ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಚಾಲನೆ-ಅಕ್ಟೋಬರ್ 2 ರವರೆಗೆ ವಿವಿಧ ಬಗೆಯ ದಸರಾ ಕಾರ್ಯಕ್ರಮ
ಮಹಾನಗರ ಪಾಲಿಕೆ ಆವರಣದಿಂದ ಬೆಳಗ್ಗೆ ಚೌಡೇಶ್ವರಿ ದೇವಿಯ ಬೆಳ್ಳಿ ಮೂತಿ೯ಯನ್ನು ಕೋಟೆ ರಸ್ತೆಯಲ್ಲಿರುವ ಚಂಡಿಕಾ ದುಗಾ೯ಪರಮೇಶ್ವರಿ ದೇವಾಲಯದವರಗೆ ಭವ್ಯ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ಅದ್ದೂರಿ ದಸರಾ ಮಹೋತ್ಸವಕ್ಕೆ ಸೋಮವಾರದಂದು ನಿವೃತ್ತ ಲೆಪ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಚಾಲನೆ ನೀಡಿದರು.

ಮಹಾನಗರ ಪಾಲಿಕೆ ಆವರಣದಿಂದ ಬೆಳಗ್ಗೆ ಚೌಡೇಶ್ವರಿ ದೇವಿಯ ಬೆಳ್ಳಿ ಮೂತಿ೯ಯನ್ನು ಕೋಟೆ ರಸ್ತೆಯಲ್ಲಿರುವ ಚಂಡಿಕಾ ದುಗಾ೯ಪರಮೇಶ್ವರಿ ದೇವಾಲಯದವರಗೆ ಭವ್ಯ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಾಯಿತು.
ಬಳಿಕ ನಡೆದ ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದ ನಿವೃತ್ತ ಲೆಪ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು, ಅನ್ಯಾಯ ಅಧರ್ಮ ಎಷ್ಟೇ ಬಲಶಾಲಿಯಾಗಿದ್ರೂ ಸತ್ಯ ಧರ್ಮದ ಮುಂದೆ ಯಾವತ್ತಿಗೂ ದುರ್ಬಲ ಎಂದು ಹೇಳಿದರು. ದಸರಾ ಹಬ್ಬ ಅಂದ್ರೆ, ಕೇವಲ ರಜೆ ಮನೋರಂಜನೆಯಲ್ಲ, ಪಾಠಶಾಲೆಯಿದ್ದಂತೆ. ಶಿಸ್ತನ್ನ ಕಲಿಸುವ ಜೊತೆಗೆ ನಾಟಕ,ಕಲೆ, ಸಾಹಿತ್ಯ ಕ್ರೀಡೆ ಎಲ್ಲದರಲ್ಲೂ ಭಾಗಹಿಸಲು ಪ್ರೇರೇಪಿಸುವ ವೇದಿಕೆ ಎಂದು ಅಭಿಪ್ರಾಯಪಟ್ಟರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಚೆನ್ನಬಸಪ್ಪ, ಡಾ.ಧನಂಜಯ್ ಸರ್ಜಿ, ಡಿಎಸ್ ಅರುಣ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, , ಮಾಜಿ ನಗರಾಸಭಾ ಸದಸ್ಯ ಯೋಗಿಶ್ , ವಿವಿಧ ದಸರಾ ಸಮಿತಿಯ ಮುಖಂಡರು ಹಾಗು ಸಾವ೯ಜನಿಕರು ಭಾಗಿಯಾಗಿದ್ದರು. ಅಕ್ಟೋಬರ್ 2 ರವರೆಗೆ ವಿವಿಧ ಬಗೆಯ ದಸರಾ ಕಾರ್ಯಕ್ರಮಗಳು ನಡೆಯಲಿದ್ದು, ಚಲಚಿತ್ರ ನಟರು ಹಾಗು ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಲಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ


