DharwadDistrictKarnatakaNationalPoliticalSpecial Storiesಎಚ್ಚರಿಕೆ: ನಕಲಿ ಗೌರವ ಡಾಕ್ಟರಗಳಿದ್ದಾರೆ

“ಗೌರವ ಡಾಕ್ಟರೇಟ್‌”ಎಂಬ ಕರಾಳ ದಂಧೆ-ಶ್ರೀಲಂಕಾದ ವಿಶ್ವವಿದ್ಯಾಲಯ ನೀಡುವ ಆ ಪದವಿಗೆ ಭಾರತದಲ್ಲಿ ಇದೆಯಾ ಮಾನ್ಯತೆ? ನಕಲಿ ಪದವಿ ಪಡೆದವರಿಗೆ ಯಾವ ಶಿಕ್ಷೆ ಗೊತ್ತಾ?

ಓದುಗರೇ, ಈ ಗೌರವ ಡಾಕ್ಟರೇಟ್‌ ದಂಧೆಯ ಇಂಚಿಂಚು ಮಾಹಿತಿಯನ್ನು ಸಂಗ್ರಹಿಸಿನೇ, ನಾನು ಈ ವರದಿಯನ್ನು ಬರೆಯುತ್ತಿದ್ದೇನೆ. ಯಾಕೆಂದರೇ ಈ ನಕಲಿ ಗೌರವ ಡಾಕ್ಟರೇಟ್‌ ಪಡೆದವರು ಎಲ್ಲರೂ ಭಾರಿ ಕುಳಗಳೇ ಇದ್ದಾರೆ. ಇವರು ನಕಲಿ ಗೌರವ ಡಾಕ್ಟರೇಟ್‌ ಪಡೆದ ನಂತರ ತಮ್ಮ ಹೆಸರಿನ ಹಿಂದೆ "ಡಾ."ಎಂದು ಬರೆದುಕೊಳ್ಳುವುದು ಐಪಿಸಿ ಕಾಯ್ದೆಯ ಪ್ರಕಾರ ಕಾನೂನು ಬಾಹಿರ ಎಂಬುದನ್ನು ಖಚಿತಪಡಿಸಿಕೊಂಡೇ ಈ ತನಿಖಾ ವರದಿ ಸಿದ್ದಪಡಿಸಿದ್ದೇನೆ.

ಓದುಗ ಮಹಾಪ್ರಭುಗಳೇ, ಸುಮಾರು 25 ವರುಷಗಳಿಂದ ತನಿಖಾ ಪತ್ರಿಕೋದ್ಯಮದಲ್ಲಿ ಇರುವ ನಾನು ಈ ಅವಧಿಯಲ್ಲಿ ಹಾಯ್‌ ಬೆಂಗಳೂರು, ಲಂಕೇಶ್‌ ಪತ್ರಿಕೆ ಸೇರಿದಂತೆ ವಿವಿಧ ಚಾನೆಲ್‌ಗಳಲ್ಲಿ ಸಹಾಯಕ ಸಂಪಾದಕವರೆಗಿನ ಹುದ್ದೆವರೆಗೆ ಕಾಯ೯ನಿವ೯ಹಿಸಿದ್ದೇನೆ.

ಈಗ ಮೊದಲ ಬಾರಿಗೆ ನನ್ನ ಪ್ರಧಾನ ಸಂಪಾದಕತ್ವದಲ್ಲಿ ನೂತನವಾಗಿ ಡಿಜಿಟಲ್‌ ಪತ್ರಿಕೆ ಆರಂಭಿಸಿದ್ದೆನೆ. ಹೆಸರು ನ್ಯೂ ಇಂಡಿಯಾ ಕನ್ನಡ. ಇದು ನ್ಯೂಸ್‌ ವೆಬ್‌ಸೈಟ್‌.

ಕಳೆದ ಆಗಸ್ಟ್‌ ತಿಂಗಳ ಕೊನೆಯಲ್ಲಿ ಆರಂಭಿಸಿದ ಈ ಡಿಜಿಟಲ್‌ ಪತ್ರಿಕೆ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಅಷ್ಟೇ ಅಲ್ಲ ರಾಷ್ಟ್ರ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಸಹಸ್ರಾರು ಕನ್ನಡಿಗರ ಹೃದಯ ತಲುಪುವಲ್ಲಿ ಯಶಸ್ವಿಯಾಗಿದೆ.

ಈಗ ವಿಷಯಕ್ಕೆ ಬರುತ್ತೇನೆ. ನನ್ನ ಡಿಜಿಟಲ್‌ ಪತ್ರಿಕೆಯಲ್ಲಿ ಹಲವು ರೀತಿಯ ಸುದ್ದಿ ವಿಭಾಗಗಳಿವೆ. ಅದರಲ್ಲಿ ತನಿಖಾ ಪತ್ರಿಕೋದ್ಯಮವು ಒಂದು. ಈಗ ನಾನು ನಿಮಗೆ ತಿಳಿಸಲು ಹೊರಟಿರುವದೆನೆಂದರೇ, ನನ್ನ ಹಿತೈಷಿಗಳು ಹಾಗೂ ತನಿಖಾ ಪತ್ರಿಕೋದ್ಯಮದ ನನ್ನ ಬಾತ್ಮೀದಾರರು ದಾಖಲೆ ಸಮೇತ ಕೆಲವು ದಾಖಲೆಗಳನ್ನು ತಂದಿಟ್ಟಿದ್ದಾರೆ.

ಪ್ರಚಾರದ ತೆವಲು ಹಾಗೂ ಸಮಾಜದಲ್ಲಿ ತಾನೊಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳುವ ಚಪಲಕ್ಕೆ ಹಣ ಕೊಟ್ಟು ನಕಲಿ ಗೌರವ ಡಾಕ್ಟರೇಟ್‌ ಪದವಿ(?) ಗಳನ್ನು ಪಡೆಯುತ್ತಿದ್ದಾರೆ ಎಂಬ ಭಯಾನಕ ಕಥೆಯ ಹಿಂದಿನ ಆಳ ಅಗಲ ನೋಡ್ತಾ ಹೋದಂತೆ ಕರಾಳ ದಂಧೆಯ ವಿಚಿತ್ರ, ವಿಚಿತ್ರ ಮುಖಗಳ ಅನಾವರಣಗೊಳ್ಳುತ್ತ ಸಾಗುತ್ತದೆ.

ಈ ದಂಧೆಯ ಜಾಡು ಹತ್ತಿ ಹೊರಟಾಗ ನಮಗೆ ಥಟ್ಟನೇ ಎದುರಿಗೆ ಬರುವುದು ರಾಮಾಯಣ ಕಥೆಯ ವಿಲನ್‌ ರಾವಣನ ದೇಶ ಶ್ರೀಲಂಕಾ ಮತ್ತು ಅಲ್ಲಿನ ನಕಲಿ ವಿಶ್ವವಿದ್ಯಾಲಗಳು.

ಶ್ರೀಲಂಕಾ ಎಂಬ ದಟ್ಟ ದರಿದ್ರ ದೇಶದಲ್ಲಿನ ಬಹುತೇಕ ಜನರಿಗೆ ಈಗಲೂ ಎರಡು ಹೊತ್ತು ಊಟ ಮಾಡುವ ಪರಿಸ್ಥಿತಿಯಲ್ಲಿಲ್ಲ. ಆದರೆ ಅಲ್ಲಿನ ಕೆಲವರು ದುಡ್ಡು ಮಾಡಲು ನಡೆಸುವ ದಗಲಬಾಜಿ ದಂಧೆಯೇ ಈ ಗೌರವ ಡಾಕ್ಟರೇಟ್‌ ಎಂಬ ನಕಲಿ ಪದವಿಯ ದಂಧೆ.

ವಿಚಿತ್ರ ಹಾಗೂ ಸತ್ಯ ಏನೆಂದರೇ, ಈ ಗೌರವ ಡಾಕ್ಟರೇಟ್‌ ಅನ್ನು ಆ ದೇಶದ ಒಬ್ಬರಿಗೂ ನೀಡಲಾಗುವದಿಲ್ಲ. ಈ ವಿವಿಯ ಕಣ್ಣಿಗೆ ಬೀಳುವುದು ಭಾರತದ ಮೇಧಾವಿಗಳ? ಮೇಲೆ ಮಾತ್ರ. ಬಹುತೇಕ ಭಾರತ ಬಿಟ್ಟು ಬೇರೆ ಯಾವ ದೇಶದ ಜನರಿಗೆ ಈವರೆಗೆ ಶ್ರೀಲಂಕಾ ನಕಲಿ ವಿವಿಗಳು ಗೌರವ ಡಾಕ್ಟರೇಟ ನೀಡಿಲ್ಲ ಎಂಬುದು ಗಮನಾಹ೯.

ಓದುಗರೇ, ಈ ಗೌರವ ಡಾಕ್ಟರೇಟ್‌ ದಂಧೆಯ ಇಂಚಿಂಚು ಮಾಹಿತಿಯನ್ನು ಸಂಗ್ರಹಿಸಿನೇ, ನಾನು ಈ ವರದಿಯನ್ನು ಬರೆಯುತ್ತಿದ್ದೇನೆ. ಯಾಕೆಂದರೇ ಈ ನಕಲಿ ಗೌರವ ಡಾಕ್ಟರೇಟ್‌ ಪಡೆದವರು ಎಲ್ಲರೂ ಭಾರಿ ಕುಳಗಳೇ ಇದ್ದಾರೆ. ಇವರು ನಕಲಿ ಗೌರವ ಡಾಕ್ಟರೇಟ್‌ ಪಡೆದ ನಂತರ ತಮ್ಮ ಹೆಸರಿನ ಹಿಂದೆ “ಡಾ.“ಎಂದು ಬರೆದುಕೊಳ್ಳುವುದು ಐಪಿಸಿ ಕಾಯ್ದೆಯ ಪ್ರಕಾರ ಕಾನೂನು ಬಾಹಿರ ಎಂಬುದನ್ನು ಖಚಿತಪಡಿಸಿಕೊಂಡೇ ಈ ತನಿಖಾ ವರದಿ ಸಿದ್ದಪಡಿಸಿದ್ದೇನೆ.

ಒಂದೇ ದಿನ ಈ ದಂಧೆಯ ಕರಾಳ ಮುಖವನ್ನು ಬಿಚ್ಚಿಡಲು ನಮ್ಮ ಎಲ್ಲ ಪುಟಗಳನ್ನು ತುಂಬಿದರೂ ಸಾಕಾಗುವದಿಲ್ಲ. ಬನ್ನಿ ಮೊದಲ ವರದಿಯಲ್ಲಿ ಆರಂಭಿಕ ಕೆಲ ವಿಷಯಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಶ್ರೀಲಂಕಾದಲ್ಲಿನ ಆ ವಿಶ್ವವಿದ್ಯಾಲಯ ಎಂದು ಹೇಳಿಕೊಂಡು ನೀಡಿರುವ ಗೌರವ ಡಾಕ್ಟರೇಟಗಳು ನಕಲಿ ಪದವಿಗಳನ್ನು ಪಡೆದಿರುವ ಬಹುತೇಕ ನೆರೆಯ ಆಂದ್ರ, ತೆಲಂಗಾಣ, ಮಹಾರಾಷ್ಟ್ರ ಹಾಗೂ ನಮ್ಮ ಕನಾ೯ಟಕದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ತಿನ್ನೋಕೆ ಪರದಾಡುತ್ತಿರುವ ಶ್ರೀಲಂಕಾ ದೇಶದಲ್ಲಿ. ಇಂತಹ ನಕಲಿ ಗೌರವ ಡಾಕ್ಟರೇಟ್‌ ಅನ್ನು ನೀಡುವ ಒಂದು ಜಾಲವೆ ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇದೆ. ಈ ಜಾಲದ ಸದಸ್ಯರೇ ಖುದ್ದಾಗಿ ನಮ್ಮಲ್ಲಿನ ರಾಜಕಾರಣಿಗಳು, ಸಮಾಜಸೇವೆಯ ಹೆಸರೇಳಿಕೊಂಡು ಓಡಾಡುವ ಕಂಟ್ರಾಕ್ಟರುಗಳು, ವ್ಯಾಪಾರಿಗಳನ್ನು ಸ್ವಾಮೀಜಿಗಳನ್ನು ಖುದ್ದಾಗಿ ಭೇಟಿ ಮಾಡಿ, ಡೀಲ್‌ ಕುದುರಿಸುತ್ತಾರೆ.

ಗೌರವ ಡಾಕ್ಟರೇಟ್‌ಗೆ ಇಂತಿಷ್ಟು ರೇಟ್‌ ಎಂದು ದುಡ್ಡು ವಸೂಲಿ ಮಾಡುತ್ತಾರೆ. ಆ ನಂತರ ಹಣ ಪಡೆದ ವ್ಯಕ್ತಿಗಳಿಗೆ ಇವರು ಮೋಸ ಮಾಡುವದಿಲ್ಲ. ಗೌರವ ಡಾಕ್ಟರೇಟ್‌ ಪದವಿ ಸಹ ಪ್ರಧಾನ ಮಾಡುತ್ತಾರೆ. ಆದರೆ ಎಂದಿಗೂ ಗೌರವ ಡಾಕ್ಟರೇಟ್‌ ಪ್ರಧಾನ ಕಾಯ೯ಕ್ರಮವನ್ನು ಅಪ್ಪಿತಪ್ಪಿಯೂ ಶ್ರೀಲಂಕಾದಲ್ಲಿ ಮಾಡುವದಿಲ್ಲ.

ಅಸಲಿಗೆ ಶ್ರೀಲಂಕಾದಲ್ಲಿ ಏನಾದರೂ ಈ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಿದರೇ ಅಲ್ಲಿನ ಸಕಾ೯ರ ಇವರನ್ನು ಒದ್ದು ಜೈಲಿಗೆ ಹಾಕುತ್ತೆ ಎಂಬುದು ಗಮನಾಹ೯ ಸಂಗತಿ. ಪ್ರಶಸ್ತಿ ಕೊಡುವ ನಕಲಿ ವಿಶ್ವವಿದ್ಯಾಲಯ ಹಾಗೂ ನಕಲಿ ಗೌರವ ಡಾಕ್ಟರೇಟ್‌ ಪಡೆಯಲು ಹೋಗುವ ಎಸ್‌ಎಸ್‌ಎಲ್‌ಸಿ ಗಿರಾಕಿಗಳನ್ನು ಅಲ್ಲಿಯ ಪೊಲೀಸರು ಕನಿಷ್ಟ ಒಂದು ವರುಷವಾದರೂ ಜೈಲಿಗೆ ಹಾಕಲು ನಿಯಮಗಳಿವೆ.

ಹೀಗಾಗಿ ಶ್ರೀಲಂಕಾದ ವಿವಿಗಳಿಂದ ಪಡೆಯುವ ಗೌರವ ಡಾಕ್ಟರೇಟ್‌ ಪದವಿಗಳನ್ನು ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಶೇಷವಾಗಿ ಚೈನ್ನೈ ರಾಜ್ಯದಲ್ಲಿ ಪ್ರಧಾನ ಮಾಡಲಾಗುತ್ತದೆ.

ಈ ಮೇಲಿನ ಶೀಷಿ೯ಕೆ ನೋಡಿದಾಗ ಸುಮ್ಮನೆ ಒಂದ್ಸಲ ನಕ್ಕು ಬಿಡಿ. ಮೊದಲೇ ಇದು ನಕಲಿ ದಂಧೆ. ಇದಕ್ಕೇನು ಬೇಕು ಅಹ೯ತೆ ಅನ್ನೋದು ನಿಜ. ನೋಡಿ, ನಕಲಿ ಗೌರವ ಡಾಕ್ಟರೇಟ್‌ ಕೊಡಿಸೋ ಈ ಜಾಲವು ಒಬ್ಬ ಪ್ರತಿಭಾವಂತೆ ಮೇಧಾವಿ, ವಿಜ್ಞಾನಿ, ಸಂಶೋಧಕ, ಸಮಾಜಸೇವಕರನ್ನು ಹಾಗೂ ಸಮಾಜದ ಉನ್ನತ ಸ್ಥರದ ನಾಯಕರನ್ನು ಇವರು ಭೇಟಿಯಾಗೋದಿಲ್ಲ.

ಈ ನಕಲಿ ಗೌರವ ಡಾಕ್ಟರೇಟ್‌ ದಂಧೆಯ ಜಾಲದಲ್ಲಿ ಪ್ರತಿಷ್ಠಿತ ಜನರು ಸೇರಿಕೊಂಡಿದ್ದಾರೆ ಎಂಬುದರೊಂದಿಗೆ ಈ ಕರಾಳ ದಂಧೆಯ ಅನಾವರಣ ಶುರು ಆಗುತ್ತೆ. ತಮ್ಮಲ್ಲಿರುವ ಪಟ್ಟಿ ಹಾಗೂ ಶಿಫಾರಸ್ಸು ಮಾಡಲಾದ ಜನರ ಬಳಿ ತೆರಳುತ್ತಾರೆ ಈ ಜಾಲದ ಸದಸ್ಯರು. ಅಬ್ಬಾ…ಈ ನಕಲಿ ಗೌರವ ಡಾಕ್ಟರೇಟ್‌ ಪಡೆಯುವವರ ಲಿಸ್ಟ್‌ನಲ್ಲಿ ಇದ್ದ ಜನರು ಯಾರು ಅಂತ ನೋಡಿದಾಗ, ಮೊದಲಿಗೆ ಕಾಣಸಿಗುವದೇ ಕಂಟ್ರಾಕ್ಟರ್‌ಗಳು….

ಕನಾ೯ಟಕದ ಕೆಲವು ಕಂಟ್ರಾಕ್ಟರುಗಳಿಗೆ ತಾವು ಮಾಡಿದ ಹಲಕಾ ಕೆಲಸದಿಂದ ಮಾಡಿದ ಹಡಬೆ ದುಡ್ಡಿನ ವಿಚಾರ ಹೊರಬರದಿರಲಿ ಎಂದು ಮಾಡುವ ಮೊದಲ ಕೆಲಸವೆಂದರೇ ಸಮಾಜಸೇವೆ ಎಂಬ ಹಗಲು ನಾಟಕ…ಅದರಲ್ಲಿ ದಾನ ಕೊಡುವುದು, ಕಾಯ೯ಕ್ರಮಗಳಲ್ಲಿ ದುಡ್ಡು ಕೊಟ್ಟು ಅತಿಥಿಗಳಾಗುವುದು, ವಾರದಲ್ಲಿ ನಾಲ್ಕು ದಿನ ಪತ್ರಿಕೆ, ಟಿವಿಗಳಲ್ಲಿ ಪ್ರಚಾರ ಪಡೆಯುವುದು. ಇವರ ದಿನದ ಪ್ರಮುಖ ಕಾಯಕಗಳಲ್ಲೊಂದು.

ಈಗೀಗ ಕಂಟ್ರಾಕ್ಟ್ರರುಗಳಿಗೆ ಬೇನಾಮಿ ದಂಧೆ ಮಾಡಿ ಗಳಿಸಿದ ಹಣದ ಬಲದಿಂದ ರಾಜಕಾರಣಿಯಾಗಿ ಸ್ಥಾನ ಮಾನ ಪಡೆಯುವ ಚಪಲ ಬೇರೆ ಶುರು ಆಗಿದೆ.

ರಾಜಕಾರಣಿಗಳು ಸಹ ತಮ್ಮ ದುಡ್ಡನ್ನು ಈ ಕಾಂಟ್ರಾಕ್ಟರುಗಳಿಗೆ ಬೇನಾಮಿಯಾಗಿ ಹಣ ನೀಡಿ ವ್ಯವಹಾರ ಮಾಡಿಸುವದರಿಂದ ರಾಜಕಾರಣಿಗಳಿಗೆ ಹತ್ತಿರವಿರುವ ಈ ಕಂಟ್ರಾಕ್ಟರುಗಳಿಗೂ ತಾವು ಸಹ ಎಂಎಲ್‌ಎ, ಎಂಎಲ್‌ಸಿ, ರಾಜ್ಯಸಭಾ ಸದಸ್ಯ ಸ್ಥಾನದ ಬಯಕೆ ಮತ್ತು ಚಪಲ ಶುರು ಆಗಿದೆ.

ಅದಕ್ಕೆ ಪೂರಕವಾಗಿ ಇವರು ಮಾಡುವ ಮೊದಲ ಕೆಲಸವೇ ಸಮಾಜಸೇವೆ ಎಂಬ ಹಗಲು ನಾಟಕ ಮತ್ತು ತಾವು ವಿದ್ಯಾವಂತರು ಎಂದು ಜನರ ಮುಂದೆ ತೋರಿಸಿಕೊಳ್ಳಲು ಆಯ್ದುಕೊಳ್ಳುವುದೇ, ಈ ನಕಲಿ ಗೌರವ ಡಾಕ್ಟರೇಟ್‌ ಪದವಿ.

ವಿಷಯ ಬಿಟ್ಟು ಎಲ್ಲಿಗೆ ಹೋಗ್ತಾ ಇದೆ ಅಂತ ನಿಮಗೆ ಅನಿಸಿರಬಹುದು. ಈ ಕರಾಳ ದಂಧೆ ಶುರು ಆಗೋದೆ ಈ ಕಂಟ್ರಾಕ್ಟರುಗಳಿಂದ ಎಂಬುದು.

ಸರಿ. ಈ ಕಂಟ್ರಾಕ್ಟರುಗಳ ಬಳಿ ಬರುವ ಗೌರವ ಡಾಕ್ಟರೇಟ್‌ ದಂಧೆಯ ಜಾಲದ ಸದಸ್ಯರು, ತಾವುಗಳು ಯಾರ್ಯಾರಿಗೆ ಈ ಗೌರವ ಡಾಕ್ಟರೇಟ್‌ ಪದವಿ ಕೊಡಿಸಿದ್ದೇವೆ ಎಂಬುದರ ಪಟ್ಟಿಯನ್ನು ಫೋಟೊ ಸಮೇತ ದಾಖಲೆ ತೋರಿಸುತ್ತದೆ.

ಕಾಯ೯ಕ್ರಮ ವೈಭೋಗದ ಚಿತ್ರಗಳು, ಪಾಲ್ಗೊಂಡ ಘಟಾನುಘಟಿಗಳನ್ನು ನೋಡಿಯೇ ದಂಗು ಬೀಳುವ ಕಂಟ್ರಾಕ್ಟರುಗಳೀಗೆ ಇದು ನಕಲಿ ಎಂದು ಒಳಗೊಳಗೆ ಗೊತ್ತಿರುತ್ತದೆ.

ಆದರೆ ಯಾರಿಗೆ ಗೊತ್ತಾಗುತ್ತೆ? ಎಂಬ ಸೊಕ್ಕು, ಒಂದು ದಿನ ಜೈಲಿನ ಕಂಬಿ ಹಿಂದೆ ಕರೆದುಕೊಂಡು ಹೋಗುತ್ತದೆ ಎಂಬ ಸಣ್ಣ ಭಯ ಇದ್ದೇ ಇರುತ್ತೆ. ಅದರ ಮಧ್ಯೆಯು ಇಷ್ಟು ಲಕ್ಷರೂ ಅಂತ ಕೊಟ್ಟು ಈ ಸಾಲಿನಲ್ಲಿ ಕೊಡುವ ನಕಲಿ ಗೌರವ ಡಾಕ್ಟರೇಟ್‌ ಎಂಬ ಸ್ಲಾಟ್‌ಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಬಿಡುತ್ತಾರೆ.

ಮುಂದೆ ದಕ್ಷಿಣ ಭಾರತದ ಒಂದು ರಾಜ್ಯದಲ್ಲಿ ಗೌರವ ಡಾಕ್ಟರೇಟ್‌ ಎಂಬ ನಕಲಿ ಪದವಿ ಪ್ರಧಾನ ನೀಡಲಾಗುತ್ತದೆ. ಅಲ್ಲಿಗೆ ಬಂದ ಸಭಿಕರಲ್ಲಿ ಹುಡುಕಿದರೂ ಒಬ್ಬ ಮೇಧಾವಿಗಳು ಕಾಣಸಿಗುವದಿಲ್ಲ. ಅಲ್ಲಿ ನೆರೆದವರೆಲ್ಲಾ ಈ ನಕಲಿ ಪದವಿ ಪಡೆದ ಮಹಾನುಭಾವನ ಸಂಬಂಧಿಕರು ಹಾಗು ಸ್ನೇಹಿತರೇ ತುಂಬಿರುತ್ತಾರೆ.

ನ್ಯೂಇಂಡಿಯಾ ಕನ್ನಡಕ್ಕೆ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ, ಕನಾ೯ಟಕದಲ್ಲಿ ನಕಲಿ ಗೌರವ ಡಾಕ್ಟರೇಟ್‌ ಪಡೆದವರಲ್ಲಿ ಬಹುತೇಕ ಜನರಲ್ಲಿ ಹೆಚ್ಚಿನವರು ರಾಜಕಾರಣಿಗಳು ಮತ್ತು ಕಂಟ್ರಾಕ್ಟರರುಗಳು ಇ‌ದ್ದಾರೆ.

ಇವರ ಬಗ್ಗೆ ಮತ್ತು ಇವರುಗಳಿಗೆ ಇದರ ತೆವಲು ಹಚ್ಚಿದವರು ಯಾರು? ಬೇರೆ ದೇಶದ ಅನಧಿಕೃತ ವಿವಿಗಳಿಂದ ಪಡೆದ ನಕಲಿ ಗೌರವ ಡಾಕ್ಟರೇಟ್‌ ಪಡೆದ ನಂತರ ಅಂತಹವರು ತಮ್ಮ ಹೆಸರಿನ ಹಿಂದೆ “ಡಾ.” ಎಂದು ಹಾಕಿಕೊಳ್ಳಲು ನಮ್ಮ ಭಾರತದ ಕಾನೂನು ಏನನ್ನು ಹೇಳುತ್ತದೆ. ಐಪಿಸಿ ಕಲಂ ಸೆಕ್ಷನ್‌ ಪ್ರಕಾರ ಇಂತಹ ನಕಲಿ ಗೌರವ ಡಾಕ್ಟರುಗಳಿಗೆ ಯಾವ ಶಿಕ್ಷೆ ನೀಡಲಾಗುತ್ತೆ. ಇಂಚಿಂಚು ಮಾಹಿತಿಯನ್ನು ನಿಮ್ಮ ಮುಂದೆ ತೆರೆದಿಡುತ್ತೆನೆ.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button