DistrictKarnatakaNationalPoliticalShivamoggaSpecial Stories
Trending

ಶಿವಮೊಗ್ಗ: ಪ್ರೆಸ್ ಟ್ರಸ್ಟ್ ಆಡಳಿತ ನಿಯಂತ್ರಿಸುವ ಅಧಿಕಾರ ಜಿಲ್ಲಾಡಳಿತಕ್ಕಿಲ್ಲ-ನೈಜ ಪತ್ರಕರ್ತರಿಗೆ ಮಾತ್ರ ಪತ್ರಿಕಾ ಭವನ ಮೀಸಲು-ಅಧ್ಯಕ್ಷ ಎನ್ ಮಂಜುನಾಥ್

ತನಿಖೆ ನಡೆಸಿದ್ದ ನ್ಯಾ ರವೀಂದ್ರನಾಥ್, ಪತ್ರಿಕಾ ಭವನ ನಿರ್ವಹಣೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನದ್ದೇ ಆಗಿರುತ್ತದೆ ಹಾಗೂ ರಾಜ್ಯ ಉಚ್ಚ ನ್ಯಾಯಾಲಯವು ನೀಡಿದ್ದ ಆದೇಶದಂತೆ ಪ್ರೆಸ್ ಟ್ರಸ್ಟ್ ನ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಜಿಲ್ಲಾಧಿಕಾರಿ ಅವರಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ ಮಂಜುನಾಥ್ ಹೇಳಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ವಹಣೆ ವಿಚಾರವಾಗಿ ಜಿಲ್ಲಾಡಳಿತ ಹಸ್ತಕ್ಷೇಪ ಮಾಡಲು ಅಥವಾ ನಿಯಂತ್ರಿಸುವ ಅಧಿಕಾರ ಹೊಂದಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಿಡುಗಡೆ ಮಾಡಿರುವ ಪತ್ರದಲ್ಲಿ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ಅಂತಿಮ ತೆರೆ ಎಳೆದಿದ್ದಾರೆ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ ಮಂಜುನಾಥ್ ಹೇಳಿದ್ದಾರೆ

ಬುಧವಾರದಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್ ವಿರುದ್ದ ಅರ್ಜಿದಾರರು ನೀಡಿದ ದೂರಿನನ್ವಯ ಸಮಗ್ರ ವಿಚಾರಣೆ ನಡೆಸಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪ್ರೆಸ್ ಟ್ರಸ್ಟ್ ನ ದೈನಂದಿನ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಜಿಲ್ಲಾಡಳಿತಕ್ಕೆ ಅವಕಾಶವಿರುವದಿಲ್ಲ ಹಾಗು ಅರ್ಜಿದಾರರು ಕೋರಿದಂತೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಜಿಲ್ಲಾಡಳಿತದ ಅಧೀಕಾರ ವ್ಯಾಪ್ತಿಯಲ್ಲಿ ಬರುವದಿಲ್ಲ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾನೂನಿನ ಪ್ರಕಾರ ನಿಯಮಾನುಸಾರ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದು ಅಧ್ಯಕ್ಷ ಎನ್ ಮಂಜುನಾಥ್ ಹೇಳಿದ್ದಾರೆ. ಪತ್ರಿಕೆಯನ್ನೆ ನಡೆಸದ ಕೆಲ ವ್ಯಕ್ತಿಗಳು ಪತ್ರಿಕಾ ಭವನ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

2009 ರಲ್ಲಿ ಆಗಿನ ಸಿಎಂ ಬಿ ಎಸ್ ಯಡಿಯೂರಪ್ಪನವರು ಪ್ರೆಸ್ ಟ್ರಸ್ಟ್ ಗೆ ನಿವೇಶನ ನೀಡಿದ್ದು, ಬಳಿಕ ಸರ್ಕಾರದ ಅನುದಾನದಲ್ಲಿ ಪತ್ರಿಕಾ ಭವನ ನಿರ್ಮಾಣಗೊಂಡಿದೆ. ಪ್ರೆಸ್ ಟ್ರಸ್ಟ್ ನಿರ್ವಹಣೆಯಲ್ಲಿ ನಡೆಯುತ್ತಿರುವ ಪತ್ರಿಕಾ ಭವನ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಅವರು ಹೇಳಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ವಿರುದ್ದ ತನಿಖೆ ನಡೆಸಬೇಕೆಂದು ಹಾಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಸಂಘಟನೆಯೊಂದು ಜಿಲ್ಲಾಧಿಕಾರಿಗೆ ಅವರಿಗೆ ದೂರು ನೀಡಿತ್ತು. ಅದರನ್ವಯ ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ತನಿಖೆ ನಡೆಸಿದ್ದ ನ್ಯಾ ರವೀಂದ್ರನಾಥ್, ಪತ್ರಿಕಾ ಭವನ ನಿರ್ವಹಣೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನದ್ದೇ ಆಗಿರುತ್ತದೆ ಹಾಗೂ ರಾಜ್ಯ ಉಚ್ಚ ನ್ಯಾಯಾಲಯವು ನೀಡಿದ್ದ ಆದೇಶದಂತೆ ಪ್ರೆಸ್ ಟ್ರಸ್ಟ್ ನ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಜಿಲ್ಲಾಧಿಕಾರಿ ಅವರಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ ಮಂಜುನಾಥ್ ಹೇಳಿದ್ದಾರೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾಲ ಕಾಲಕ್ಕೆ ಸಭೆ, ಆಡಿಟ್ ಅನ್ನು ಕ್ರಮಬದ್ಧವಾಗಿ ಮಾಡುತ್ತಿದೆ. ಅಲ್ಲದೇ ಸೇವಾ ಶುಲ್ಕವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ನೀಡಿದ್ದಾರೆ ಎಂದು ಎನ್ ಮಂಜುನಾಥ್ ತಿಳಿಸಿದರು.

ಪ್ರೆಸ್ ಟ್ರಸ್ಟ್ ನ ನಿಯಮಾವಳಿ ಪ್ರಕಾರ ಹಾಗೂ ವಾರ್ತಾ ಇಲಾಖೆಯ ನಿಯಮಗಳ ಅನುಸಾರ ದೈನಂದಿನ ಪತ್ರಿಕಾಗೋಷ್ಠಿಗಳಿಗೆ ಯಾರಿಗೆಲ್ಲ ಅವಕಾಶವಿದೆ ಎಂದು ನಿಯಮ ರೂಪಿಸಲಾಗಿದೆ ಎಂದು ಹೇಳಿರುವ ಎನ್ ಮಂಜುನಾಥ್, ನಿಯಮಿತವಾಗಿ ಪ್ರಕಟವಾಗುವ ಪತ್ರಿಕೆಗಳ ಪ್ರತಿನಿಧಿಗಳು, ರಾಜ್ಯಮಟ್ಟದ ದಿನಪತ್ರಿಕೆಗಳು ಸೇರಿದಂತೆ ದೃರ್ಶಯ ಮಾಧ್ಯಮದ ಪ್ರತಿನಿಧಿಗಳು ಸೇರಿದಂತೆ ಕಾರ್ಯನಿರತ ಅಧಿಕೃತ ನೈಜ ಪತ್ರಕರ್ತರಿಗೆ ಪತ್ರಿಕಾಭವನಕ್ಕೆ ಪ್ರವೇಶವಿದೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಚೇರಿ ಹಾಗೂ ಪತ್ರಿಕಾ ಭವನ ವಿರುವ ಕಟ್ಟಡ

ನೈಜ ಪತ್ರಕರ್ತರಿಗೆ ಗುರುತಿನ ಚೀಟಿ ನೀಡಲಾಗುವುದು. ಇನ್ನು ಮುಂದೆ ಅನಧಿಕೃತ ಹಾಗೂ ಉದ್ಯಮದ ಹೆಸರಿನಲ್ಲಿ ಅಕ್ರಮ ಕೆಲಸ ಮಾಡುವವರಿಗೆ ಪತ್ರಿಕಾ ಭವನದಲ್ಲಿ ಪ್ರವೇಶವಿರುವದಿಲ್ಲ ಎಂದು ಎನ್ ಮಂಜುನಾಥ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ನ ಪದಾಧಿಕಾರಿಗಳಾದ ಜೇಸುದಾಸ್, ನಾಗರಾಜ್ ನೇರಿಗೆ, ಗೋಪಾಲ್ ಯಡಗೆರೆ, ರಾಮಚಂದ್ರ ಗುಣಾರಿ, ಹಿರಿಯ ಪತ್ರಕರ್ತ ಹುಲಿಮನೆ ತಿಮ್ಮಪ್ಪ, ಅರಗ ರವಿ, ವಿ ಸಿ ಪ್ರಸನ್ನ, ಗಜೇಂದ್ರಸ್ವಾಮಿ, ಪದ್ಮನಾಭ, ಪಿ ಸಿ ನಾಗರಾಜ್, ಹೊನ್ನಾಳಿ ಚಂದ್ರಶೇಖರ್, ನಾಗರಾಜ್ ಸೇರಿದಂತೆ ಅನೇಕ ಪತ್ರಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Back to top button