Dakshina KannadaDistrictShivamogga

Sansad Khel Mahoatsav-2025, ನೋಂದಣಿ ಪ್ರಕ್ರಿಯೆಗೆ ಬೈಂದೂರನಲ್ಲಿ ಚಾಲನೆ ಕೊಟ್ಟ ಸಂಸದ B Y Raghvendra

ಗ್ರಾಮೀಣ ಕ್ರೀಡಾಪ್ರತಿಭೆಗೆ ವೇದಿಕೆ ಒದಗಿಸುವುದು " ಸಂಸದ್ ಖೇಲ್ ಮಹೋತ್ಸವ" ಉದ್ದೇಶ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.

ಕೇಂದ್ರ ಕ್ರೀಡಾಪ್ರಾಧಿಕಾರ ಮತ್ತು ರಾಜ್ಯ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಸಹಯೋಗದಲ್ಲಿ
ಸೆ.21 ರಿಂದ ಡಿಸೆಂಬರ್ 25ರ ವರೆಗೆ ಮೂರು ಹಂತದಲ್ಲಿ ಸಂಸದ್ ಖೇಲ್ ಮಹೋತ್ಸವ ನಡೆಯಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.

“ಸಂಸದ್ ಖೇಲ್ ಮಹೋತ್ಸವ್-2025” ನೋಂದಣಿ ಪ್ರಕ್ರಿಯೆಗೆ ಮಂಗಳವಾರದಂದು ಉಡುಪಿ ಜಿಲ್ಲೆ ಬೈಂದೂರು ಸೇರಿ ಶಿವಮೊಗ್ಗದ 8 ತಾಲ್ಲೂಕುಗಳು ಸೇರಿ ಸಂಸತ್ ಖೇಲ್ ಮಹೋತ್ಸವದ ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, 2030ಕ್ಕೆ ಭಾರತದ ಗುಜರಾತ್ ನಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟ ನಡೆಯಲಿದೆ .

2036 ಕ್ಕೆ ಭಾರತದಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಸಲು ಪ್ರಸ್ತಾವನೆ ಇಡಲಾಗಿದೆ ಗ್ರಾಮೀಣ ಕ್ರೀಡಾಪ್ರತಿಭೆಗೆ ವೇದಿಕೆ ಒದಗಿಸುವುದು ” ಸಂಸದ್ ಖೇಲ್ ಮಹೋತ್ಸವ” ಉದ್ದೇಶ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಈಗಾಗಲೇ ಪೋರ್ಟಲ್ಗೆ ಚಾಲನೆ ಸಿಕ್ಕಿದ್ದು ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು 18 ವರ್ಷ ಮೇಲ್ಪಟ್ಟ ಆಸಕ್ತ ಕ್ರೀಡಾಪಟುಗಳು, ಸೆಪ್ಟೆಂಬರ್ 20 ರವರೆಗೂ ಹೆಸರು ನೊಂದಣಿ ಮಾಡಿಕೊಳ್ಳಬಹುದು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.

ಸಂಸದ್ ಖೇಲ್ ಮಹೋತ್ಸವದ ಕ್ರೀಡೆಗಳು ಗ್ರಾಮೀಣ ವಿಭಾಗ, ತಾಲೂಕು, ಜಿಲ್ಲಾ ಹಂತದಲ್ಲಿ ನಡೆಯಲಿದೆ..ಸಾಂಪ್ರದಾಯಿಕ ಕ್ರೀಡೆಗಳು ,ಗುಂಪುಕ್ರೀಡೆಗಳು ವಿವಿಧ ವಿಭಾಗಗಳಿವೆ..ಆಫ್ ಲೈನ್ ಹಾಗೂ ಆನ್ ಲೈನ್ ನೊಂದಣಿಗೆ ಅವಕಾಶವಿದ್ದು, ಯುವ ಜನತೆ ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಸಂಸದ ರಾಘವೇಂದ್ರ ಮನವಿ ಮಾಡಿದರು.

Leave a Reply

Your email address will not be published. Required fields are marked *

Back to top button