Shivmogga: ಜನಪ್ರಿಯ ಘೋಷಣೆಗಳಿಗಿಂತ ಜನಹಿತಕ್ಕೆ ಆದ್ಯತೆ|ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ|ದೇಶದ ಆರ್ಥಿಕತೆಗೆ ಶಕ್ತಿ ತುಂಬಿದ ಬಜೆಟ್-ಬಿ.ವೈ.ವಿಜಯೇಂದ್ರ
ರೈತರ ಆದಾಯ ದ್ವಿಗುಣಗೊಳ್ಳಲು ದಿಟ್ಟ ಕ್ರಮ, ಆಹಾರ ಮತ್ತು ವಾಣಿಜ್ಯ ಮೀನುಗಾರಿಕೆಗೆ ಶೇ.6ರಷ್ಟು ಹೆಚ್ಚುವರಿ ಅನುದಾನ ನೀಡಿ ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ಪ್ರಶಂಸನೀಯ ಬಜೆಟ್ ಆಗಿದೆ ಎಂದು ಬಿ.ವೈ.ವಿಜಯೇಂದ್ರ ಬಣ್ಣಿಸಿದರು.

ಶಿವಮೊಗ್ಗ: ಈ ಬಾರಿಯ ಕೇಂದ್ರದ ಬಜೆಟ್, ಜನಪ್ರಿಯ ಘೋಷಣೆಗಳಿಗಿಂತ ಜನಹಿತಕ್ಕೆ ಆದ್ಯತೆ ನೀಡಿ, ಭಾರತವನ್ನು ಜಗತ್ತಿನ ಮೂರನೇ ಆರ್ಥಿಕ ದೇಶವನ್ನಾಗಿಸುವ ದೂರದೃಷ್ಠಿ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಬಜೆಟ್, ಜಾಗತಿಕ ಆರ್ಥಿಕ ಅಸ್ಥಿರತೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು, ವಿಕಸಿತ ಭಾರತದ ಗುರಿಯೊಂದಿಗೆ ಹೆಚ್ಚಿನ ಸುಧಾರಣೆಗಳನ್ನ ಕೈಗೊಂಡಿದ್ದಾರೆ ಎಂದರು.
ಈ ಬಾರಿ ಬಜೆಟ್‌ನಲ್ಲಿ ಯುವಕರು, ಬಡವರು, ರೈತರು ಮತ್ತು ಮಹಿಳೆಯರೆಂಬ ಪ್ರಮುಖ ವರ್ಗಗಳನ್ನ ಪರಿಗಣಿಸಿ ಆದ್ಯತೆ ನೀಡಲಾಗಿದೆ.
ಮಹಿಳಾ ಉದ್ಯಮಶೀಲತೆಗೆ ‘ಶೀ ಮಾರ್ಟ್’ ಮೂಲಕ ಉತ್ತೇಜನ , ಪ್ರತೀ ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ಸ್ಥಾಪನೆ, ಹಾಗೂ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.
ಚೆನ್ನೈ–ಬೆಂಗಳೂರು ಮತ್ತು,ಹೈದ್ರಾಬಾದ್–ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಗೆ ಒತ್ತು ನೀಡಿದ್ದು ಈ ಬಾರಿಯ ವಿಶೇಷ ಎಂದು ಹೇಳಿದರು.
ಇನ್ನು ಸಾರಿಗೆ, ಕೈಗಾರಿಕೆ, ಐಟಿಬಿಟಿ, ಪ್ರವಾಸೋದ್ಯಮ, ಕೃತಕ ಬುದ್ಧಿಮತ್ತೆ ಸೇರಿದಂತೆ ಎಲ್ಲ ವಲಯಗಳಿಗೂ ಸಮಾನ ಆದ್ಯತೆ ನೀಡಿ ಆರ್ಥಿಕ ಶಿಸ್ತು ಪಾಲನೆಯಾಗಿದೆ ಎಂದರು.

ರೈತರ ಆದಾಯ ದ್ವಿಗುಣಗೊಳ್ಳಲು ದಿಟ್ಟ ಕ್ರಮ, ಆಹಾರ ಮತ್ತು ವಾಣಿಜ್ಯ ಮೀನುಗಾರಿಕೆಗೆ ಶೇ.6ರಷ್ಟು ಹೆಚ್ಚುವರಿ ಅನುದಾನ ನೀಡಿ ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ಪ್ರಶಂಸನೀಯ ಬಜೆಟ್ ಆಗಿದೆ ಎಂದು ಬಿ.ವೈ.ವಿಜಯೇಂದ್ರ ಬಣ್ಣಿಸಿದರು.
ರಾಜ್ಯ ಸರ್ಕಾರ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ನಿರಂತರ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ, ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ದೆಹಲಿಗೆ ಹೋಗಿ ಪ್ರತಿಭಟಿಸಲಿ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ|
ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದ ರಾಜ್ಯಗಳಿಗೂ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ದಕ್ಷಿಣದ ರಾಜ್ಯಗಳನ್ನು ಎತ್ತಿಕಟ್ಟುವ ಮೂಲಕ ದಕ್ಷಿಣ ಭಾರತದ ನಾಯಕನಾಗಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಅಬಕಾರಿ ಇಲಾಖೆಗೆ 4 ಸಾವಿರ ಕೋಟಿರೂ. ತೆರಿಗೆ ಸಂಗ್ರಹಿಸುವ ಗುರಿ ನೀಡುವ ಮೂಲಕ ಕುಡುಕರ ರಾಜ್ಯ ಮಾಡಲು ಹೊರಟದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ತೆರಿಗೆ ನಮ್ಮ ಹಕ್ಕು|
ಕಾಂಗ್ರೆಸ್ ಪಕ್ಷದ ನಾಟಕ|
ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ತೆರಿಗೆ ಗುರಿಯನ್ನು 40 ಸಾವಿರ ಕೋಟಿ ರೂ.ಗೆ ಏರಿಸಲಾಗಿದೆ. ಅಬಕಾರಿ ಅಧಿಕಾರಿಗಳು ಹೆಚ್ಚು ತೆರಿಗೆ ಸಂಗ್ರಹದ ಗುರಿಯಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಮಹಿಳೆಯರು ಕುಡಿತ ಪ್ರೊತ್ಸಾಹಿಸುವುದನ್ನು ಸಹಿಸದೇ ಮುಂದಿನ ದಿನಗಳಲ್ಲಿ ವಿಧಾನಸೌದದ ಮುಂದೆ ಪ್ರತಿಭಟನೆಗಳಿಯಬಹುದು, ಅಬಕಾರಿ ಗುತ್ತಿಗೆದಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಬಹುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ, ಒಬಿಸಿ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಮಾಜಿ ಶಾಸಕರಾದ ಎಸ್.ರುದ್ರೇಗೌಡ್ರು, ಅಶೋಕ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಒಬಿಸಿ ಜಿಲ್ಲಾಧ್ಯಕ್ಷ ಸುಧಾಕರ್, ಮಾಧ್ಯಮ ಪ್ರಮುಖ್ ಎಸ್.ಚಂದ್ರಶೇಖರ್, ಸಹ ಪ್ರಮುಖ್ ಮಂಜುನಾಥ್ ಎನ್ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







