Shivmaogga-Hindu ಮಹಾಸಭಾ ಗಣಪತಿ ಮೆರವಣಿಗೆ-ರಾಜಬೀದಿಯಲ್ಲಿ ಭಾರಿ ಜನಸ್ತೋಮ-ನೇರ ಪ್ರಸಾರ-LIVE
ಜಿಲ್ಲಾಡಳಿತ , ಪೋಲೀಸ್ ಇಲಾಖೆಯು ಸಮಥ೯ವಾಗಿ ಬಂದೋಬಸ್ತ ಮಾಡಿತ್ತು. 5 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತಾ ಕಾರ್ಯದಲ್ಲಿ ನಿಯುಕ್ತಿಗೊಳಿಸಿರುವ ಬಗ್ಗೆ ಮಾಹಿತಿಯನ್ನ ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಶಿವಮೊಗ್ಗದ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಇಂದು ಬೆಳಗ್ಗೆ ಆರಂಭಗೊಂಡಿದೆ. ಶನಿವಾರದಂದು ಬೆಳಗ್ಗೆ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ವಿಸರ್ಜನಾ ಮೆರವಣಿಗೆ ಕೋಟೆ ರಸ್ತೆಯ ಭೀಮೇಶ್ವರ ದೇವಾಲಯದಿಂದ ಆರಂಭಗೊಂಡಿತು, ಮೆರವಣಿಗೆಗೆ ಬಿಜೆಪಿ ಶಾಸಕ ಚನ್ನಬಸಪ್ಪ, ಗಣಪತಿ ಪಲ್ಲಕ್ಕಿ ಹೊತ್ತು ಭರ್ಜರಿ ಚಾಲನೆ ನೀಡಿದರು.
ಹಿಂದೂ ಸಂಘಟನಾ ಮಹಾಮಂಡಳಿಯ ಪಟ್ಟಾಭಿರಾಮ ಉಪಸ್ಥಿತರಿದ್ದರು. ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲು, ಭಾರಿ ಜನಸ್ತೋಮದ ನಡುವೆ ಮೆರವಣಿಗೆ ಸಾಗಿತು.
ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳ,ಹುಲಿಕುಣಿತ ಸೇರಿದಂತೆ ಹಲವು ಜಾನಪದ ಕಲಾ ತಂಡ ಭಾಗಿಯಾಗಿವೆ. ಪ್ರಮುಖ ವೃತ್ತಗಳು ಚಿತ್ತಾಕರ್ಷಕ ಕೇಸರಿಬಣ್ಣಗಳಿಂದ, ಅಲಂಕಾರಗಳಿಂದ, ಕಂಗೊಳಿಸಿದವು.

ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ , ಪೋಲೀಸ್ ಇಲಾಖೆಯು ಸಮಥ೯ವಾಗಿ ಬಂದೋಬಸ್ತ ಮಾಡಿತ್ತು. 5 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತಾ ಕಾರ್ಯದಲ್ಲಿ ನಿಯುಕ್ತಿಗೊಳಿಸಿರುವ ಬಗ್ಗೆ ಮಾಹಿತಿಯನ್ನ ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇನ್ನು ಶುಕ್ರವಾರದಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ,ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಒಟ್ಟಾಗಿ ಕೋಟೆರಸ್ತೆಯ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಿಸಿರುವ ಹಿಂದೂ ಮಹಾಸಭಾ ಗಣಪತಿ ದರ್ಶನ ಪಡೆದು ಸಿದ್ದತೆ ತಯಾರಿ ಕುರಿತ ಮಾಹಿತಿ ಪಡೆದರು. ಈ ವೇಳೆ ಶಾಸಕ ಚೆನ್ನಬಸಪ್ಪ ಜೊತೆಗಿದ್ದರು.
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನಲೆ ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕ ಸಂದೇಶ ಹೊಸಪರಿಕಲ್ಪನೆಯ ಮಹಾದ್ವಾರ ನಿರ್ಮಾಣ, ಅಲಂಕಾರ, ಗಮನ ಸೆಳೆಯುವ ಪ್ಲೆಕ್ಸ್ ಅಳವಡಿಕೆ ಸೇರಿ ಜನರ ಪಾಲ್ಗೊಳ್ಳುವಿಕೆ ಸಂಭ್ರಮ ಹೆಚ್ಚಿಸುವಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಸಾಕಷ್ಟು ಶ್ರಮ ವಹಿಸಿರುವುದು ಎದ್ದು ಕಾಣುತ್ತಿದೆ.
ವೃತ್ತಗಳಲ್ಲಿ ಹೊಸಪರಿಕಲ್ಪನೆಯ ಮಹಾದ್ವಾರ ನಿರ್ಮಾಣ

ಪ್ರತಿ ಬಾರಿ ಹೊಸ ಪರಿಕಲ್ಪನೆಯ ಮಹಾದ್ವಾರ ನಿರ್ಮಾಣ ಮಾಡುವುದು ಇಲ್ಲಿನ ವಿಶೇಷ. ಈ ಬಾರಿ ಗಾಂಧಿ ಬಜಾರಿನ ಶಿವಪ್ಪನಾಯಕ ವೃತ್ತದ ಬಳಿ ಸುರ ಅಸುರರು ಅಮೃತಕ್ಕಾಗಿ ನಡೆಸುವ ಸಮುದ್ರಮಂಥನ , ಕೋಲಾಹಲ ಕುಡಿಯುವ ಶಿವನ ಕಥಾನಕ ವಿವರಿಸುವ ಮಹಾದ್ವಾರ ರೂಪುಗೊಂಡಿದೆ. ಎಲ್ಲ ಕಲಾಕೃತಿಗಳೂ ಕೂಡ ಕಲಾವಿದ ಜೀವನ್ ಕೈಚಳಕದಲ್ಲಿ ಮೂಡಿದ್ದು, ನಗರದ ಜನರನ್ನ ತನ್ನತ್ತ ಆಕರ್ಷಿಸುತ್ತಿದೆ.

ಅಮೀರ್ ಅಮರ್ ವೃತ್ತದಲ್ಲಿ ಆಪರೇಶನ್ ಸಿಂಧೂರದ ಮಹತ್ವ ಸಾರುವ ದ್ವಾರ ನಿಮಾ೯ಣ ಮಾಡಲಾಗಿದೆ. ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗುವ ಕ್ಷಿಪಣಿಗಳಾದ ಬ್ರಹ್ಮೋಸ್, ತೇಜಸ್ , ಸುಖೋಯ್ ಚಿತ್ರಗಳನ್ನೊಂಡ ಮಹಾದ್ವಾರ ರಚಿಸಲಾಗಿದೆ.
ಬಿ ಹೆಚ್ ರಸ್ತೆಯಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ಪರಿಕಲ್ಪನೆ ಮತ್ತು ಪೂಜ್ಯ ಖಾವಂದರಾದ ಶ್ರೀ ವೀರಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸುವ ,ಧರ್ಮಸ್ಥಳ ಗೌರವಿಸುವ ಪ್ರತೀಕವಾಗಿ ಈ ದ್ವಾರ ನಿರ್ಮಿಸಲಾಗಿದೆ ಎಂದು ಕೇಸರಿ ಹಿಂದೂ ಅಲಂಕಾರ ಸಮಿತಿ ಅಧ್ಯಕ್ಷ ನಾಗರಾಜ್ ನ್ಯೂ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಇನ್ನು ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣಪತಿ ಚೌತಿಯಿಂದ ಅನಂತಚತುರ್ದಶಿಗೆ ವಿಸರ್ಜನೆಯಾಗುವುದೇ ಇದರ ವಿಶೇಷ. 1947ರಿಂದ ಗಣೇಶನ ಮೂರ್ತಿಯನ್ನು ನಂಜುಂಡಸ್ವಾಮಿ ಕುಟುಂಬದವರೇ ತಯಾರಿಸುತ್ತಿದ್ದು,
ಮೂರನೇ ತಲೆಮಾರು ಮೂರ್ತಿಯ ಮೂಲ ರೂಪದಲ್ಲಿ ಅಂದಿನಿಂದ ಇಂದಿನವರೆಗೂ ಅದೇ ಗುಣಮಟ್ಟ ವಿನ್ಯಾಸ ಕಾಪಾಡಿಕೊಂಡು ಬಂದಿರುವುದು ವಿಶೇಷ.
81ನೇ ವರ್ಷಕ್ಕೆ ಕಾಲಿಟ್ಟಿರುವ ಈ ಬಾರಿಯ ಮೆರವಣಿಗೆಯಲ್ಲಿ ಶಿವಮೊಗ್ಗದ ಬೇರೆ ಜಿಲ್ಲೆಗಳಿಂದಲೂ ಜನ ಆಗಮಿಸಿದ್ದರು. ವರ್ಷದಿಂದ ವರ್ಷಕ್ಕೆ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.

8 ಬಗೆಯ ವೈವಿಧ್ಯಮಯ ಕಲಾಮೇಳಗಳ ತಂಡ ಭಾಗವಹಿಸಿದ್ದು, ರಾಜಬೀದಿ ಮೆರವಣಿಗೆಗೆ ಮತ್ತಷ್ಟು ರಂಗುನೀಡಲಿದೆ.
ಬೆಳಗ್ಗೆ ಆರಂಭಗೊಂಡಿರುವ ವಿಸರ್ಜನಾ ಪೂರ್ವ ಮೆರವಣಿಗೆ ಆರಂಭಗೊಳ್ಳಲಿದ್ದು ಭೀಮೇಶ್ವರ ದೇವಸ್ಥಾನದಿಂದ ಹೊರಟು ಎಸ್ಪಿ ರೋಡ್ ,ರಾಮಣ್ಣ ಶ್ರೇಷ್ಟಿ ಪಾರ್ಕ್ , ಗಾಂಧೀಬಜಾರ್ , ನೆಹರೂ ರಸ್ತೆ , ದುರ್ಗಿಗುಡಿ ಸೇರಿದಂತೆ, ಪ್ರಮುಖ ಮಾರ್ಗಗಳಲ್ಲಿ ಸಾಗಿ ಮರುದಿನ ಬೆಳಗಿನ ಜಾವ ಭೀಮೇಶ್ವರ ದೇವಾಲಯದ ಹಿಂಭಾಗದ ತುಂಗಾನದಿ ಭೀಮನ ಮಡುವಿನಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನೆರವೇರಲಿದೆ.

ವಿಸಜ೯ನಾ ಸ್ಥಳದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ. ಇನ್ನು ಶನಿವಾರದ ಬೆಳಗ್ಗೆಯಿಂದ ವಿಸಜ೯ನೆ ತನಕ ನ್ಯೂ ಇಂಡಿಯಾ ಕನ್ನಡ ವತಿಯಿಂದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಲಕ್ಷಾಂತರ ಜನರು ಮನೆಯಲ್ಲಿಯೇ ಕುಳಿತು ರಾಜಬೀದಿಯ ಉತ್ಸವ ಕಣ್ತುಂಬಿಕೊಂಡರು. ನೇರ ಪ್ರಸಾರಕ್ಕೆ ಸಹಕರಿಸಿದ ಶಿವಮೊಗ್ಗದ ನಮ್ಮ ಟಿವಿಯ ಮುಖ್ಯಸ್ಥ ಜಗದೀಶ್ ಅವರಿಗೆ ನ್ಯೂಇಂಡಿಯಾ ಕನ್ನಡ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಮುಖ್ಯಸ್ಥರು,
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ



