DistrictShivamoggaUttara Kannada
Trending

ಶಿವಮೊಗ್ಗಕ್ಕೆ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಗಮನ-ಶಂಕರಮಠದಲ್ಲಿ ವ್ಯಾಸ್ತವ್ಯ-ಶ್ರೀಗಳ ಆಶೀರ್ವಾದ ಪಡೆದ ಸಂಸದ ಬಿ ವೈ ರಾಘವೇಂದ್ರ

ಶ್ರೀಗಳ ಆಗಮನದ ಸುದ್ದಿ ತಿಳಿದ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಶಂಕರಮಠಕ್ಕೆ ಆಗಮಿಸಿ, ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ಶಿರಸಿ ಬಳಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶ್ರೀಗಳಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು, ಸೋಮವಾರದಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದಾರೆ.

ಇಲ್ಲಿಯ ಹೊಳೆ ಬಸ್‌ಸ್ಟಾಪ್‌ ಬಳಿ ಇರುವ ಶಂಕರಮಠದಲ್ಲಿ ಅವರು ವ್ಯಾಸ್ತವ್ಯ ಹೂಡಿದ್ದಾರೆ.

ಶ್ರೀಗಳ ಆಗಮನದ ಸುದ್ದಿ ತಿಳಿದ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಶಂಕರಮಠಕ್ಕೆ ಆಗಮಿಸಿ, ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ಇದೇ ವೇಳೆ ಶ್ರೀಗಳು ಸಂಸದ ಬಿ ವೈ ರಾಘವೇಂದ್ರ ಅವರಿಗೆ ಫಲಮಂತ್ರಾಕ್ಷತೆ ನೀಡಿ ಶುಭ ಹಾರೈಸಿದರು. ಬಳಿಕ ಸಂಸದ ಬಿ ವೈ ರಾಘವೇಂದ್ರ ಅವರು ಶಾರದಾಂಬೆಯ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್, ಅಶೋಕ್ ಜಿ ಭಟ್, ಲಕ್ಷ್ಮೀನಾರಾಯಣ ಕಾಶಿ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button