ಪ್ರಧಾನಿ ಮೋದಿಜೀ, ಸ್ವಾತಂತ್ರ್ಯ ಭಾರತ ಕಂಡ ಅಪ್ರತಿಮ ದಿಗ್ಗಜ ನಾಯಕ-ಸಂಸದ ಬಿ ವೈ ರಾಘವೇಂದ್ರ ಅಭಿಮತ
ಮೂರನೇ ಅವಧಿಯಲ್ಲಿಯು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ದೇಶವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರಬಲವಾಗಲಿ, ದೇಶದ ಬಗೆಗಿನ ನಿಮ್ಮ ಪ್ರತಿಯೊಂದು ಅಶೋತ್ತರಗಳು ಪರಿಪೂರ್ಣವಾಗಲಿ, ಜನ ಸಾಮಾನ್ಯರೆಡೆಗಿನ ನಿಮ್ಮ ತುಡಿತಕ್ಕೆ ಭಗವಂತ ಮತ್ತಷ್ಟು ಅಗಾಧವಾದ ಶಕ್ತಿ ತುಂಬಲಿ ಎಂದು ಸಂಸದ ಬಿ ವೈ ರಾಘವೇಂದ್ರ ಹಾರೈಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ವರುಷದ ಹುಟ್ಟು ಹಬ್ಬದ ಸಂದಭ೯ದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾದ್ಯಂತ ವಿವಿಧ ಜನೋಪಯೋಗಿ ಕಾಯ೯ಕ್ರಮಗಳನ್ನು ಹಮ್ಮಿಕೊಂಡಿರುವ ಸಂಸದ ಬಿ ವೈ ರಾಘವೇಂದ್ರ, ಬುಧವಾರದಂದು ಜಿಲ್ಲೆಯಲ್ಲಿ ವಿವಿದೆಡೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಕಾಯ೯ಕ್ರಮಗಳಲ್ಲಿ ಖುದ್ದು ಪಾಲ್ಗೊಂಡಿದ್ದರು.

ಸತತ ನಾಲ್ಕು ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿ, ಕ್ಷೇತ್ರದಲ್ಲಿ ನಿರಂತರ ಮಾಡುತ್ತಿರುವ ಕೆಲಸ ಕಾಯ೯ಗಳಿಂದಲೇ ಪ್ರಧಾನಿ ಮೋದಿ ಅವರ ಆಪ್ತ ಬಳಗದಲ್ಲಿ ಪ್ರಮುಖ ಸ್ಥಾನ ಪಡೆದ ವಿರಳ ವ್ಯಕ್ತಿಗಳಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರು ಸಹ ಒಬ್ಬರು.

ತಮ್ಮ ಮೆಚ್ಚಿನ ಪ್ರಧಾನಿ ಮೋದಿ ಅವರಿಗೆ 75 ನೇ ವರುಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ವೈಯಕ್ತಿಕ ಪೇಸ್ಬುಕ್ ಪೇಜ್ನಲ್ಲಿ ತುಂಬಾ ಮನೋಜ್ಞವಾಗಿ ಮೋದಿ ಅವರ ಕುರಿತು ಸಂಸದ ಬಿ ವೈ ರಾಘವೇಂದ್ರ ತಮ್ಮ ಅನಸಿಕೆ ಹಂಚಿಕೊಂಡಿದ್ದಾರೆ. ಅದರ ಸಂಪೂಣ೯ ಸಾರ ಈ ಕೆಳಗಿನಂತಿದೆ.
ಸ್ವಾತಂತ್ರ್ಯ ಭಾರತ ಕಂಡ ಅಪ್ರತಿಮ ದಿಗ್ಗಜ ನಾಯಕ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷದ ಕೋಟ್ಯಾಂತರ ಕಾರ್ಯಕರ್ತರ ಹೆಮ್ಮೆಯ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
ಭಾರತ ದೇಶದ ಸನಾತನ ಹಿಂದೂ ಪರಂಪರೆಯ ಸಂಸ್ಕೃತಿ, ಸಂಪ್ರದಾಯ, ಆಚರಣೆಯ ಜಾಗತಿಕ ಮಟ್ಟದ ರಾಯಭಾರಿಗಳಾಗಿ ವಿಶ್ವವನ್ನೇ ತನ್ನತ್ತ ಸೆಳೆದ ಮಹಾನ್ ನಾಯಕರು ಪ್ರಧಾನಿ ಮೋದಿ ಅವರಾಗಿದ್ದಾರೆ.

ಭಾರತದ ಪ್ರತಿಯೊಂದು ರಂಗಗಳ ನೈಜ ಶಕ್ತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ ಅಗ್ರಗಣ್ಯ ಚಾಣಾಕ್ಷ, ತನ್ನ ಅಪ್ರತಿಮ ರಾಜನೀತಿಯ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿ, ವಿಶ್ವಗುರು ಸ್ಥಾನ ಅಲಂಕರಿಸಲು ಶ್ರಮಿಸಿದ ಮಹಾನ್ ಚೇತನ ಪ್ರಧಾನಿ ನರೇಂದ್ರ ಮೋದಿ ಅವರು.

ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತ ಸಾವಿರಾರು ಜನಪರ ಕಾಳಜಿಯ ನೂತನ ವಿನೂತನ ಯೋಜನೆಗಳನ್ನು ಜಾರಿಗೆ ತಂದು ಇತಿಹಾಸ ಪುಟಗಳಲ್ಲಿ ಮೇಳೈಸಲು ಅವಿರತ ಶ್ರಮಿಸುತ್ತಿರುವ ಮಹಾನ್ ಸಂತ ಪ್ರಧಾನಿ ಮೋದಿ ಈ ದೇಶ ಕಂಡ ಅಪ್ರತಿಮ ನಾಯಕರಾಗಿದ್ದಾರೆ.

ಮೂರನೇ ಅವಧಿಯಲ್ಲಿಯು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ದೇಶವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರಬಲವಾಗಲಿ, ದೇಶದ ಬಗೆಗಿನ ನಿಮ್ಮ ಪ್ರತಿಯೊಂದು ಅಶೋತ್ತರಗಳು ಪರಿಪೂರ್ಣವಾಗಲಿ, ಜನ ಸಾಮಾನ್ಯರೆಡೆಗಿನ ನಿಮ್ಮ ತುಡಿತಕ್ಕೆ ಭಗವಂತ ಮತ್ತಷ್ಟು ಅಗಾಧವಾದ ಶಕ್ತಿ ತುಂಬಲಿ ಎಂದು ಸಂಸದ ಬಿ ವೈ ರಾಘವೇಂದ್ರ ಹಾರೈಸಿದ್ದಾರೆ.
ದೇಶದ ಅಭ್ಯುದಯಕ್ಕಾಗಿ ಸಮಯದ ಎಲ್ಲೆ ಮೀರಿ ನಿಸ್ವಾರ್ಥ ಸೇವೆಯ ಮೂಲಕ ಶ್ರಮಿಸುತ್ತಿರುವ ನಿಮಗೆ ಮಗದಷ್ಟು ಜನಪರ ಕೆಲಸ ಮಾಡಲು ತಾಯಿ ಭಾರತಾಂಬೆ ಶಕ್ತಿ ನೀಡಿ ಆಯುಷ್ಯ ನೀಡಿ ಹರಸಲಿ ಎಂದು ವಿಶೇಷವಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.


