ಸಾಹಸಸಿಂಹ ಡಾ.ವಿಷ್ಣುವರ್ಧನ್ ಇನ್ನು “ಕನಾ೯ಟಕ ರತ್ನ” ಬಿ.ಸರೋಜದೇವಿಗೂ ಮರಣೋತ್ತರ ಪ್ರಶಸ್ತಿ-ಸಿಎಂ ಘೋಷಣೆ-
ಗುರುವಾರದಂದು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀಮಾ೯ನ ಕೈಗೊಳ್ಳಲಾಗಿದೆ.

ಡಾ.ರಾಜ್ಕುಮಾರ್ ಅವರ ನಂತರ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯಂತ ಪ್ರಸಿದ್ದ ಹಾಗೂ ಜನಪ್ರಿಯ ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ “ಕನಾ೯ಟಕ ರತ್ನ” ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರದಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀಮಾ೯ನ ಕೈಗೊಳ್ಳಲಾಗಿದೆ.

ಅದೇ ರೀತಿ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅವರಿಗೂ ಸಹ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ಸಂಪುಟ ಸಭೆಯಲ್ಲಿ ತೀಮಾ೯ನಿಸಲಾಗಿದೆ.
ವಿಷ್ಣು ಅಭಿಮಾನಿಗಳ ದಶಕದ ಬೇಡಿಕೆಗೆ ಸಿಕ್ಕಿತು ಫಲ..

ವಿಷ್ಣುವರ್ಧನ್ 1972 ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು” ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ನಟಿಸಿದ್ದ ಆ ಚಿತ್ರವು ಆಗಿನ ಕಾಲದಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು.
ಅಲ್ಲಿಂದ ದೊಡ್ಡ ಅಭಿಮಾನಿಗಳನ್ನ ಸೃಷ್ಟಿಸಿಕೊಂಡು ಬರೋಬ್ಬರಿ 220 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿ ಅಭಿಮಾನಿಗಳ ಹೃದಯದಲ್ಲಿ ಸಾಹಸಸಿಂಹನಾಗಿ ಇಂದಿಗೂ ಜೀವಂತವಾಗಿದ್ದಾರೆ.
2005 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸಾಹಸ ಸಿಂಹ ವಿಷ್ಣುವರ್ಧನ್ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕನ್ನಡ ಮಾತ್ರವಲ್ಲದೇ ತೆಲುಗು ತಮಿಳು, ತಮಿಳು ಮಲೆಯಾಳಂ ಹಿಂದಿ ಭಾಷೆಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು.
ಅಭಿನಯ ಸರಸ್ವತಿಗೂ ಕನಾ೯ಟಕ ರತ್ನ ಪ್ರಶಸ್ತಿ

ಹಿರಿಯ ನಟಿ ಸರೋಜಾದೇವಿ ಒಂದುಕಾಲದಲ್ಲಿ ಕನ್ನಡ ಚಿತ್ರರಂಗದ ಬೆಳ್ಳಿತೆರೆಯನ್ನು ಆವರಿಸಿಕೊಂಡು ಅಭಿನಯ ಸರಸ್ವತಿಯೆಂದು ಗುರುತಿಸಿಕೊಂಡಿದ್ದಾರೆ.
ಸರಿಸುಮಾರು 200 ಚಿತ್ರಗಳಲ್ಲಿ ನಟಿಸಿರುವ ಬಿ ಸರೋಜಾದೇವಿ ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ ಭಾರತ ಸರ್ಕಾರ ನೀಡುವ ಜೀವ ಮಾನ ಸಾಧನ ಪ್ರಶಸ್ತಿಗಳನ್ನ ತಮ್ಮ ಮುಡಿಗೇರಿಸಿಕೊಂಡಿರೋದು ಸರೋಜಾದೇವಿಯವರ ಗರಿಮೆ ಎನ್ನಬಹುದು..ಇದೀಗ ಮರಣೋತ್ತರ ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ.



