11 ನೇ ಸಿಪಿಎ ಭಾರತ ಪ್ರದೇಶ ಸಮ್ಮೇಳನBengaluru UrbanDistrictKarnatakaNationalPoliticalSpecial Stories

11ನೇ ಕಾಮನ್ವೆಲ್ತ್ ಸಂಸದೀಯ ಸಂಘ-ಭಾರತ ವಿಭಾಗದ ೩ ದಿನಗಳ ಸಮ್ಮೇಳನಕ್ಕೆ ತೆರೆ

2025 ರ ಸೆಪ್ಟೆಂಬರ್ 11 ರಿಂದ 13 ರವರೆಗೆ ಆಯೋಜಿಸಲಾಗಿದ್ದ ಈ ಸಮ್ಮೇಳನವು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆದಿದೆ.

ಶಾಸನ ಸಭೆಗಳಲ್ಲಿ ಚರ್ಚೆ ಮತ್ತು ಸಂವಾದ, ಜನರ ವಿಶ್ವಾಸವನ್ನು ಬೆಳೆಸುವುದು, ಜನರ ಆಕಾಂಕ್ಷೆಗಳನ್ನು ಈಡೇರಿಸುವುದು” ವಿಷಯದ ಮೇಲೆ ಇದೇ ಮೊದಲ ಬಾರಿಗೆ ಕರ್ನಾಟಕದ ಬೆಂಗಳೂರಿನಲ್ಲಿ ನಡೆದ 11ನೇ ಕಾಮನ್ವೆಲ್ತ್ ಸಂಸದೀಯ ಸಂಘ-ಭಾರತ ವಿಭಾಗದ ಮೂರು ದಿನಗಳ ಸಮ್ಮೇಳನಕ್ಕೆ ಶನಿವಾರದಂದು ತೆರೆಬಿದ್ದಿದೆ.

ಕರ್ನಾಟಕ ವಿಧಾನಮಂಡಲವು 11ನೇ ಕಾಮನ್ವೆಲ್ತ್ ಸಂಸದೀಯ ಸಂಘ ಭಾರತ ವಿಭಾಗ ಸಮ್ಮೇಳನ’ವನ್ನು ಆಯೋಜಿಸಿತ್ತು. 2025 ರ ಸೆಪ್ಟೆಂಬರ್ 11 ರಿಂದ 13 ರವರೆಗೆ ಆಯೋಜಿಸಲಾಗಿದ್ದ ಈ ಸಮ್ಮೇಳನವು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆದಿದೆ.

ಮೂರು ದಿನಗಳ ಈ ಸಮ್ಮೇಳನವನ್ನು ಗುರುವಾರ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಉದ್ಘಾಟಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಸಮ್ಮೇಳನ ಕುರಿತು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರೇ ಸಂಪೂರ್ಣ ಮಾಹಿತಿ ನೀಡಿದರು. ಈ ಮೂರು ದಿನಗಳ ಸಮ್ಮೇಳನವು ಅತ್ಯಂತ ಉಪಯುಕ್ತವೆಂದು ಸಾಬೀತಾಯಿತು ಮತ್ತು ಅದರ ಕಾರ್ಯಸೂಚಿಯನ್ನು ವ್ಯಾಪಕವಾಗಿ ಚರ್ಚಿಸಲಾಯಿತು.

26 ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 45 ಶಾಸನ ಸಭಾಧ್ಯಕ್ಷರು (ನಾಲ್ವರು ವಿಧಾನ ಪರಿಷತ್ತಿನ ಸಭಾಪತಿಗಳು, 22 ಮಂದಿ ವಿಧಾನಸಭೆಯ ಅಧ್ಯಕ್ಷರು. ಮೂವರು ಉಪಸಭಾಪತಿಗಳು ಮತ್ತು 16 ಮಂದಿ ಉಪಸಭಾಧ್ಯಕ್ಷರು) ಇದರಲ್ಲಿ ಭಾಗವಹಿಸಿದ್ದರು.

ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಸಮ್ಮೇಳನದಾದ್ಯಂತ ಉಪಸ್ಥಿತರಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಭಾಧ್ಯಕ್ಷರು ಮತ್ತು ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಸಲ್ ಕುಮಾರ್ ಸಿಂಗ್ ಕೂಡ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ವಿಧಾನಸಭಾಧ್ಯಕ್ಷ ಯು ಟಿ ಖಾದರ್‌ ಅವರನ್ನು ವಿಧಾನಪರಿಷತ ಸಭಾಪತಿ ಬಸವರಾಜ್‌ ಹೊರಟ್ಟಿ ಸನ್ಮಾನಿಸಿದರು. ಸಭಾಪತಿಯವರ ವಿಶೇಷ ಕತ೯ವ್ಯಾಧಿಕಾರಿ ಡಾ.ಮಹೇಶ್‌ ವಾಳ್ವೆಕರ್‌ ಉಪಸ್ಥಿತರಿದ್ದರು.

ಸಾರ್ವಜನಿಕರ ವಿಶ್ವಾಸವನ್ನು ಬೆಳೆಸುವುದು, ಸಾರ್ವಜನಿಕರ ಆಕಾಂಕ್ಷೆಗಳನ್ನು ಈಡೇರಿಸುವುದು” ಎಂಬ ವಿಷಯದ ಮೇಲೆ ಸಮಗ್ರ ಅಧಿವೇಶನ ನಡೆಯಿತು. ಅಧಿವೇಶನದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸನಸಭೆಗಳ 37 ಸಭಾಧಕ್ಷರು ಫಲಫ್ರದ ಚರ್ಚೆಗಳಲ್ಲಿ ಭಾಗವಹಿಸಿದರು. ಶಾಸನಸಭೆಗಳ ಅತ್ಯುತ್ತಮ ಅಭ್ಯಾಸಗಳು ಮತ್ತು ನಾವೀನ್ಯತೆಗಳನ್ನು ಹಂಚಿಕೊಂಡರು.

ಸಿಪಿಎ ಅನ್ನು 1911 ರಲ್ಲಿ ಎಂಪೈರ್ ಪಾರ್ಲಿಮೆಂಟರಿ ಅಸೋಸಿಯೇಷನ್ ಎಂದು ಸ್ಥಾಪಿಸಲಾಯಿತು. ಮತ್ತು 1949 ರಲ್ಲಿ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ) ಎಂದು ಮರುನಾಮಕರಣ ಮಾಡಲಾಯಿತು. ಇದು 180 ಕ್ಕೂ ಹೆಚ್ಚು ಶಾಸನಸಭೆಗಳನ್ನು ಒಳಗೊಂಡಿದೆ ಮತ್ತು ಒಂಬತ್ತು ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ, ಬ್ರಿಟಿಷ್ ದ್ವೀಪಗಳು ಮತ್ತು ಮೆಡಿಟರೇನಿಯನ್, ಕೆನಡಾ, ಕರಿಬಿಯನ್-ಅಮೇರಿಕಾ-ಆಟಾಂಟಿಕ್, ಭಾರತ, ಪೆಸಿಫಿಕ್ ಮತ್ತು ಆಗ್ನೇಯ ಏಷ್ಯಾ ದೇಶಗಳನ್ನು ಒಳಗೊಂಡಿದೆ.

ಭಾರತವು ಸಿಪಿಎಯ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ. ಸಿಪಿಎ ಇಂಡಿಯಾ ವಿಭಾಗವು 9 ವಲಯಗಳನ್ನು ಒಳಗೊಂಡಿದೆ. ಇದು ಲೋಕಸಭೆ, ರಾಜ್ಯಸಭೆ ಮತ್ತು 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ/ಪರಿಷತ್ತುಗಳನ್ನು ಒಳಗೊಂಡಿದೆ. ಈ ವಿಭಾಗವನ್ನು ಹಿಂದಿನ ಸಿಪಿಎ ಏಷ್ಯಾ ವಿಭಾಗದಿಂದ ಬೇರ್ಪಡಿಸಿ 2004 ರಲ್ಲಿ ರಚಿಸಲಾಯಿತು. ಕಳೆದ ವರ್ಷ ಸಿಪಿಎ ಇಂಡಿಯಾ ವಿಭಾಗ ಸಮ್ಮೇಳನವನ್ನು ನವದೆಹಲಿಯಲ್ಲಿ ನಡೆಸಲಾಗಿತ್ತು.

ಈ ಮೊದಲು ಈ ಸಮ್ಮೇಳನವನ್ನು 2023 ರಲ್ಲಿ ರಾಜಸ್ಥಾನದಲ್ಲಿ ನಡೆಸಲಾಗಿತ್ತು ಮತ್ತು ಈಗ ಮೊದಲ ಬಾರಿಗೆ ಕರ್ನಾಟಕದಲ್ಲಿ ಆಯೋಜಿಸಲಾಗಿದೆ. ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ) ಎಂಬುದು ಕಾಮನ್ವೆಲ್ತ್ ರಾಷ್ಟ್ರಗಳ (ಸಿಡಬ್ಲ್ಯುಎ) ಸಂಸದರನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ಸಂಘಟನೆಯಾಗಿದೆ.

ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವುದು, ಉತ್ತಮ ಆಡಳಿತ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಉತ್ತೇಜಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಸಿಪಿಎ ಭಾರತ ವಿಭಾಗದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳು ಮತ್ತು ಪರಿಷತ್ತುಗಳ ಸಕ್ರಿಯ ಭಾಗವಹಿಸುವಿಕೆಯು ಈ ವೇದಿಕೆಯ ಬಲವನ್ನು ಎತ್ತಿ ಹಿಡಿಯುತ್ತದೆ.

ಈ ಸಿಪಿಎ ಭಾರತ ವಿಭಾಗ ಸಮ್ಮೇಳನವು ಭಾರತದ ಪ್ರಜಾಪ್ರಭುತ್ವವು ಸಂಸತ್ತಿಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸನ ಸಭೆಗಳು ಸಹ ಅದರ ಅವಿಭಾಜ್ಯ ಅಂಗವಾಗಿವೆ. ಎಂಬುದನ್ನು ತೋರಿಸುತ್ತದೆ. ‌

ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ಪರಸ್ಪರ ಕಲಿತಾಗ, ಇಡೀ ಪ್ರಜಾಪ್ರಭುತ್ವ ರಚನೆಯು ಬಲಗೊಳ್ಳುತ್ತದೆ. ಈ ಸಮ್ಮೇಳನವು ಸಹಕಾರಿ ಒಕ್ಕೂಟ ವ್ಯವಸ್ಥೆ ಮತ್ತು ಅಂತರ-ಶಾಸಕಾಂಗ ಸಹಕಾರ ಮತ್ತು ಸಂವಾದದ ಜ್ವಲಂತ ಉದಾಹರಣೆಯಾಗಿದೆ.

Leave a Reply

Your email address will not be published. Required fields are marked *

Back to top button