

ಸ್ಥಳಕ್ಕೆ ಬಂದ ಪೊಲೀಸರು ಮೊದಲಿಗೆ ಡಿಚ್ಚಿ ಮುಬಾರಕ್‌ ಹಾಗೂ ಇತರೆ ರೌಡಿಗಳಿಗೆ ಶರಣಾಗಲು ತಿಳಿಸಿದ್ದಾರೆ. ಆದರೆ ರೌಡಿಶೀಟರ್ ಡಿಚ್ಚಿ ಮುಬಾರಕ್‌ ಹಾಗು ರೌಡಿಗಳು ಮಾರಕಾಸ್ತ್ರಗಳೊಂದಿಗೆ ಪೊಲೀಸರು ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ.

ಮೂವರು ಪಿಎಸ್‌ಐ ಅವರನ್ನು ಟಾರ್ಗೆಟ್‌ ಮಾಡಿದ್ದ ರೌಡಿಗಳು ಹೊಸಮನೆ ಠಾಣೆ ಪಿಎಸ್ಐ ಸಿದ್ದಪ್ಪ ಎಂಬುವವರ ಮೇಲೆ ಚಾಕುವಿನಿಂದ ಇರಿದಿದ್ದಾರೆ. ರೌಡಿಗಳ ಹೊಡೆತಕ್ಕೆ ಸಿಲುಕಿದ ಟೌನ್ ಠಾಣೆ ಪಿಎಸ್ಐ ಕೃಷ್ಣಕುಮಾರ್ ಕೈ ಬೆರಳು ಮುರಿತವಾಗಿದೆ. ಸಿಬ್ಬಂದಿ ಆದರ್ಶ ಅವರ ಕಾಲಿಗೂ ಗಾಯವಾಗಿದೆ.

ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ ಸಹ ಸಂಯಮದಿಂದಲೇ ಇದ್ದ ಪೊಲೀಸರು, ಡಿಚ್ಚಿ ಮುಬಾರಕ್‌ ಹಾಗೂ ಇತರೆ ರೌಡಿಗಳಿಗೆ ಶರಣಾಗಲು ಕೊನೆಯ ವಾರ್ನಿಂಗ್‌ ನೀಡಿದ್ದಾರೆ. ಆದರೆ ರೌಡಿಗಳು ಅಟಾಟೋಪ ಮುಂದುವರೆದಾಗ ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಯಾವಾಗ ಅದಕ್ಕೂ ಬಗ್ಗದೇ ಇದ್ದಾಗ ಪಿಎಸ್‌ಐ ಕೃಷ್ಣಕುಮಾರ್‌, ರೌಡಿ ಡಿಚ್ಚಿ ಮುಬಾರಕ್‌ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ಡಿಚ್ಚಿ ಮುಬಾರಕ್‌ಗೆ ತಗುಲಿದ ನಂತರ ಉಳಿದ ರೌಡಿಗಳಾದ ಜಹೀರ್, ರೆಹಮತ್, ಪಾಷಾ, ಜುನೈದ್ ಮತ್ತು ಮನುಸಿಂಗ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳಿಕ ಮುಬಾರಕ್​ಗೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಭದ್ರಾವತಿಯ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಶಿವಮೊಗ್ಗ ಎಸ್​ಪಿ ನಿಖಿಲ್​, ಗಾಯಾಳು ಪೊಲೀಸ್‌ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಚ್ಚಿ ಮುಬಾರಕ್​ನನ್ನು ಹಿಡಿಯಲು ಹೋದಾಗ ಪೊಲೀಸರ ತಂಡದ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಪೊಲೀಸರು ಗಾಯಗೊಂಡಿದ್ದಾರೆ.

ಇದರಿಂದ ಕೃಷ್ಣಕುಮಾರ್​ ಅವರು ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಶರಣಾಗದಿದ್ದಾಗ ಆತನ ಬಲಗಾಲಿಗೆ ಗುಂಡೇಟು ಹೊಡೆದಿದ್ದಾರೆ.

ಘಟನೆಯಲ್ಲಿ ಪಿಎಸ್ಐ ಸಿದ್ದಪ್ಪ ಅವರ ಕಾಲಿನ ಮೂಳೆ ಮುರಿತವಾಗಿದೆ.‌ ನಮ್ಮ ಸಿಬ್ಬಂದಿ ಆದರ್ಶ ಅವರಿಗೂ ಗಾಯವಾಗಿದೆ. ನಮ್ಮ ತಂಡದವರು ಸದ್ಯ ಆರೋಗ್ಯವಾಗಿದ್ದಾರೆ. ಮುಬಾರಕ್ ವಿರುದ್ಧ 15 ಪ್ರಕರಣಗಳಿವೆ. ಈ ಘಟನೆಯಲ್ಲಿ ನಮ್ಮ ತಂಡವು ಜೀವದ ಹಂಗು ತೊರೆದು ಕೆಲಸ ಮಾಡಿದೆ” ಎಂದು ತಿಳಿಸಿದರು.

Follow Us

Leave a Reply

Your email address will not be published. Required fields are marked *

Back to top button