DistrictKarnatakaPoliticalShivamoggaSpecial Stories

Yediyurappa- CKR -45 ಅಂಬಾಸಿಡರ್‌ ಕಾರ್‌ನಲ್ಲಿ ವಿಜಯೀಂದ್ರ ಸಂಚಾರ-ಇದು‌ ಸಂಘಟನೆಗೆ ಶ್ರಮಿಸಿದ‌ “ಕಮಲ ರಥ” -B Y Vijayeendra

ಈ ಕಾರು ತಂದೆಯವರ ರಾಜಕೀಯ ಜೀವನದಲ್ಲಿ ಭಾವನಾತ್ಮಕ ಮೈಲಿಗಲ್ಲು. ಬೈಸಿಕಲ್, ಎತ್ತಿನಗಾಡಿ, ಸರ್ಕಾರಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಊರೂರು ಸುತ್ತಿ ಪಕ್ಷ ಸಂಘಟನೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಬಿಎಸ್‌ವೈ ಅವರು ಬಹಳ ಕಷ್ಟಪಟ್ಟು 1988 ರಲ್ಲಿ ಈ ಕಾರನ್ನು ಖರೀದಿಸಿದ್ದರು.

ಬೈಸಿಕಲ್, ಎತ್ತಿನಗಾಡಿ, ಸರ್ಕಾರಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಊರೂರು ಸುತ್ತಿ ಪಕ್ಷ ಸಂಘಟನೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಬಿಎಸ್ ಯಡಿಯೂರಪ್ಪ, ಕನಾ೯ಟಕ ಕಂಡ ಅಗಾಧ ಶಕ್ತಿಯುಳ್ಳ ರಾಜಕೀಯ ನಾಯಕ. ಈ ಮಾತನ್ನು ಸ್ವತಃ ಅವರ ರಾಜಕೀಯ ವಿರೋಧಿಗಳು ಸಹ ಒಪ್ಪಿಕೊಳ್ಳುತ್ತಾರೆ. ಯಡಿಯೂರಪ್ಪನವರ ಅಗಾಧ ಸಂಘಟನಾ ಶಕ್ತಿಗೆ ಬಿಜೆಪಿ ಕೇಂದ್ರ ನಾಯಕರು ಇವತ್ತಿಗೂ ತಲೆದೂಗುತ್ತಾರೆ.

ವಯಸ್ಸು 80 ಆಗಿದ್ದರೂ ಇವತ್ತಿಗೂ ರಾಜ್ಯ ಬಿಜೆಪಿಯಲ್ಲಿ ಕೊಂಚ ಬದಲಾವಣೆ ಆಗಬೇಕಿದ್ದರೂ ಬಿಎಸ್‌ವೈ ಅವರ ಮಾತೇ ಅಂತಿಮ. ವಿಶೇಷ ಅಂದರೇ, ಯಡಿಯೂರಪ್ಪನವರ ಮಾತನ್ನು ಬಿಜೆಪಿ ಹೈಕಮಾಂಡ ಇವತ್ತಿಗೂ ತಳ್ಳಿ ಹಾಕದಿರುವದು ಅವರ ಕನಾ೯ಟಕದಲ್ಲಿ ಅವರ ರಾಜಕೀಯ ಹಿಡಿತ ಎಂತಹುದು ಎಂಬುದು ಮಾತ್ರ ಗಮನಾಹ೯.

ಇಷ್ಟೆಲ್ಲ ಪೀಠಿಕೆ. ಈಗ ಯಾಕೆ ಅಂತ ಈ ಸುದ್ದಿಯನ್ನು ಒದುತ್ತಿರುವವರಿಗೆ ಅನ್ನಿಸಬಹುದು. ಇದಕ್ಕೆ ಕಾರಣವಿಷ್ಟೇ. ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೀಂದ್ರ, ಬುಧವಾರದಂದು ತಮ್ಮ ತಂದೆಯವರ ಪ್ರಾಮಾಣಿಕ ಹೋರಾಟವನ್ನು ನೆನೆದು ಭಾವುಕರಾಗಿ, ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರಹದ ಮೂಲಕ ಸುದೀಘ೯ ವಿಚಾರವನ್ನು ಹಂಚಿಕೊಂಡಿದ್ದಾರೆ.

ಬಿ ವೈ ವಿಜಯೀಂದ್ರ ಅವರು ತಮ್ಮ ತಂದೆ ಕಷ್ಟಪಟ್ಟು ಖರೀಧಿಸಿದ ಅಂಬಾಸಿಡರ್‌ ಕಾರ್‌ನಲ್ಲಿ ಸಂಚರಿಸಿದ ವೇಳೆ ಭಾವುಕರಾಗಿ ಆ ನಂತರ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಕಟಿಸಿರುವ ವಿಷಯವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಏಕೆಂದರೆ ಈ ಕಾರು ತಂದೆಯವರ ರಾಜಕೀಯ ಜೀವನದಲ್ಲಿ ಭಾವನಾತ್ಮಕ ಮೈಲಿಗಲ್ಲು. ಬೈಸಿಕಲ್, ಎತ್ತಿನಗಾಡಿ, ಸರ್ಕಾರಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಊರೂರು ಸುತ್ತಿ ಪಕ್ಷ ಸಂಘಟನೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಬಿಎಸ್‌ವೈ ಅವರು ಬಹಳ ಕಷ್ಟಪಟ್ಟು 1988 ರಲ್ಲಿ ಈ ಕಾರನ್ನು ಖರೀದಿಸಿದ್ದರು.

ಈ ಕಾರು ತಂದೆಯವರ ರಾಜಕೀಯ ಜೀವನದ ಸುದೀರ್ಘ ಪಯಣದ ಸಾಕ್ಷಿಯಷ್ಟೇ ಆಗಲಿಲ್ಲ, ನೂರಾರು ಸಂಘಟಕರನ್ನು, ಸಾವಿರಾರು ಕಾರ್ಯಕರ್ತರನ್ನು ಹೊತ್ತೊಯ್ದು ರಾಜ್ಯಾದ್ಯಂತ ಪ್ರಯಾಣಿಸಿ, ಇಂದು ಹೆಮ್ಮರವಾಗಿ ಬೆಳೆದಿರುವ ಭಾರತೀಯ ಜನತಾ ಪಾರ್ಟಿಯ ಸಂಘಟನೆಗೆ ತನ್ನ ಶ್ರಮದ ಶಕ್ತಿಯನ್ನು ಸಮರ್ಪಿಸಿದ ‘ಕಮಲ ರಥ’ವಾಗಿದೆ.

ಕಾರ್ಯಕರ್ತರು ಹಾಗೂ ಬಿಎಸ್‌ವೈ ಅವರ ನಡುವಿನ ಬಾಂಧವ್ಯದ ಕೊಂಡಿಯಂತೆ ಈ ಕಾರು ದಶಕಗಳಿಗೂ ಹೆಚ್ಚಿನ ಕಾಲ ತನ್ನ ಸೇವೆಯನ್ನು ಸಮರ್ಪಿಸಿದೆ. ಬಿಎಸ್‌ವೈ ಅವರ ಪ್ರತಿ ಚುನಾವಣೆಯಲ್ಲಿ ಕಮಲವನ್ನು ಅರಳಿಸಿ, ವಿಜಯದ ನಗೆ ಬೀರಿ ಸಂಚರಿಸಿದೆ.

ಈ ಕಾರಣಕ್ಕಾಗಿಯೇ ಬಿಎಸ್ವೈ ಅವರು CKR-45 ಅಂಬಾಸಿಡರ್ ಅನ್ನು ಕುಟುಂಬ ಸದಸ್ಯನಂತೆ ಈ ಕ್ಷಣಕ್ಕೂ ಪ್ರೀತಿಸುತ್ತಾರೆ, ಅದರ ದ್ಯೋತಕವಾಗಿ ನೆನಪಾದಾಗಲೆಲ್ಲ ಇದರಲ್ಲಿ ಪಯಣಿಸುತ್ತಾರೆ.

CKR -45 ನಮ್ಮ ಕುಟುಂಬದ ಸದಸ್ಯ ಮಾತ್ರವಲ್ಲ, ಬಿಜೆಪಿಯ ಒಬ್ಬ ಹಿರಿಯ ಕಾರ್ಯಕರ್ತನೂ ಹೌದೆನ್ನುವುದು ಶಿಕಾರಿಪುರದ ಹಿರಿಯ ಕಾರ್ಯಕರ್ತರ ಅಭಿಮತ. ಈ ಹಿನ್ನೆಲೆಯ ಪ್ರೇರಣೆ CKR-45 ನನ್ನಲ್ಲೂ ಭಾವನಾತ್ಮಕ ಸಂಬಂಧ ಬೆಸೆಯಲು ಕಾರಣವಾಗಿದೆ.

ಇದರ ಪ್ರತೀಕವಾಗಿ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರಲ್ಲಿ ಬಾಂಧವ್ಯದ ಬೆಸುಗೆ ಸ್ಥಿರವಾಗಿ ಉಳಿಸಲು ಇಂದಿಗೂ,ಮುಂದೆಯೂ CKR-45 ಶಿಕಾರಿಪುರದ ಪ್ರತಿ ರಸ್ತೆಗಳಲ್ಲಿ ಆಗಾಗ ಸಂಚರಿಸಲಿದೆ. ಹಳೆಯ ನೆನಪುಗಳನ್ನೊತ್ತು ಬಿಎಸ್‌ವೈ ಅವರ ಪರಿಶ್ರಮ ಹಾಗೂ ಜನರೊಂದಿಗಿನ ಭಾವನಾತ್ಮಕ ಸಂಬಂಧದ ಕೊಂಡಿಯಾಗಿ ನಮ್ಮೊಂದಿಗೆ ದೀರ್ಘ ಕಾಲ ಜತೆಗಿರಲಿದೆ.

CKR-45 ಬಿಜೆಪಿ-ಬಿಎಸ್‌ವೈ ಹಾಗೂ ಕಾರ್ಯಕರ್ತರ ನಡುವಿನ ಐತಿಹಾಸಿಕ ಹೆಜ್ಜೆಯ ಗುರುತಾಗಿ ಉಳಿದಿದೆ. CKR -45 ಗೆ ನಿಮ್ಮ ಪ್ರೀತಿಯ ಹಾರೈಕೆಯಿರಲಿ, ಅದರ ಪ್ರೇರಣೆಯ ಸ್ಪರ್ಶ ಪಡೆಯುತ್ತಿರುವ ನನಗೆ ನಿಮ್ಮ ಆಶೀರ್ವಾದವಿರಲಿ.

——————————————

Leave a Reply

Your email address will not be published. Required fields are marked *

Back to top button