CrimeDistrictShivamogga

Shivmogga: ಆಸ್ತಿ ವಿಚಾರಕ್ಕೆ ಬಡಿದಾಟ, ಜಾತಿನಿಂದನೆ ಮಾಡಿದ್ದ ನಾಲ್ವರಿಗೆ ಎರಡು ವರುಷ ಕಾರಾಗೃಹ ಶಿಕ್ಷೆ-ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪು

ತಾಲೂಕಿನ ಆನವೇರಿ ಗ್ರಾಮದ ಕುರುಬರ ಬೀದಿಯ ನಿವಾಸಿಗಳಾದ ರಾಜಪ್ಪ ಈ ಬಿ (51), ಭರತ್ ಈ ಆರ್ (20), ರಂಗನಾಥ್ ಯಾನೆ ರಂಗೇಶ್ (34) ಹಾಗೂ ಹನುಮಂತಪ್ಪ (53) ಕಾರಾಗೃಹ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ.

ಆಸ್ತಿಯ ವಿಚಾರವಾಗಿ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಲ್ಲದೇ ಜಾತಿ ನಿಂದನೆ ಮಾಡಿದ ಆರೋಪಕ್ಕೆ ಒಳಗಾಗಿದ್ದ ನಾಲ್ವರಿಗೆ ಎರಡು ವರುಷ ಕಠಿಣ ಶಿಕ್ಷೆ ವಿಧಿಸಿ ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ತಾಲೂಕಿನ ಆನವೇರಿ ಗ್ರಾಮದ ಕುರುಬರ ಬೀದಿಯ ನಿವಾಸಿಗಳಾದ ರಾಜಪ್ಪ ಈ ಬಿ (51), ಭರತ್ ಈ ಆರ್ (20), ರಂಗನಾಥ್ ಯಾನೆ ರಂಗೇಶ್ (34) ಹಾಗೂ ಹನುಮಂತಪ್ಪ (53) ಕಾರಾಗೃಹ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ.

ಕಾರಾಗೃಹ ಶಿಕ್ಷೆಯ ಜೊತೆಗೆ 77,000 ರೂ. ದಂಡ ವಿಧಿಸಲಾಗಿದ್ದು, ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 1 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ದಂಡ ಮೊತ್ತದಲ್ಲಿ 2 ಲಕ್ಷ ರೂ.ಗಳನ್ನು ನೊಂದವರಿಗೆ ನೀಡುವಂತೆ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು. ಕಳೆದ 13-11-2022 ರಂದು ಭದ್ರಾವತಿಯ ಆನವೇರಿ ಗ್ರಾಮದ ತಿಮ್ಮಪ್ಪರವರೊಂದಿಗೆ ಆಸ್ತಿಯ ವಿಚಾರವಾಗಿ ಪ್ರಸ್ತುತ ಶಿಕ್ಷೆಗೊಳಗಾದ ನಾಲ್ವರು ವ್ಯಕ್ತಿಗಳು ಜಗಳ ಮಾಡಿದ್ದಲ್ಲದೇ ತಿಮ್ಮಪ್ಪ ಅವರ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಪಟ್ಟಂತೇ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆಗಿನ ಎಎಸ್ಪಿ ಜೀತೇಂದ್ರ ಕುಮಾರ ದಯಾಮ ಪ್ರಕರಣದ ತನಿಖೆ ನಡೆಸಿದ್ದರು.

Leave a Reply

Your email address will not be published. Required fields are marked *

Back to top button