ಎಸ್ಎಸ್ಎಲ್ಸಿ, ಪಿಯುಸಿ ತೇರ್ಗಡೆ ಅಂಕ ಇಳಿಕೆ-ಕಲಿಕಾ ಶ್ರಮ ಗುಣಮಟ್ಟಕ್ಕೆ ಎಳ್ಳು ನೀರು? ಏನು ಸಾಧಿಸಲು ಹೊರಟಿದೆ ಸರ್ಕಾರ? “ನ್ಯೂಇಂಡಿಯಾ ಕನ್ನಡ”ದಿಂದ ಸರಣಿ ಲೇಖನ ಆರಂಭ
ಮೊದಲೇ ಅಭ್ಯಾಸಕ್ಕೆ ಒತ್ತು ಕೊಡದ ಕೆಲ ವಿದ್ಯಾರ್ಥಿಗಳು ಪ್ರತಿಶತ 33 ಅಂಕ ಪಡೆದರೇ ಸಾಕು ಎಂಬ ಉಡಾಫೆಗೆ ಬೀಳುವುದು ಮಾತ್ರ ನಿಜ. ಸರ್ಕಾರದ ಈ ತಪ್ಪು ನಿರ್ಧಾರಕ್ಕೆ ಬಹುತೇಕರು ಮೌನ ಸಮ್ಮತಿ ಮೂಲಕ ದಡ್ಡತನ ಪ್ರದರ್ಶಿಸುತ್ತಿರುವಾಗಲೇ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಧ್ವನಿ ಎತ್ತಿದ್ದಾರೆ.

ಕೆಲ ಬೆರಳಣಿಕೆ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಹೊರಟಿರುವ ರಾಜ್ಯ ಸರ್ಕಾರ, ಎಸ್ಎಸ್ಎಲ್ಸಿ, ಪಿಯುಸಿ ತೇರ್ಗಡೆ ಅಂಕ ಶೇ ೩೩ ಕ್ಕೆ ಇಳಿಸಿದೆ. ಈ ಮೂಲಕ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನೆ ಬುಡಮೇಲು ಮಾಡಲು ಮುಂದಾಗಿರುವುದು ಮಾತ್ರ ಈಗ ಸ್ಪಷ್ಟಗೊಂಡಿದೆ.

ಮೊದಲೇ ಅಭ್ಯಾಸಕ್ಕೆ ಒತ್ತು ಕೊಡದ ಕೆಲ ವಿದ್ಯಾರ್ಥಿಗಳು ಪ್ರತಿಶತ 33 ಅಂಕ ಪಡೆದರೇ ಸಾಕು ಎಂಬ ಉಡಾಫೆಗೆ ಬೀಳುವುದು ಮಾತ್ರ ನಿಜ. ಸರ್ಕಾರದ ಈ ತಪ್ಪು ನಿರ್ಧಾರಕ್ಕೆ ಬಹುತೇಕರು ಮೌನ ಸಮ್ಮತಿ ಮೂಲಕ ದಡ್ಡತನ ಪ್ರದರ್ಶಿಸುತ್ತಿರುವಾಗಲೇ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಧ್ವನಿ ಎತ್ತಿದ್ದಾರೆ.

ಮಕ್ಕಳ ಮುಂದಿನ ಪ್ರಗತಿ ಕಲಿಕಾ ಸಾಮರ್ಥ್ಯ ಕುಸಿತಕ್ಕೆ ಕಾರಣವಾಗಲಿದೆಯೆಂದು ಆತಂಕ ವ್ಯಕ್ತಪಡಿಸಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮರುಪರೀಶಿಲನೆಗೆ ಒತ್ತಾಯಿಸಿದ್ದಾರೆ. ಇದರಿಂದ ಎಸ್ಎಸ್ಎಲ್ಸಿ, ಪಿಯುಸಿ ಅಂಕ ಇಳಿಕೆ ವಿಚಾರದ ಪರ ವಿರೋಧ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.

ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಎಸ್ಎಸ್ಎಲ್ಸಿ ಪಾಸಾದ ಬಳಿಕ ಪಿಯೂಸಿಗೆ ಸೇರಲು ಖಾಸಗಿ ಕಾಲೇಜುಗಳು ಕಟ್ ಆಫ್ ( ಕನಿಷ್ಠ ಮಾನದಂಡ) ಶೇ50, ಶೇ 60, ಎಂದು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಿವೆ.. ಆ ಮೂಲಕ ಮಕ್ಕಳಿಂದ ಹೆಚ್ಚಿನ ಕಲಿಕಾ ಸಾಮರ್ಥ್ಯ ನಿರೀಕ್ಷಿಸುತ್ತಿವೆ.

ಹೀಗಿರುವಾಗ ವಿದ್ಯಾರ್ಥಿಗಳು 33 ಅಂಕ ಗಳಿಸಿ ಪಾಸ್ ಆಗಿ ಅರ್ಹತೆ ಪಡೆದರೆ ಸಾಕೇ? ಪಿಯೂಸಿ ನಂತರ, ಸಿಇಟಿಯಂತಹ ಪ್ರವೇಶ ಪರೀಕ್ಷೆಗಳಲ್ಲಿ ಹೇಗೆ ಗುಣಮಟ್ಟದ ಸಾಧನೆ ತೋರಬಲ್ಲರು? ಅನ್ನೋ ಪ್ರಶ್ನೆಗಳು ಶಿಕ್ಷಣ ತಜ್ಞರ ವಲಯಗಳಿಂದ ಈಗ ಕೇಳಿಬಂದಿದೆ.

ಸಾವಿರ ಮಂದಿ ಸಿಇಟಿ ಬರೆಯಬೇಕಾದವರು ಇನ್ನು ಮುಂದೆ ಕನಿಷ್ಟ ಅಂಕ ಗಳಿಸಿದವರು ಸಹ ಸಾವಿರಗಟ್ಟಲೇ ಈ ಪರೀಕ್ಷೆಗೆ ಸೇರ್ಪಡೆಯಾಗುತ್ತಾರೆ. ಅಲ್ಲಿ ಒಂದೆರಡು ಅಂಕ ಕಡಿಮಯೆಯಾಗಿ ಅನರ್ಹರಾದರೇ ಖಿನ್ನತೆ , ಆತ್ಮಹತ್ಯೆ ಯಂತಹ ವಿಚಾರಗಳಿಗೆ ಒಳಗಾಗುತ್ತಾರೆ ಮಾತ್ರವಲ್ಲ. ಶೈಕ್ಷಣಿಕ ಕಳಪೆತನ ಸಾಧನಾ ಶೂನ್ಯತಾಭಾವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಲಿದೆ ಅನ್ನೋ ಆತಂಕ ಶಿಕ್ಷಣ ತಜ್ಞರದ್ದಾಗಿದೆ.

ಈ ಮಧ್ಯೆ ಕೇವಲ ಶೇ33 ಅಂಕ ಬಂದ್ರೆ ಸಾಕು ಅನ್ನೋ ಮನೋಭಾವ ಕಲಿಕಾ ಸಾಮರ್ಥ್ಯಕ್ಕೆ ಕೊಡಲಿಪೆಟ್ಟು ನೀಡಲಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಈಗ ಹೆಚ್ಚಾಗಿ ವ್ಯಕ್ತವಾಗುತ್ತಿದೆ.
“ನ್ಯೂ ಇಂಡಿಯಾ ಕನ್ನಡ ಡಿಜಿಟಲ್ ಪತ್ರಿಕೆ”ಯಿಂದ
“ಶಿಕ್ಷಣ ಗುಣಮಟ್ಟ ಉಳಿಸಿ” ವಿನೂತನ ಅಭಿಯಾನ
ನವೆಂಬರ್ ಎರಡರಿಂದ ಆರಂಭ

ಈ ಎಲ್ಲ ವಿಚಾರಗಳಿಗೆ ಸಂಬಂಧಪಟ್ಟಂತೇ ನ್ಯೂಇಂಡಿಯಾ ಕನ್ನಡ ಡಿಜಿಟಲ್ ಪತ್ರಿಕೆ ನವೆಂಬರ್ ಎರಡರಿಂದ “ಶಿಕ್ಷಣ ಉಳಿಸಿ, ಮಕ್ಕಳನ್ನು ರಕ್ಷಿಸಿ” ಹೆಸರಿನಲ್ಲಿ ವಿನೂತನ ಅಭಿಯಾನ ಆರಂಭಿಸಿದೆ. ಪರ ವಿರೋಧ ಮತ್ತು ಸರ್ಕಾರದ ನಿರ್ಧಾರದ ಬಗ್ಗೆ ಸರಣಿ ಲೇಖನ ಪ್ರಕಟಿಸಲಿದೆ. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞರ ಹಾಗೂ ಸಾರ್ವಜನಿಕರು ಮತ್ತು ಪರ ವಿರೋಧವಿರುವ ವ್ಯಕ್ತಿಗಳ ಹೇಳಿಕೆ, ಅಭಿಪ್ರಾಯಗಳನ್ನು ಸರಣಿ ಲೇಖನದ ಮೂಲಕ ತಮ್ಮ ಮುಂದೆ ಮುಂದಿಡಲಿದೆ.
ಮುಂದಿನ ಭಾಗದಲ್ಲಿ ನಿರೀಕ್ಷಿಸಿ:
ಶೈಕ್ಷಣಿಕ ತೇರ್ಗಡೆಗೆ ಇರುವ ಮಾನದಂಡ ಇಳಿಸಿದ್ರೆ ಆಗುವ ಅನಾಹುತಗಳೇನು? ಈ ಬಗ್ಗೆ ಶಿಕ್ಷಣ ತಜ್ಞರುಗಳು ಏನಂತಾರೆ ? ಎಂಬುದರ ಸಮಗ್ರ ಅಭಿಪ್ರಾಯಗಳನ್ನು ತಿಳಿಸಲಿದ್ದೇವೆ. ಸಾರ್ವಜನಿಕರು ಸಹ ತಮ್ಮ ಅಭಿಪ್ರಾಯಗಳನ್ನು ಬರೆದು ಕೆಳಗೆ ತಿಳಿಸಿರುವ ಈ ಮೇಲ್ ವಿಳಾಸಕ್ಕೆ ಕಳುಹಿಸಿದರೇ ಅದನ್ನು ಪ್ರಕಟಿಸಲಾಗುವುದು.
ವಿಶೇಷ ವರದಿ: ಸೌಮ್ಯ ರೆಡ್ಡಿ,
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ,
ಶಿವಮೊಗ್ಗ.
ನಮ್ಮ email: soumyareddy@newindiakannada.com


