InternationalNationalPolitical

ಭಾರತದಲ್ಲಿ 7,000 ಕಿ.ಮೀ ಉದ್ದದ ಹೈ ಸ್ಪೀಡ್ ಬುಲೆಟ್ ರೈಲು-ಭಾರತ -ಜಪಾನ್ ಮಧ್ಯೆ ಪರಸ್ಪರ ಒಪ್ಪಂದ

'ಮೇಕ್ ಇನ್ ಇಂಡಿಯಾ' ಮೂಲಕ ಈ ಯೋಜನೆ ಅಭಿವೃದ್ಧಿ

ಟೋಕಿಯೋ (ಜಪಾನ): ಮುಂಬರುವ ದಿನಗಳಲ್ಲಿ ಭಾರತದಲ್ಲಿ 7,000 ಕಿ.ಮೀ ಉದ್ದದ ಹೈ ಸ್ಪೀಡ್ ಬುಲೆಟ್ ರೈಲು ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ಬುಲೆಟ್‌ ರೈಲು ಭಾರತ ಮತ್ತು ಜಪಾನ್ ನಡುವಿನ ಪ್ರಮುಖ ಯೋಜನೆಯಾಗಿದ್ದು, ಇದರ ಮುಂದುವರೆದ ಭಾಗವಾಗಿ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಜಪಾನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸ್ಥಳೀಯ ಪತ್ರಿಕೆಯೊಂದಿಗೆ ನೀಡಿದ ಸಂದಶ೯ನದಲ್ಲಿ ಈ ವಿಷಯ ತಿಳಿಸಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಮೂಲಕ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು . ನಮ್ಮ ಈ ಯೋಜನೆಯಲ್ಲಿ ಜಪಾನಿನ ಕಂಪನಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಸ್ವಾಗತಿಸುವದಾಗಿ ಹೇಳಿದರು.

ಹೈಸ್ಪೀಡ್ ರೈಲಿನ ಜೊತೆಗೆ ಬಂದರುಗಳು, ವಾಯುಯಾನ, ಹಡಗು ನಿರ್ಮಾಣ, ರಸ್ತೆ ಸಾರಿಗೆ, ರೈಲ್ವೆಗಳು ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಇತರ ಸಾರಿಗೆ ಕ್ಷೇತ್ರಗಳಲ್ಲು ಭಾರತ-ಜಪಾನ್ ಜಂಟಿಯಾಗಿ ಯೋಜನೆ ಮುನ್ನೆಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಜಪಾನ್‌ನ ತಾಂತ್ರಿಕ ಪ್ರಗತಿ, ಭಾರತದ ವಿಸ್ತಾರ, ಉತ್ಪಾದನೆ ಮತ್ತು ನಾವೀನ್ಯತೆ ಶಕ್ತಿಯೊದಿಗೆ ಸೇರಿ, ಎರಡೂ ದೇಶಗಳಿಗೆ ಅಪಾರ ಮೌಲ್ಯವನ್ನು ಸೃಷ್ಟಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button